ಬಳ್ಳಾರಿ

ಕ್ರೀಡಾಂಗಣಕ್ಕೆ ಅಲ್ಲಂ ಹೆಸರಿಡಿ: ಕೊಂಡಯ್ಯ

Published On :

ಬಳ್ಳಾರಿ: ನಗರದ ರಾಜ್‌ಕುಮಾರ್ ರಸ್ತೆಯ ಬಿಡಿಎ ಮೈದಾನದಲ್ಲಿ ಹೊಸದಾಗಿ ನಿರ್ಮಿಸಲಾದ ಫುಟ್‌ಬಾಲ್ ಕ್ರೀಡಾಂಗಣಕ್ಕೆ ಅಲ್ಲಂ ಕರಿಬಸಪ್ಪ ಅವರ ಹೆಸರಿಡಲು ಮಾಜಿ ಸಂಸದ ಕೆ.ಸಿ. ಕೊಂಡಯ್ಯ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಬಳ್ಳಾರಿ ಕಲ್ಚರಲ್ ಆಕ್ಟಿವಿಟಿಸ್ ಅಸೋಸಿಯೇಷನ್ ವತಿಯಿಂದ ನಗರದ ರಾಘವ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಅಲ್ಲಂ ಕರಿಬಸಪ್ಪ ಅವರ 99ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಮಾತನಾಡಿ, ತಮ್ಮ ತಂದೆ ಅಲ್ಲಂ ಕರಿಬಸಪ್ಪನವರು ಕರ್ನಾಟಕ ಏಕೀಕರಣದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅವರ ಸಮಯ ಪಾಲನೆ, ಶಿಸ್ತು ಮತ್ತು ಆದರ್ಶಗಳು ನಮಗೆಲ್ಲಾ ಮಾದರಿಯಾಗಿವೆ ಎಂದರು. ಮಾಜಿ ವಿಧಾನಪರಿಷತ್ ಸದಸ್ಯ ಎನ್. ತಿಪ್ಪಣ್ಣ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಾದ ಸುಭದ್ರಮ್ಮ ಮನ್ಸೂರ, ಬೆಳಗಲ್ ವೀರಣ್ಣ, ಶಂಕರನಾಯ್ಡು, ರಮೇಶಗೌಡ ಪಾಟೀಲ, ಪುರುಷೋತ್ತಮ ಹಂದ್ಯಾಳ, ಜಿ. ಆರ್. ವೆಂಕಟೇಶಲು, ಎಂ. ರಾಮಾಂಜನೇಯಲು, ಡಿ.ಎಚ್. ಕೃಷ್ಣಮೂರ್ತಿ, ಕೆ. ಸುರೇಂದ್ರಬಾಬು, ಡಿ. ಸುಬಣ್ಣ ಅವರನ್ನು ಸನ್ಮಾನಿಸಲಾಯಿತು.
ರಾಘವ ಮೆಮೋರಿಯಲ್ ಅಧ್ಯಕ್ಷ ಕೆ. ಚನ್ನಪ್ಪ, ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಕೌಡಕಿ ಉಮಾಪತೆಪ್ಪ, ನರಸೇಪಲ್ಲಿ ನಾಗರಾಜ, ಕಾರ್ಯದರ್ಶಿ ಪಿ. ಗಾದೆಪ್ಪ, ಉಪಾಧ್ಯಕ್ಷ ಕೆ. ಕೋಟೇಶ್ವರರಾವ್, ಖಜಾಂಚಿ ಅಲ್ಲಂ ದೊಡ್ಡಪ್ಪ ಹಾಗೂ ಕುಟುಂಬದ ಸದಸ್ಯರು ಇದ್ದರು. ಕಾರ್ಯಕ್ರಮದ ನಂತರ ಮೋಹಿನಿ ಭಸ್ಮಾಸುರ ನಾಟಕ ಪ್ರದರ್ಶನಗೊಂಡಿತು.  ಅಸೋಸಿಯೇಷನ್ ಅಧ್ಯಕ್ಷ ಶೀಲಾ ಬ್ರಹ್ಮಯ್ಯ ಮಾತನಾಡಿದರು. ಕೆ. ಸುರೇಂದ್ರಬಾಬು ನಿರೂಪಿಸಿದರು. ಪಿ. ಗಾದೆಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.