ರಾಜಕೀಯ ಪ್ರಾತಿನಿಧ್ಯದಿಂದ ಬೇಡಿಕೆ ಈಡೇರಿಕೆ: ರೆಡ್ಡಿ
ಹಗರಿಬೊಮ್ಮನಹಳ್ಳಿ: ರಾಜ್ಯ ವಿಧಾನಸಭೆಯಲ್ಲಿ ಕಮ್ಮವಾರಿ ಜನಾಂಗದ ಶಾಸಕರ ಪ್ರಾತಿನಿಧ್ಯ ಕ್ಷೀಣಿಸಿದ್ದು, ಸಮಾಜದ ಬೆಳವಣಿಗೆ ದೃಷ್ಟಿಯಿಂದ ಕುಂಠಿತವೇ ಸರಿ. ರಾಜಕೀಯ ಪ್ರಾತಿನಿಧ್ಯ ಹೆಚ್ಚಳವಾದಾಗ ಮಾತ್ರವೇ ಸಮಾಜ ರಾಜಕೀಯವಾಗಿ ಬಲಿಷ್ಠವಾಗಲು ಸಾಧ್ಯ, ಇದರಿಂದ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಕನಿಷ್ಠ ಪಕ್ಷ 15ಕ್ಕೂ ಹೆಚ್ಟು ಶಾಸಕರು ಆಯ್ಕೆಯಾಗಿ ಬರುವಂತೆ ಸಮಾಜದ ಬಂಧುಗಳು ಶ್ರಮಿಸಬೇಕೆಂದು ಚಿತ್ರದುರ್ಗ ಕ್ಷೇತ್ರದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಕರೆ ನೀಡಿದ್ದಾರೆ.
ಭಾನುವಾರ ಮಧ್ಯಾಹ್ನ ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಜನತಾರಾಣಿ ಟ್ರಸ್ಟ್ ಹಾಗೂ ದಕ್ಷಿಣ ಭಾರತ ಕಮ್ಮವಾರಿ ಸಂಘ ಬೆಂಗಳೂರು ಮತ್ತು ಕಾಕತೀಯ ಕಮ್ಮವಾರಿ ಸಂಘ ಹಗರಿಬೊಮ್ಮನಹಳ್ಳಿ, ಹಡಗಲಿ, ಮುಂಡರಗಿ ಘಟಕಗಳು ಜಂಟಿಯಾಗಿ ಆಯೋಜಿಸಿದ್ದ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. ಎಲ್ಲ ಸಮಾಜದವರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಳ್ಳುವ ಮೂಲಕ ನಾವು ರಾಜಕೀಯವಾಗಿ ಬಲಿಷ್ಠವಾಗುವುದು ಅಗತ್ಯವಿದೆ. ಈ ದಿಸೆಯಲ್ಲಿ ನಮ್ಮ ಸಮಾಜದ ಎಲ್ಲ ಹಿರಿಯ ಮುಖಂಡರು ಸಂಘಟನೆಯನ್ನು ಹೆಚ್ಚು ಬಲಿಷ್ಠಗೊಳಿಸುವತ್ತ ಗಮನಹರಿಸುವಂತೆ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖಂಡರಲ್ಲಿ ಮನವಿ ಮಾಡಿಕೊಂಡರು. ಸಮಾರಂಭದಲ್ಲಿ ವೈದ್ಯ, ಎಂಜಿನಿಯರಿಂಗ್, ಪದವಿ, ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಜನತಾ ರಾಣಿಟ್ರಸ್ಟ್ ಹಾಗೂ ಸಂಘ ನೀಡುವ ವಿದ್ಯಾರ್ಥಿವೇತನವನ್ನು ವಿತರಣೆ ಮಾಡಲಾಯಿತು.
ಸ್ಥಳೀಯ ಸಂಘದ ಅಧ್ಯಕ್ಷ ಮಾದಲ ರಾಮಮೋಹನರಾವ್ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಆರ್.ವಿ. ದೇವರಾಜ್, ಕೊಪ್ಪಳ ಜಿಪಂ ಅಧ್ಯಕ್ಷ ಟಿ. ಜನಾರ್ದನ್, ರಾಯಚೂರ - ಬಳ್ಳಾರಿ - ಕೊಪ್ಪಳ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಂ. ಸತ್ಯನಾರಾಯಣ, ರಾಜ್ಯ ಚಲನಚಿತ್ರ ಮಂಡಳಿ ಮಾಜಿ ಅಧ್ಯಕ್ಷ ಆರ್.ವಿ. ಹರೀಶ್, ವೈ.ಎಸ್.ವಿ.ಕೆ. ವಾಸುದೇವರಾವ್, ಕೊನೇರು ರಾಮಾರಾವ್, ಜಿ ಪಂ ಸದಸ್ಯೆ ಸಿ.ಎಚ್. ವಿಜಯಲಕ್ಷ್ಮಿ, ಹೊಸಪೇಟೆ ಎಪಿಎಂಸಿ ಅಧ್ಯಕ್ಷ ಪುರುಷೋತ್ತಮ, ಅಪ್ಸಾನಿ ನಾರಾಯಣರಾವ್, ಕೆ. ವೆಂಕಟರಾಮಯ್ಯ ಭಾಗವಹಿಸಿದ್ದರು. ಜೋಗಿರಾಮ ಸ್ವಾಗತಿಸಿ, ಚಕ್ರವರ್ತಿ ನಿರೂಪಿಸಿದರು.
ಎಲ್ಲ ಸಮಾಜದವರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಳ್ಳುವ ಮೂಲಕ ಕಮ್ಮವಾರಿ ಜನಾಂಗದವರು ರಾಜಕೀಯವಾಗಿ ಬಲಿಷ್ಠವಾಗುವುದು ಅಗತ್ಯವಿದೆ.
-ಜಿ.ಎಚ್.ತಿಪ್ಪಾರೆಡ್ಡಿ,
ಶಾಸಕರು, ಚಿತ್ರದುರ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

