ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಸೆ. 8
ಸ್ಥಳೀಯ ವಾರ್ಡ್ಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ತಾಲೂಕು ಸಮಿತಿಯ ಪದಾಧಿಕಾರಿಗಳು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ನಗರಸಭಾ ಪೌರಾಯುಕ್ತ ಕೆ. ರಂಗಸ್ವಾಮಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ಅನಂತಶಯನ ಗುಡಿಯ ಅಂಗನವಾಡಿ ಕೇಂದ್ರವನ್ನು ನವೀಕರಣಗೊಳಿಸಬೇಕು. ಚಪ್ಪರದಹಳ್ಳಿ ಹೊಸ ಪ್ಲಾಟ್ ಪ್ರದೇಶದಲ್ಲಿ ಮಹಿಳಾ ಶೌಚಾಲಯ ನಿರ್ಮಿಸಬೇಕು. ಪಾಂಡುರಂಗ ಕಾಲೋನಿ ಹಾಗೂ ಅನಂತಶಯನ ಗುಡಿ ಪ್ರದೇಶಕ್ಕಾಗಿ ಸರಬರಾಜಾಗುವ ಮಿನಿ ನೀರಿನ ಟ್ಯಾಂಕ್ಗಳನ್ನು ಸ್ವಚ್ಘಗೊಳಿಸಿ ಕ್ರಿಮಿನಾಶಕ ಔಷಧಿಗಳನ್ನು ಸಿಂಪಡಿಸಿ ಜನರ ಆರೋಗ್ಯವನ್ನು ರಕ್ಷಿಸಬೇಕು. ಪಾಂಡುರಂಗ ಕಾಲೋನಿಯಲ್ಲಿರುವ ಮಹಿಳಾ ಶೌಚಾಲಯದ ನಿರ್ವಹಣೆ ಬಗ್ಗೆ ಗಮನಹರಿಸಿ ಹಾಗೂ ಸ್ವಚ್ಘತೆಯನ್ನು ಕಾಪಾಡಬೇಕು. ನ್ಯಾಯಬೆಲೆ ಅಂಗಡಿ ತಿಂಗಳಪೂರ್ತಿ ತೆರೆದಿರಬೇಕು, ನ್ಯಾಯ ಸಮ್ಮತವಾಗಿ ಹಂಚಿಕೆಯಾಗಬೇಕು. ಸುಸಜ್ಜಿತವಾದ ರಸ್ತೆ ನಿರ್ಮಾಣವಾಗಬೇಕು. ಅಂಜಿನೇಯಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿದ್ದ 32 ಬಡ ಕುಟುಂಬಗಳಿಗೆ ನಿವೇಶನ ಒದಗಿಸಬೇಕು ಎಂದು ಡಿವೈಎಫ್ಐ ಸಂಘಟನೆ ಜಿಲ್ಲಾಧ್ಯಕ್ಷ ಬಿಸಾಟಿ ಮಹೇಶ್, ಡಿವೈಎಫ್ಐ ಮುಖಂಡರಾದ ಯಲ್ಲಾಲಿಂಗ, ಕೆ. ರಮೇಶ್, ಇ. ಮಂಜುನಾಥ, ತಿರುಕಪ್ಪ, ಕಲ್ಯಾಣಯ್ಯ, ಎಂ. ಹುಸೇನ್, ತಳವಾರ ಹುಲುಗಪ್ಪ, ರಾಟಿ ರಮೇಶ್, ಜಂಬಯ್ಯ, ಚೌಡಯ್ಯ ಒತ್ತಾಯಿಸಿ ನಗರಸಭಾ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

