ಕೊಟ್ಟೂರಲ್ಲಿ ಭಾರಿ ಮಳೆ: ಸಂಚಾರ ಅಸ್ತವ್ಯಸ್ತ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಅ. 27
ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನದಿಂದ ಸಂಜೆಯವರೆಗೂ ಜೋರಾದ ಮಳೆ ಸುರಿದ ಪರಿಣಾಮ ಹಲವು ಪ್ರದೇಶಗಳು ಜಲಾವೃತಗೊಂಡಿದ್ದಲ್ಲದೆ, ಜನಜೀವನ ಅಸ್ತವ್ಯಸ್ತಗೊಳ್ಳುವಂತಾಯಿತು.
ಮಳೆ ಆರ್ಭಟ ನಿರಂತರ ಮುಂದುವರಿದಿದ್ದರಿಂದ ಪಟ್ಟಣದ ಚರಂಡಿಗಳಲ್ಲಿ ನೀರು ತುಂಬಿ ರಸ್ತೆ ಮೇಲೆಲ್ಲಾ ಪ್ರವಾಹೋಪಾದಿಯಲ್ಲಿ ಹರಿಯಿತು. ಚರಂಡಿಯ ತ್ಯಾಜ್ಯ ವಸ್ತುಗಳೆಲ್ಲ ರಸ್ತೆ ಮೇಲೆ ಹರಿದು ಸಂಪೂರ್ಣ ಹೊಲಸು ವಾತಾವರಣ ನಿರ್ಮಾಣವಾಗಿದೆ.
ಎತ್ತರ ಪ್ರದೇಶದಿಂದ ಹರಿದು ಬಂದ ನೀರು ತಗ್ಗು ಪ್ರದೇಶದಲ್ಲಿರುವ ಬಸ್ ಸ್ಟ್ಯಾಂಡ್ ಪ್ರದೇಶದಲ್ಲಿ ಶೇಖರಣೆಯಾಯಿತು. ಬಸ್ ನಿಲ್ದಾಣದಲ್ಲಿ ಮೊಣಕಾಲು ವರೆಗೆ ನೀರು ತುಂಬಿ ಕೆರೆಯಂತಾಗಿತ್ತು. ಅದೇ ನೀರಿನಲ್ಲಿ ಬಸ್ಗಳು ಸಂಚರಿಸಿದರೆ ಪ್ರಯಾಣಿಕರು ಪರದಾಡುವಂತಾಯಿತು.
ರೈತರ ಸಂಕಷ್ಟ: 3-4 ದಿನಗಳಿಂದ ಮಳೆ ಒಂದೇ ಸಮನೆ ಸುರಿಯತೊಡಗಿದ್ದು ರೈತರನ್ನು ಚಿಂತೆಗೀಡು ಮಾಡಿದೆ. ಈರುಳ್ಳಿ, ಶೇಂಗಾ, ಟೊಮೆಟೋ ಬೆಳೆಗಳು ಮಳೆಯ ಅವಾಂತರದಿಂದಾಗಿ ನಷ್ಟ ಅನುಭವಿಸುವ ಹಂತ ತಲುಪಿದೆ. ಈರುಳ್ಳಿಗೆ ಉತ್ತಮ ದರ ಬಂದಾಗಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಟ್ಟೂರು ಸುತ್ತಮುತ್ತಲಿನ ಕೆ. ಅಯ್ಯನಹಳ್ಳಿ, ಚಪ್ಪರಹದಳ್ಳಿ, ಹರಾಳು, ಮತ್ತಿಹಳ್ಳಿ, ಮೈದೂರು, ಗೌರೀಪುರ ಮತ್ತಿತರೆಡೆ ರೈತರು ಈರುಳ್ಳಿ ಬೆಳೆದಿದ್ದು, ಪ್ರತಿ ದಿನ ಹತ್ತಾರು ಲಾರಿಗಳಲ್ಲಿ ಈರುಳ್ಳಿಯನ್ನು ಬೆಂಗಳೂರು ಮಾರುಕಟ್ಟೆಗೆ ಕೊಂಡೊಯ್ಯತೊಡಗಿದ್ದಾರೆ. ಈ ಮಧ್ಯೆ ಸತತ ಮಳೆಯಾಗುತ್ತಿರುವ ರೈತರಲ್ಲಿ ಆತಂಕ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

