ಲೊಟ್ಟನಕೇರಿ: ಕಾಮಗಾರಿ ಉತ್ತಮವಾಗಿದೆ
ಕೊಟ್ಟೂರು: ಲೊಟ್ಟನಕೇರಿ ಪ್ರಾಥಮಿಕ ಶಾಲೆಯ ಬಿಸಿಯೂಟ ಕೊಠಡಿ ಕಾಮಗಾರಿ ಗುಣಮಟ್ಟದ ಇಟ್ಟಿಗೆಗಳಿಂದ ನಡೆದಿದೆ. ಕಳಪೆ ಇಟ್ಟಿಗೆಗಳನ್ನು ಬಳಸಲಾಗಿದೆ ಎಂಬ ದೇವದೇಂದ್ರಪ್ಪ ಆರೋಪ ಸುಳ್ಳು. ಕಾಮಗಾರಿಯನ್ನು ಗ್ರಾಮಸ್ಥರು ಯಾರೊಬ್ಬರು ಸ್ಥಗಿತಗೊಳಿಸಿಲ್ಲ ಎಂದು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಮಹಾದೇವಪ್ಪ ಸ್ಪಷ್ಟಪಡಿಸಿದ್ದಾರೆ. ಭಾನುವಾರ ಪ್ರತಿಕ್ರಿಯೆ ನೀಡಿ, ಕಾಮಗಾರಿ ಮುಂದುವರೆದಿದ್ದು, ಕಾಮಗಾರಿಗೆ ರು. 3.1 ಲಕ್ಷ ಮಂಜೂರಾಗಿದೆ. ಆದರೆ ಡಿ. ದೇವೇಂದ್ರಪ್ಪ ಆರೋಪಿಸಿರುವುದಂತೆ ರು. 3.25 ಲಕ್ಷ ಅನುದಾನ ಅಲ್ಲ. ಸ್ವಾರ್ಥ ಮನೋಭಾವದ ದೇವೇಂದ್ರಪ್ಪ ಕಾಮಗಾರಿಗೆ ತನ್ನ ಇಟ್ಟಿಗೆಗಳನ್ನು ಖರೀದಿಸಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಆರೋಪಿಸಿ ಕಾಮಗಾರಿ ಸ್ಥಗಿತಗೊಳಿಸಿರುವುದಾಗಿ ಸುಳ್ಳು ಹೇಳಿದ್ದಾರೆ. ಇದು ಸಂಪೂರ್ಣ ಸತ್ಯಕ್ಕೆ ದೂರ ಎಂದು ಹೇಳಿದರು. ಸದಸ್ಯ ಶಂಕ್ರಾಚಾರಿ, ಹುಲುಗಪ್ಪ, ನಾಗಜಾರ, ನುಪ್ಪಣ್ಣ ಇದ್ದರು.
ಕ್ರೀಡಾ ಪ್ರತಿಭೆ ಗುರುತಿಸಿ: ಶಾಸಕ
ಹಗರಿಬೊಮ್ಮನಹಳ್ಳಿ: ಶಾಲಾ ಹಂತದಲ್ಲೇ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಸೂಕ್ತ ತರಬೇತಿ ನೀಡಿ, ನಾಡಿಗೆ ಕೀರ್ತಿ ತರುವ ಕ್ರೀಡಾಪಟುಗಳನ್ನು ರೂಪಿಸಬೇಕು ಎಂದು ಶಾಸಕ ಎಸ್. ಭೀಮಾನಾಯ್ಕ ದೈಹಿಕ ಶಿಕ್ಷಕರಿಗೆ ಮನವಿ ಮಾಡಿದರು.
ತಾಲೂಕಿನ ವಲ್ಲಭಾಪುರ ಗ್ರಾಮದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ಕ್ರೀಡಾಂಗಣದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ನಂತರ ಮಾತನಾಡಿದರು. ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪೂರ್ಯನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಪ್ರಭಾರಿ ಅಧ್ಯಕ್ಷೆ ಮಮತಾ ಸುರೇಶ, ಜಿಪಂ ಸದಸ್ಯ ಕರಿಬಸವನಗೌಡ್ರ ರತ್ನಮ್ಮ, ಹೇಮ್ಲವ್ವ ಕೃಷ್ಣನಾಯ್ಕ, ತಾಪಂ ಉಪಾಧ್ಯಕ್ಷೆ ನಾಗರತ್ನ ವೆಂಕಟೇಶ್, ಸದಸ್ಯರಾದ ಉಪ್ಪಾರ ಬಾಲಪ್ಪ, ಪವಾಡಿ ಗಂಗಮ್ಮ, ಭಾರತಮ್ಮ ಬೆಲ್ಲದ್, ಚಿಂತ್ರಪಳ್ಳಿ ಗ್ರಾಪಂ ಅಧ್ಯಕ್ಷ ಎಂ. ಆನಂದ್, ತಾಪಂ ಇಒ ಕೇಣಿಬಸಪ್ಪ, ಬಿಇಒ ರಾಮನಗೌಡ, ದೈಹಿಕ ಶಿಕ್ಷಣ ನೀರಿಕ್ಷಕ ಕೆ.ವಿ.ಎಂ. ನಾಗಭೂಷಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

