ಕೊಟ್ಟೂರು: ರಂಗ ಸಂಭ್ರಮ ಉದ್ಘಾಟನೆ
ಕೊಟ್ಟೂರು: ಎಪಿಎಂಸಿ ಗಣೇಶೋತ್ಸವ ಸಮಾರಂಭ ಮುಂಬರುವ ವರ್ಷಗಳಲ್ಲಿ ಕೊಟ್ಟೂರು ಉತ್ಸವದ ರೂಪ ಪಡೆದು ರಾಜ್ಯದ ಗಮನ ಸೆಳೆಯುವುದರಲ್ಲಿ ಅನುಮಾನವಿಲ್ಲ. ಸಂಘಟಿತ ಪ್ರಯತ್ನ ಆ ಮಟ್ಟವನ್ನು ಖಂಡಿತ ತಲುಪಬಲ್ಲದು ಎಂದು ಜೆಡಿಎಸ್ ಮುಖಂಡ ಎಂ.ಎಂ.ಜೆ. ಹರ್ಷವರ್ಧನ್ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಗಣೇಶೋತ್ಸವ ಸಮಿತಿ ಗಣೇಶ ಚತುರ್ಥಿ ನಿಮಿತ್ತ ಹಮ್ಮಿಕೊಂಡಿದ್ದ ರಂಗ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಪಿಎಂಸಿ ನಿರ್ದೇಶಕ ಎಂ.ಎಂ.ಜೆ. ಸ್ವರೂಪಾನಂದ ಮಾತನಾಡಿ, ಗಣೇಶ ಆರಾಧನೆ ಹೆಸರಿನಲ್ಲಿ ಕೆಲವರು ಹಣ ಸುಲಿಗೆ ಮಾಡಿ ಅಂದಾದುಂದಿ ಮಾಡುತ್ತಿರುವುದು ಖಂಡನೀಯ ಎಂದರು. ಎಪಿಎಂಸಿ ಅಧ್ಯಕ್ಷ ಜೆ.ಸಿ. ಶಶಿಧರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಉಪಾಧ್ಯಕ್ಷ ಪಿ.ಎಚ್. ದೊಡ್ಡರಾಮಣ್ಣ, ಖರೀದಿದಾರರ ಸಂಘದ ಅಧ್ಯಕ್ಷ ಪಿ.ವಿ. ಗಣೇಶ್, ಉತ್ಸವ ಸಮಿತಿ ಅಧ್ಯಕ್ಷ ಬಿ.ಎಸ್. ವೀರೇಶ್, ಎಪಿಎಂಸಿ ನಿರ್ದೇಶಕ ಗುರುಶಾಂತಪ್ಪ ಪಾಲ್ಗೊಂಡಿದ್ದರು. ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಕೊಟ್ರೇಶ್ ಕಾಮಶೆಟ್ಟಿ ಸ್ವಾಗತಿಸಿದರು. ದೇವರಮನಿ ಸುರೇಶ್ ನಿರೂಪಿಸಿದರು.
ನಾಟಕ ಪ್ರದರ್ಶನ: ರಂಗ ಸಂಭ್ರಮದ ಅಂಗವಾಗಿ ಹರಪ್ಪನಹಳ್ಳಿಯ ಸಮಸ್ತರು ತಂಡದವರು ಕಾಮತ್ ರಚನೆಯ, ಬಾಸುಮಕ ನಿರ್ದೇಶನದ ಸಾಕ್ರಟೀಸ್ ಮತ್ತು ಆದರ್ಶ, ಮಹಿಳಾ ಮಂಡಳಿ ಕಲಾವಿದರು ಡಾ. ರಾಜಪ್ಪ ದಳವಾಯಿ ರಚನೆಯ ಗೋಪಾಲ ಕೃಷ್ಣ ನಾಯಿರಿ ನಿರ್ದೇಶನದ ಕುಲಂ ಕುಲಮಲ್ತು ನಾಟಕಗಳು ಪ್ರದರ್ಶನವಾದವು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

