ಬಳ್ಳಾರಿ

ಮುಂದಿನ ವರ್ಷದಿಂದ ಎಂಟೆಕ್ ಆರಂಭ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 19
ಮುಂದಿನ ಶೈಕ್ಷಣಿಕ ಸಾಲಿನಿಂದ ಇನ್ನಷ್ಟು ವಿಷಯಗಳ ಕುರಿತು ಸ್ನಾತಕೋತ್ತರ ಪದವಿಗಳನ್ನು ನಗರದ ರಾವ್‌ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಆರಂಭಿಸಲಾಗುವುದು ಎಂದು ವೀ.ವಿ. ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ತಿಳಿಸಿದರು.
ಕಾಲೇಜಿನಲ್ಲಿ ಎಂಸಿಎ, ಎಂ ಟೆಕ್, ಎಂಬಿಎ ವಿಭಾಗಗಳಿಂದ ಏರ್ಪಡಿಸಿದ್ದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾವಿದ್ಯಾಲಯದಲ್ಲಿ ಈಗಾಗಲೇ ಎಂಬಿಎ, ಎಂಸಿಎ ಸ್ನಾತಕೋತ್ತರ ಪದವಿ ವಿಭಾಗಗಳಿವೆ. ಇದರ ಜತೆಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಥರ್ಮಲ್ ಪವರ್ ಎಂಜಿನಿಯರಿಂಗ್, ಪ್ರೊಡಕ್ಷನ್ ಮ್ಯಾನೇಜ್‌ಮೆಂಟ್, ಡಿಜಿಟಲ್ ಕಮ್ಯೂನಿಕೇಷನ್, ನೆಟ್ ವರ್ಕಿಂಗ್, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮತ್ತು ಸ್ಟ್ರಕ್ಚರಲ್ ಎಂಜಿನಿಯರಿಂಗ್ ಎಂಬ ಸ್ನಾತಕೋತ್ತರ ಪದವಿಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಟಿ. ಹನುಮಂತರೆಡ್ಡಿ ಮಾತನಾಡಿದರು.
ಈ ಸಂದರ್ಭದಲ್ಲಿ ವೀ.ವಿ. ಸಂಘ ಉಪಾಧ್ಯಕ್ಷ ಕೆ.ಎಂ.ಮಹೇಶ್ವರ ಸ್ವಾಮಿ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬಿ.ವಿ. ಬಸವರಾಜ ಮಾತನಾಡಿದರು. ಕಾಲೇಜಿನ ಸ್ನಾತಕೋತ್ತರ ವಿಭಾಗಗಳ ಸಂಯೋಜಕ ಡಾ. ಎರ್ರಣ್ಣಗೌಡ, ಡಾ. ಸಿ.ತೋಟಪ್ಪ, ಡಾ. ಮಹಾಬಲೇಶ್ವರ, ಡಾ. ಸವಿತಾ ಸೊನಾಲಿ, ಕೆ.ರಾಘವೇಂದ್ರ ಪ್ರಸಾದ ಮತ್ತು ಕೆ.ಟಿ. ಗೋಪಿ, ಎಚ್.ವಾಗೀಷ್, ವೀ.ವಿ. ಸಂಘದ ಕಾರ್ಯದರ್ಶಿ ಎಚ್.ಎಂ. ಗುರುಸಿದ್ದಸ್ವಾಮಿ, ಸಹಕಾರ್ಯದರ್ಶಿ ಜೆ. ನೇಪಾಕ್ಷಪ್ಪ,  ಖಜಾಂಚಿ ಸಂಗನಕಲ್ಲು ಹೀಮಂತರಾಜ್, ಪಾಲಕ್ಷರೆಡ್ಡಿ, ಗೋನಾಳ್ ವಿರೂಪಾಕ್ಷಗೌಡ, ಯಾಳ್ಪಿ ಪಂಪನಗೌಡ, ಆಡಳಿತ ಮಂಡಳಿಯ ಸದಸ್ಯರಾದ ಅಲ್ಲಂ ವಿನಾಯಕ, ಎಂ. ರಾಜೇಂದ್ರ ಕುಮಾರ ಸೇರಿದಂತೆ ಎಲ್ಲ ವಿಭಾಗಗಳ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಇಸಿಇ ವಿಭಾಗದ ಮುಖ್ಯಸ್ಥೆ ಸವಿತಾ ಸೋನಾಲಿ ನಿರೂಪಿಸಿದರು. ಪ್ರೊಫೆಸರ್ ಟಿ.ಎಚ್. ಪಾಟೀಲ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.