ಬಳ್ಳಾರಿ

ಸ್ಲಂ ಜನರಿಗೆ ಬದುಕು ರೂಪಿಸಿಕೊಡಿ: ನರಸಿಂಹಮೂರ್ತಿ

Published On :

ಹೊಸಪೇಟೆ: ಸ್ಲಂ ಜನರಿಗೆ ಘನತೆಯಿಂದ ಬದುಕುವ ವಾತಾವರಣ ನಿರ್ಮಿಸಬೇಕು ಎಂದು ಕರ್ನಾಟಕ ಸ್ಲಂ ಜನಾಂದೋಲನ ರಾಜ್ಯ ಕಾರ್ಯದರ್ಶಿ ಎ. ನರಸಿಂಹಮೂರ್ತಿ ಹೇಳಿದರು.
ನಗರದಲ್ಲಿ ಸ್ಲಂ ಜನಜಾಗೃತಿ ಆಂದೋಲನ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನಗರ ಭೂಮಿಯಲ್ಲಿ ಸ್ಲಂ ಜನರಿಗೆ ಪಾಲು, ಹೊಸ ಸ್ಲಂಗಳ ಘೋಷಣೆ ಹಾಗೂ ಆಧಾರ್ ಕಾರ್ಡ್ ಹಿಂಪಡೆಯಬೇಕು, ಸ್ಥಳೀಯ ಸಂಸ್ಥೆಗಳು ಅಭಿವೃದ್ಧಿ ಕರದಲ್ಲಿ ಶೇ. 25ರಷ್ಟು ಹಣವನ್ನು ಸ್ಲಂ ಬೆಳವಣಿಗೆಗೆ ವಿನಿಯೋಗಿಸಬೇಕೆಂಬ ಬೇಡಿಕೆಗಳೊಂದಿಗೆ ಅ. 28ರಂದು ಪ್ರತಿಭಟನೆ ನಡೆಸಲು ಯೋಜಿಸಲಾಗಿದೆ. ಅಂಬೇಡ್ಕರ್ ಸಮಾನತೆ ಆಶಯವನ್ನು ನನಸುಗೊಳಿಸುವ ದಿಶೆಯಲ್ಲಿ ಸ್ಲಂ ಜನಾಂದೋಲನ ಸಮಿತಿ ರೂಪಗೊಂಡಿದ್ದು, ಇದರ ಆಶಯವನ್ನು ಅರ್ಥ ಮಾಡಿಕೊಂಡು ತಾರತಮ್ಯ ನಿವಾರಣೆಗೆ ಸಂಘಟಿತ ಹೋರಾಟ ಅಗತ್ಯವಾಗಿದೆ ಎಂದರು.
ಸಮಿತಿಯ ಕಾನೂನು ಸಲಹೆಗಾರ್ತಿ ಸುನಂದಾ ಮಾತನಾಡಿ, ಕಾನೂನು ನೆರವು ಪಡೆದು ಹೋರಾಟ ರೂಪಿಸಬೇಕು. ಕಾನೂನು ನೆರವು ಪಡೆಯುವ ಮೂಲಕ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದರು. ಸಮಿತಿಯ ರಾಜ್ಯ ಸಂಚಾಲಕ ರಾಮಚಂದ್ರ, ಸಂಚಾಲಕಿ ಹುಲಿಗೆಮ್ಮ, ಸಮಿತಿ ಅಧ್ಯಕ್ಷ ಪಿ. ಸುನೀಲ್, ಮಹಿಳಾ ಘಟಕ ಅಧ್ಯಕ್ಷೆ ಮೈಮುನ್ನೀಸ, ಗೌರವಾಧ್ಯಕ್ಷ ಹುಸೇನ್‌ಸಾಬ್, ಸಂಪತ್‌ಬಾಯಿ, ವಿರೂಪಾಕ್ಷ, ಸಮಿತಿ ಸಂಚಾಲಕ ಎಂ. ಹನುಮಂತರಾಯ್ ಮತ್ತು ಸದಸ್ಯರು, ಪದಾಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.