ನೇಮಿರಾಜರಿಂದ ಜನತೆಗೆ ವಂಚನೆ: ಆರೋಪ
ಕೊಟ್ಟೂರು: ಮಹತ್ವದ ಯೋಜನೆಗಳಿಗೆ ಸರ್ಕಾರದ ಆಳಿತಾತ್ಮಕ ಅನುಮೋದನೆ ದೊರಕಿಸಿಕೊಳ್ಳದೆ ಸರ್ಕಾರದ ಕೋಟ್ಯಂತರ ರು.ಗಳ ಮಂಜೂರಾತಿಯ ಸುಳ್ಳು ಆದೇಶಗಳನ್ನು ಸೃಷ್ಟಿಸಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜನತೆಗೆ ಮಾಜಿ ಶಾಸಕ ಕೆ. ನೇಮಿರಾಜ ನಾಯ್ಕ ವಂಚನೆಗೈದಿದ್ದಾರೆ. ಈ ಬಗೆಯ ವಂಚನೆ ತಮ್ಮ ಜಾಯಮಾನವಲ್ಲ, ಸೇವೆ ಮಾಡುವುದೇ ತಮ್ಮ ಗುರಿ ಎಂದು ಶಾಸಕ ಭೀಮಾನಾಯ್ಕ ಹೇಳಿದರು.
ಪಟ್ಟಣದ ತುಂಗಭದ್ರಾ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಮೈದಾನದಲ್ಲಿ ಕೊಟ್ಟೂರೇಶ್ವರ ಪ್ರೌಢಶಾಲೆ ಆಯೋಜಿಸಿದ್ದ ಕೂಡ್ಲಿಗಿ ತಾಲೂಕು ಮಟ್ಟದ 76ನೇ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ನಂತರ ಅವರು ಮಾತನಾಡಿದರು.
ಪಟ್ಟಣದ ಕ್ರೀಡಾಂಗಣ ನಿರ್ಮಾಣ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು. ರಾಷ್ಟ್ರದಲ್ಲಿ ಕ್ರೀಡಾಪಟುಗಳಿಗೆ ಖಂಡಿತಾ ಕೊರತೆ ಇಲ್ಲ. ಆದರೆ ಕ್ರೀಡಾ ಉತ್ತೇಜಕರ ಕೊರತೆಯಿಂದಾಗಿ ಬಹಳಷ್ಟು ಕ್ರೀಡಾ ಪ್ರತಿಭೆಗಳು ಹೊರ ಹೊಮ್ಮುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕ್ರೀಡಾಜ್ಯೋತಿ ಬೆಳಗಿಸಿ ಮಾತನಾಡಿದ ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿ ಎಂ.ಎಂ.ಜೆ. ಹರ್ಷವರ್ಧನ್, ಕ್ರೀಡೆಗಳ ಬಗ್ಗೆ ಪ್ರಭಾವಿ ಶಿಕ್ಷಣ ಸಂಸ್ಥೆಗಳು ಗಮನಹರಿಸದಿರುವುದು ನಿಜಕ್ಕೂ ದೊಡ್ಡ ದುರಂತ. ಕ್ರೀಡೆ ಕಲಿಕೆಯ ಮೂಲಕ ಜೀವನದಲ್ಲಿ ಖಿನ್ನತೆ ಎಂದಿಗೂ ಬಾಧಿಸದಂತೆ ಗಮನ ಹರಿಸಬೇಕೆಂದರು.
ಜಿಪಂ ಪ್ರಭಾರಿ ಅಧ್ಯಕ್ಷೆ ಮಮತಾ ಸುರೇಶ್ ಮಾತನಾಡಿ, ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ತಮ್ಮ ಸಾಧನೆ ತೋರಿ ಜಿಲ್ಲೆಯ ಹೆಸರನ್ನು ರಾಜ್ಯಮಟ್ಟದತ್ತ ತೋರಬೇಕು ಎಂದರು.
ಜಿಪಂ ಸದಸ್ಯರಾದ ಪಿ. ಚನ್ನಬಸವನಗೌಡ, ಸಾವಜ್ಜಿ ಶಾರದಾ ಪ್ರಸಾದ್, ರತ್ನಮ್ಮ ಸಿದ್ದಲಿಂಗನಗೌಡ, ಪಪಂ ಸದಸ್ಯರಾದ ಕೆ. ಸುಮಾ ಮಂಜುನಾಥಗೌಡ, ಅನುಸೂಯಾ ವೆಂಕಟೇಶ್, ಶಿವಾನಂದ, ಪ್ರಭು, ಅಕ್ಷರ ದಾಸೋಹ ಅಧಿಕಾರಿ ಮಲ್ಲಿಕಾರ್ಜುನ ಸ್ವಾಮಿ, ಪಪಂ ಮುಖ್ಯಾಧಿಕಾರಿ ಹನುಮಂತಮ್ಮ, ಮೈಲೇಶ್ ಬೇವೂರು, ಜೆಡಿಎಸ್ ಮುಖಂಡ ಶಿವಮೂರ್ತಿ, ದೇವರಮನಿ ಶಿವಚರಣ, ಆರ್.ಎಂ. ಗುರುಬಸವಸ್ವಾಮಿ, ಎ.ಎಸ್. ವೀರಣ್ಣ ಇದ್ದರು.
ಮಲ್ಲಿಕಾರ್ಜುನ ವಿದ್ಯಾಸಂಸ್ಥೆಯ ಡಾ.ಐ. ವೀರಭದ್ರಯ್ಯ ಅಧ್ಯಕ್ಷತೆ ವಹಿಸಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಬಿಇಒ ಕಮ್ಮಾರ್ ಮಂಜುನಾಥ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಎಸ್. ಕೊಟ್ರೇಶ್ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

