ಕ್ರೈಸ್ಟ್‌ಚರ್ಚ್‌ನ ಸ್ಥಳೀಯ ಪಂದ್ಯದಲ್ಲಿ 21 ಎಸೆತಗಳಲ್ಲಿ 54 ರನ್ ಸಿಡಿಸಿದ ರಿಷಭ್ ಪಂತ್, Video ವೈರಲ್!

ಕ್ರೈಸ್ಟ್‌ಚರ್ಚ್: ಶುಕ್ರವಾರದಿಂದ ಪ್ರಾರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಮುನ್ನ ಭಾರತದ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್, ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ 'ಲಾಸ್ಟ್ ಮ್ಯಾನ್ ಸ್ಟ್ಯಾಂಡ್ಸ್' (Last Man Stands) ಎಂಬ ಸ್ಥಳೀಯ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದ್ದು, ಕೇವಲ 21 ಎಸೆತಗಳಲ್ಲಿ 54 ರನ್ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.
'ಹ್ಯಾಗ್ಲಿ ಪಾರ್ಕ್'ನಲ್ಲಿ ನಡೆದ 'ಲಾಸ್ಟ್ ಮ್ಯಾನ್ ಸ್ಟ್ಯಾಂಡ್ಸ್' ಪಂದ್ಯದಲ್ಲಿ 'ಓಪನ್ ಹೌಸ್ ಸ್ವಿಂಗರ್ಸ್' (Open House Swingers) ತಂಡದ ಪರವಾಗಿ 'ದಿ ಚೋಸನ್ ಒನ್ಸ್' (The Chosen Ones) ವಿರುದ್ಧ ಪಂತ್ ಆಡಿದರು.
ಸ್ಕೋರ್ ಕಾರ್ಡ್‌ನಲ್ಲಿ 'ಸ್ಟಾನ್ ಸ್ಟಾನ್' (Stan Stan) ಎಂಬ ಹೆಸರಿನಲ್ಲಿ ಕಾಣಿಸಿಕೊಂಡ ಪಂತ್, 21 ಎಸೆತಗಳಲ್ಲಿ 54 ರನ್ ಸಿಡಿಸುವ ಮೂಲಕ ನ್ಯೂಜಿಲೆಂಡ್‌ನಲ್ಲಿ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರಿಸಿದರು. ನ್ಯೂಜಿಲೆಂಡ್ ಕ್ಲಬ್ ಆಟಗಾರರು ರಿಷಬ್ ಪಂತ್‌ಗೆ ತಮ್ಮೊಂದಿಗೆ ಆಡುವಂತೆ ಕೋರಿದರು, ಅದಕ್ಕೆ ಅವರು ಸಂತೋಷದಿಂದ ಒಪ್ಪಿಕೊಂಡು 26 ಎಸೆತಗಳಲ್ಲಿ 72 ರನ್ ಗಳಿಸಿದ್ದಾರೆ. ನಿಜಕ್ಕೂ ಅವರು ಚಿನ್ನದಂತಹ ಹೃದಯವಂತರು ಎಂದು ಹರ್ಷಿತ್ ಎಂಬುವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
'ಓಪನ್ ಹೌಸ್ ಸ್ವಿಂಗರ್ಸ್' ತಂಡದ ಆಟಗಾರ ಮೊಹಮ್ಮದ್ ಸಫಿ ಪಂದ್ಯದ ಕುರಿತು 'ನ್ಯೂಜಿಲೆಂಡ್ ಹೆರಾಲ್ಡ್' ಜೊತೆಗೆ ಮಾತನಾಡಿದ್ದು, ಎಲೆಕ್ಟ್ರಿಕ್ ಬೈಕ್‌ನಲ್ಲಿ ಓಡಾಡುತ್ತಿದ್ದ ರಿಷಭ್ ಕಂಡು ಅವರೊಂದಿಗೆ ಮಾತನಾಡಿದೆ,. ಕೆಲವು ಫೋಟೋಗಳನ್ನು ತೆಗೆದುಕೊಂಡೆವು. ನಂತರ ನಾನು ಅವರನ್ನು, 'ನಮ್ಮ ಪರವಾಗಿ ಕ್ರಿಕೆಟ್ ಆಡುತ್ತೀರಾ?' ಎಂದು ಕೇಳಿದೆ. ಅದಕ್ಕೆ ಅವರು, 'ಸರಿ, ನಾನು ಬಂದು ನಿಮ್ಮ ತಂಡಕ್ಕಾಗಿ ಆಡುತ್ತೇನೆ' ಎಂದರು. ನಂತರ ಅವರು ಬಂದು ಪ್ಯಾಡ್‌ಗಳನ್ನು ಧರಿಸಿ ಬ್ಯಾಟಿಂಗ್‌ಗೆ ಇಳಿದರು ಮತ್ತು ಕೆಲವು ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದರು ಎಂದು ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರಲ್ಲಿ ಒಬ್ಬರಾದ ಪಂತ್, ಆಡಿರುವ 53 ಪಂದ್ಯಗಳಲ್ಲಿ ಒಟ್ಟು 108 ಸಿಕ್ಸರ್‌ಗಳನ್ನು ಸಿಡಿಸಿ, ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ ವಾರ ವೆಲ್ಲಿಂಗ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಅವರು 153 ಎಸೆತಗಳಲ್ಲಿ 128 ರನ್ ಗಳಿಸಿದ್ದರು. ಆ ಪಂದ್ಯವು ಡ್ರಾನಲ್ಲಿ ಕೊನೆಗೊಂಡರೂ, ಭಾರತವು 9 ವಿಕೆಟ್‌ಗೆ 720 ರನ್‌ಗಳ ದಾಖಲೆಯನ್ನು ನಿರ್ಮಿಸಲು ಪಂತ್ ನೆರವಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



