ಬಳ್ಳಾರಿ

ಅಂತರಂಗ ಶುದ್ಧಿಗೆ ದಾನ - ಧರ್ಮ ಮಾಡಿ

Published On :

ಕುರುಗೋಡು: ದಾನ ಧರ್ಮ ಮತ್ತು ಶಾಂತಿ ಮಾರ್ಗವು ಅಂತರಂಗ ಶುದ್ಧೀಕರಣಕ್ಕೆ ಸಹಕಾರಿ ಎಂದು ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಸ್ವಾಮೀಜಿ ತಿಳಿಸಿದರು.
ಪಟ್ಟಣ ಸಮೀಪದ ಸಿರಿಗೇರಿ ಗ್ರಾಮದ ನಾಗನಾಥೇಶ್ವರ ದೇವಸ್ಥಾನದಲ್ಲಿ ನಿರ್ಮಿಸಿದ ಮರುಳ ಸಿದ್ದಯ್ಯ ಸ್ವಾಮಿ ವೇದಿಕೆಯಲ್ಲಿ ಗ್ರಾಮದ ಸದ್ಭಕ್ತರು ಹಾಗೂ ಶರಣ ಬಸವೇಶ್ವರ ಪುರಾಣ ಮಂಗಲದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 214ನೇ ತುಲಾಭಾರ ಸ್ವೀಕರಿಸಿದ ನಂತರ ಅವರು ಮಾತನಾಡಿದರು. ಮಾನವೀಯ ಗುಣವೆ ನಿಜವಾದ ಧರ್ಮ. ಈ ನಿಟ್ಟಿನಲ್ಲಿ ಸದ್ಭಕ್ತರು ಅಜ್ಜನವರ ಜೋಳಿಗೆಗೆ ನೀಡಿದ ಅಪಾರ ದಾನವನ್ನು ಆಶ್ರಮದ ಅಂಧ ಹಾಗೂ ನಿರಾಶ್ರಿತ ಮಕ್ಕಳ ಶಿಕ್ಷಣಕ್ಕೆ ಬಳಸಲಾಗುವುದು ಎಂದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ಎಸ್.ಎಂ. ಅಡಿವೆಯ್ಯಸ್ವಾಮಿ, ವೈದ್ಯಾಧಿಕಾರಿ ಡಾ. ಮೃತ್ಯುಂಜಯ ಸ್ವಾಮಿ ಮಾತನಾಡಿದರು. ಆಕಾಶವಾಣಿ ಕಲಾವಿದ ವೀರೇಶ್ ಕಿತ್ತೂರು ಶರಣರ ವಚನಗಾಯನ ಎಲ್ಲರ ಮನ ಸೆಳೆಯಿತು. ಗ್ರಾಪಂ ಮಾಜಿ ಅಧ್ಯಕ್ಷ ಅಂಬರೀಷ್ ಅಧ್ಯಕ್ಷತೆ ವಹಿಸಿದ್ದರು.
ನಿಜಗುಣೇಶ್ ಗವಾಯಿ, ಶಿವಮೂರ್ತಿ ಶಾಸ್ತ್ರಿ, ವೀರನಗೌಡ, ತಬಲವಾದಕ ರಾಮಲಿಂಗಪ್ಪ ಹೂಗಾರ್ ಮತ್ತಿತರರು ಇದ್ದರು. ಪಂಪಾಪತಿ ನಿರ್ವಹಿಸಿದರು.
ಇದೇ ಸಂದರ್ಭ ಸ್ವಾಮಿಗಳ ಹಸ್ತಾಕ್ಷರದ ಬೆಳ್ಳಿ ಉಡುದಾರ ಹಾಗೂ ಬೆಳ್ಳಿ ಲಿಂಗ ಕ್ರಮವಾಗಿ ರು. 9501 ಹಾಗೂ ರು. 5101 ಗಳಿಗೆ ಹರಾಜುಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.