ಬಳ್ಳಾರಿ

ವಿಷ ಕುಡಿಸಿ ಮಹಿಳೆ ಕೊಲೆ: ದೂರು

Published On :

ಹೊಸಪೇಟೆ: ಮಹಿಳೆಗೆ ಕಿರುಕುಳ ನೀಡಿ ವಿಷ ಕುಡಿಸಿ ಕೊಲೆ ಮಾಡಿದ ಪ್ರಕರಣ ನಗರದ ಪೊಲೀಸ್ ಠಾಣೆಯಲ್ಲಿ ಶನಿವಾರ ದಾಖಲಾಗಿದೆ. ಸ್ಥಳೀಯ ಚಲುವಾದಿ ಕೇರಿ ನಿವಾಸಿ ಗಂಗಮ್ಮ (20) ಕೊಲೆಗೀಡಾದ ಮಹಿಳೆಯಾಗಿದ್ದಾಳೆ.  ಸ್ಥಳೀಯ ನಿವಾಸಿ ರುದ್ರೇಶ್ ಜತೆಗೆ ಮೂರು ವರ್ಷಗಳ ಹಿಂದೆ ಗಂಗಮ್ಮಳ ವಿವಾಹವಾಗಿತ್ತು. ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು. ಅ. 24ರಂದು ಗಂಗಮ್ಮಳಿಗೆ ಗಂಡ ರುದ್ರೇಶ್ ಸೇರಿದಂತೆ ಕುಟುಂಬದ ನಾಲ್ವರು ವಿಷ ಕುಡಿಸಿ ಕೊಲೆ ಮಾಡಿದ್ದಾರೆ ಎಂದು ಗಂಗಮ್ಮನ ಸಹೋದರ ಹುಲಿಗೇಶ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅ. 24ರಂದು ಗಂಗಮ್ಮ ನಗರದ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾಳೆ. ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅ. 25ರಂದು ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸಪೇಟೆ: ಮನೆ ಬೀಗ ಮುರಿದು ಕಳ್ಳತನ
ಹೊಸಪೇಟೆ: ಬೀಗ ಮುರಿದು ಮನೆಯಲ್ಲಿದ್ದ ಸುಮಾರು ರು. 2.72 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ಸೇರಿದಂತೆ ನಗದನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ನಗರದ ರೇಲ್ವೆ ನಿಲ್ದಾಣದ ವಸತಿ ಗೃಹದಲ್ಲಿ ಶುಕ್ರವಾರ ನಡೆದಿದೆ. ರೇಲ್ವೆ ಇಲಾಖೆ ನೌಕರ ಮಲ್ಲಿಕಾರ್ಜುನ ಎಂಬುವರ ಮನೆಯಲ್ಲಿ ಕಳ್ಳತನವಾಗಿದ್ದು, ಮನೆಗೆ ಬೀಗ ಹಾಕಿಕೊಂಡು ಬೇರೆ ಊರಿಗೆ ಹೋದಾಗ ಈ ಘಟನೆ ನಡೆದಿದೆ. ಮನೆಯಲ್ಲಿದ್ದ ರು. 1.90 ಲಕ್ಷ ಮೌಲ್ಯದ 95 ಗ್ರಾಂ ಬಂಗಾರದ ಆಭರಣಗಳು, ರು. 80 ಸಾವಿರ ನಗದು, ಮೂರು ಎಟಿಎಂ ಕಾರ್ಡ್ಗಳು, ಸುಮಾರು ರು. 2 ಸಾವಿರ ಮೌಲ್ಯದ ಒಂದು ಮೊಬೈಲ್, 15 ಗ್ರಾಂ ಬೆಳ್ಳಿ ಆಭರಣ ಸೇರಿದಂತೆ ಒಟ್ಟು ರು. 2,72,600 ಮೌಲ್ಯದ ವಸ್ತುಗಳು ಹಾಗೂ ನಗದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.