ವಿಷ್ಣುವರ್ಧನ್ರ 64ನೇ ಜನ್ಮದಿನಾಚರಣೆ
ಬಳ್ಳಾರಿ: ಸಾಹಸಸಿಂಹ ದಿ. ಡಾ. ವಿಷ್ಣುವರ್ಧನ್ ಅವರ 64ನೇ ಜನ್ಮದಿನವನ್ನು ಬಳ್ಳಾರಿಯ ವಿಷ್ಣುಸೇನಾ ಸಮಿತಿಯಿಂದ ಬುಧವಾರ ಆಚರಿಸಲಾಯಿತು.
ನಗರದ ಕುವೆಂಪು ನಗರದ ವಿಷ್ಣುವರ್ಧನ್ ಉದ್ಯಾನವನದಲ್ಲಿರುವ ವಿಷ್ಣುವರ್ಧನ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ವಿಷ್ಣು ಸೇನಾ ಸಮಿತಿ ಜಿಲ್ಲಾಧ್ಯಕ್ಷ ಕುಂದಾಪುರ ನಾಗರಾಜ್, ಕನ್ನಡ ಚಿತ್ರರಂಗದ ದಿಗ್ಗಜರಲ್ಲಿ ಓರ್ವರಾದ ಡಾ. ವಿಷ್ಣು ಅವರಿಗೆ ಮರಣೋತ್ತರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಬೇಕು. ರಾಜಧಾನಿ ಬೆಂಗಳೂರಿನಲ್ಲಿ ಬಾಲಣ್ಣನವರ ಅಭಿಮಾನ್ ಸ್ಟುಡಿಯೋದಲ್ಲಿ ಡಾ. ವಿಷ್ಣುವರ್ಧನ್ ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ ಸ್ಮಾರಕ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ದರೂರು ಪುರುಷೋತ್ತಮ ಗೌಡ, ಕಾಂಗ್ರೆಸ್ ಮುಖಂಡ ಎಚ್. ಅರ್ಜುನ್, ವಿ.ಕೆ. ಬಸಪ್ಪ, ಕಸಾಪ ಮಾಜಿ ಅಧ್ಯಕ್ಷ ರುದ್ರಪ್ಪ, ವೇಮಣ್ಣ, ಕೃಷ್ಣೋಜಿರಾವ್, ಪಾಲಿಕೆ ಸದಸ್ಯ ರಮೇಶ್, ಕೊಳಗಲ್ಲು ಶಿವರಾಂ, ಮಂಜುನಾಥ, ಜಿ.ಎನ್. ಅರಳಿ, ಮಲ್ಲಿಕಾರ್ಜುನ, ಹಿರಿಯ ಮುಖಂಡ ಹಿರೇಮಠ, ಶ್ರೀನಿವಾಸ ರೆಡ್ಡಿ, ಶಿವಪ್ಪ, ಅಹಿಂದ ಮುಖಂಡ ಕೆ. ಗೂಳೆಪ್ಪ, ಪವನ್, ಜಗದೀಶ್ ಶರ್ಮ, ಮನೋಜ್ ಕುಮಾರ್, ಚೇತನ್, ನವೀನ್, ಯೋಗೇಶ್, ವೀರೇಶ್, ವೃಷಭೇಂದ್ರ, ಮಲ್ಲಯ್ಯ, ಬಾಷಾ ಕೋಳೂರು, ಹೇಮಣ್ಣ ಮುಷ್ಠಿಗಟ್ಟೆ, ವಿಶ್ವನಾಥಸ್ವಾಮಿ, ಕೋಳೂರು ಗಾದಿಲಿಂಗ, ಎನ್. ಕೃಷ್ಣ ಮೋಹನ್, ಅಪ್ಪಾಜಿ, ಹೇಮಂತರಾಜ್, ಪಿ. ಶೇಖರ್ ದೇಸಾಯಿ ಷಡಾಕ್ಷರಪ್ಪ, ಪಿ. ಜಗನ್, ವಿಜಯ್ಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

