ಮೂಢ ನಂಬಿಕೆಗಳ ವಿರೋಧಿ ಜಾರಿಗೆ ತನ್ನಿ
ಹಗರಿಬೊಮ್ಮನಹಳ್ಳಿ: ಮೂಢ ನಂಬಿಕೆಗಳ ವಿರೋಧಿ ಕಾನೂನು ರಚನೆ ಮತ್ತು ಶೀಘ್ರ ಜಾರಿಗೆ ಒತ್ತಾಯಿಸಿ ಭಾರತ ಜ್ಞಾನ ವಿಜ್ಞಾನ ಸಮಿತಿ ಕಾರ್ಯಕರ್ತರು ಶುಕ್ರವಾರ ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು. ಮೂಢ ನಂಬಿಕೆ, ವಾಮಾಚಾರ, ನರಬಲಿ, ಮಾಟಮಂತ್ರ ಮುಂತಾದ ಅನಿಷ್ಟ ಪದ್ಧತಿಗಳಿಂದ ಮುಗ್ಧ ಜನರನ್ನು ನಿರಂತರವಾಗಿ ಶೋಷಣೆ ಮಾಡುವುದು ಮುಂದುವರಿದಿದೆ. ಇಂತಹ ಅನಿಷ್ಟ ಪದ್ಧತಿಗಳಿಂದ ಜನತೆಯನ್ನು ವಂಚಿಸುವುದನ್ನು ತಡೆಯಲು ರಾಜ್ಯ ಸರ್ಕಾರ ಕೂಡಲೇ ಮೂಢ ನಂಬಿಕೆ ವಿರೋಧಿ ಶಾಸನ ರಚಿಸಿ, ಜಾರಿಗೆ ತರಬೇಕು ಎಂದು ಆಗ್ರಹಿಸಿರುವ ಮನವಿ ಪತ್ರವನ್ನು ಕಾರ್ಯಕರ್ತರು ತಹಸೀಲ್ದಾರ್ಗೆ ಸಲ್ಲಿಸಿದರು.ಪ್ರಸ್ತುತ ರಾಜ್ಯ ಸರ್ಕಾರ ಮೂಢ ನಂಬಿಕೆ ವಿರೋಧಿ ಕಾನೂನು ರಚನೆಗೆ ಮುಂದಾಗಿರುವುದನ್ನು ಸಮಿತಿ ಸ್ವಾಗತಿಸುತ್ತದೆ. ಅತಿ ಶೀಘ್ರವೇ ಈ ಕಾರ್ಯವನ್ನು ಪೂರ್ಣಗೊಳಿಸಬೇಕು ಮತ್ತು ಅದು ಅದಷ್ಟು ಬೇಗ ಜಾರಿಯಾಗುವಂತೆ ಕ್ರಮವಹಿಸಲು ಸರ್ಕಾರ ಮುಂದಾಗಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು. ಸಮಿತಿ ಅಧ್ಯಕ್ಷ ಮುಸ್ತಾಕ್ ಆಹ್ಮದ್, ಕಾರ್ಯದರ್ಶಿ ಎ. ನಾಗರಾಜ, ಬಿ. ಕೊಟ್ರಪ್ಪ, ರಾಮಣ್ಣ, ಗುರು ಬಸವರಾಜ, ಬಿ.ಜಿ. ಬಡಿಗೇರ್, ಬಿಷ್ಠಪ್ಪಯ್ಯ, ಗೋಣಿ ಬಸಪ್ಪ, ರಮೇಶ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

