ಸುದ್ದಿ ಸಂಕ್ಷೇಪ
ದತ್ತಿ ಉಪನ್ಯಾಸ ಕಾರ್ಯಕ್ರಮ
ಬಳ್ಳಾರಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ತಾಲೂಕಿನ ಶ್ರೀಧರಗಡ್ಡೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 124ನೇ ಮಹಾಮನೆಯ ಲಿಂ ಬಸಯ್ಯ ವೀರಭದ್ರಯ್ಯ ಹೊಸೂರು ಮಠ ಮತ್ತು ಕೊಟ್ರಯ್ಯ ವೀರಭದ್ರಯ್ಯ ದತ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವೀ.ವಿ. ಸಂಘದ ಸ್ವತಂತ್ರ ಪಪೂ ಕಾಲೇಜು ಉಪನ್ಯಾಸಕ ಎ.ಎಂ.ಪಿ. ವೀರಯ್ಯಸ್ವಾಮಿ ಉಪನ್ಯಾಸ ನೀಡಿ, ಸಮಯ ಅತ್ಯಮೂಲ್ಯವಾದದು. ಪ್ರತಿಕ್ಷಣ ಮಾನವನ ಬೆಳವಣಿಗೆಗೆ ಸಾಧಕವಾಗಿದೆ. ವಿದ್ಯಾರ್ಥಿಗಳು ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೇ ಪಾಲಿಸಿ ಜೀವನದ ಯಶಸ್ಸಿನ ಹಾದಿ ಕಂಡುಕೊಳ್ಳಬೇಕು ಎಂದು ತಿಳಿಸಿದರು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಎಂ. ಜಯೇಂದ್ರಗೌಡ ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಎಂಸಿ ಸದಸ್ಯ ಎ. ಜಂಬನಗೌಡ, ಸಿಆರ್ಪಿ ಕೆ. ಪಂಪನಗೌಡ, ಅಮರೇಶ್, ವೀರಶಿವಾಚಾರ್, ಸಿದ್ದಣ್ಣ ಮತ್ತಿತರರು ಇದ್ದರು. ವಿದ್ಯಾರ್ಥಿನಿ ಮಾಧವಿ, ರೇಣುಕಾ ಪ್ರಾರ್ಥಿಸಿದರು. ಗುಂಡಾಚಾರ್ ಸ್ವಾಗತಿಸಿದರು. ಕೆ.ಬಿ. ಸಿದ್ದಲಿಂಗಪ್ಪ ನಿರೂಪಿಸಿ, ವಂದಿಸಿದರು.
ಲೇಖಕರಿಗೆ ಸೂಚನೆ
ಬಳ್ಳಾರಿ: ಜಿಲ್ಲೆಯ ಸ್ಥಳೀಯ ಲೇಖಕರಿಂದ ತಲಾ 5 ಪುಸ್ತಕಗಳನ್ನು ಖರೀದಿಸಬೇಕೆಂದು ಜಿಲ್ಲಾಧಿಕಾರಿ ಅಮ್ಲನ್ ಆದಿತ್ಯ ಬಿಸ್ವಾಸ್ ಅವರು ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲಿ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯವು ಜಿಲ್ಲೆಯ ಲೇಖಕರಿಂದ ಪುಸ್ತಕ ಖರೀದಿಸಲು ಉದ್ದೇಶಿಸಿದೆ. ಆಸಕ್ತ ಲೇಖಕರು ಹೆಚ್ಚಿನ ಮಾಹಿತಿಗಾಗಿ ಮುಖ್ಯ ಗ್ರಂಥಾಲಯಾಧಿಕಾರಿ ಜಿಲ್ಲಾ ಕೇಂದ್ರ ಗ್ರಂಥಾಲಯ, ದೇವಿನಗರ, 1ನೇ ಅಡ್ಡರಸ್ತೆ, ಕ್ಲಬ್ ರೋಡ್, ಬಳ್ಳಾರಿ ಇವರನ್ನು ಅಥವಾ ದೂರವಾಣಿ ಸಂಖ್ಯೆ 08392-266887 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಹೊಸಪೇಟೆ: ಇಲ್ಲಿನ ಸ್ವಾತಿ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಸಹಕಾರಿ ಆಡಳಿತ ಮಂಡಳಿಯ 2013-14ರಿಂದ 2017-18ರ ವರೆಗಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಅಧ್ಯಕ್ಷರಾಗಿ ಎಂ. ನೀಲಕಂಠಯ್ಯ, ಉಪಾಧ್ಯಕ್ಷರಾಗಿ ಎಲ್.ಎಸ್. ಆನಂದ್, ನಿರ್ದೇಶಕರಾಗಿ ಕೆ. ನಾಗರಾಜ್, ಬಿ. ಪ್ರಕಾಶ್, ಕೆ. ರಾಮಲಿಂಗಾಚಾರಿ, ಕೆ. ಶ್ರೀಕಾಂತ, ನಾಗರತ್ನ, ಪಿ. ಉಷಾ, ಕೆ. ಸಿದ್ದಪ್ಪ ಆಯ್ಕೆಗೊಂಡಿದ್ದಾರೆ ಎಂದು ಸ್ವಾತಿ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ವ್ಯವಸ್ಥಾಪಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಹೊಸಪೇಟೆ: ಮಾನವ ಹಕ್ಕುಗಳ ಜಾಗೃತಿ ಸಮಿತಿಯ ತಾಲೂಕು ಅಧ್ಯಕ್ಷರಾಗಿ ಡಿ. ಶ್ರೀನಿವಾಸ್ ನೇಮಕಗೊಂಡಿದ್ದಾರೆ. ಉಪಾಧ್ಯಕ್ಷ ಎನ್. ಅಲ್ತಾಪ್, ಕಾರ್ಯದರ್ಶಿ ಎಚ್.ಎಂ. ಯೂಸೂಫ್ ಖಾನ್, ಕಾರ್ಯಕಾರಿ ಸಮಿತಿ ಸದಸ್ಯ ಸಿ.ಜಿ. ವಿನಯ್, ಪಿ. ಗಣಪತಿ ನೇಮಕಗೊಂಡಿದ್ದಾರೆ ಎಂದು ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯಧ್ಯಕ್ಷ ಸಮೇತನಹಳ್ಳಿ ಲಕ್ಷ್ಮಣ್ ಸಿಂಗ್ ತಿಳಿಸಿದ್ದಾರೆ.
ಆಸ್ಪತ್ರೆ ಕಟ್ಟಡ ಸೇವೆಗೆ ಸಮರ್ಪಣೆ
ಬಳ್ಳಾರಿ: ಬಳ್ಳಾರಿ ಪಾಲಿಕೆ ವ್ಯಾಪ್ತಿಯ 28ನೇ ಮತ್ತು 29ನೇ ವಾರ್ಡಿನ ಜನರ ಅನುಕೂಲಕ್ಕಾಗಿ ನಿರ್ಮಿಸಲಾದ ನೂತನ 6 ಹಾಸಿಗೆಗಳ ಆಸ್ಪತ್ರೆ ಕಟ್ಟಡವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಾಧವರಾವ್ ಪಾಟೀಲ್ ಬುಧವಾರ ರಿಬ್ಬನ್ ಕತ್ತರಿಸುವ ಮೂಲಕ ಸಾರ್ವಜನಿಕರ ಆರೋಗ್ಯ ಸೇವೆಗಳಿಗೆ ಸಮರ್ಪಿಸಿದರು.
ನಂತರ ಮಾತನಾಡಿದ ಅವರು, ಈ ಆಸ್ಪತ್ರೆಯು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು. ನಗರ ಪ್ರದೇಶಗಳಲ್ಲಿ ಮುನಿಸಿಪಾಲಿಟಿಗಳಿಂದ ಮತ್ತೆ ಆರೋಗ್ಯ ಇಲಾಖೆ ವ್ಯಾಪ್ತಿಗೆ ಈ ಆಸ್ಪತ್ರೆಗಳು ಬಂದಿವೆ. ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ಒದಗಿಸಲು ಸರ್ಕಾರದ ಮಂಜೂರು ಪಡೆಯಲು ಜಿಲ್ಲಾ ಪಂಚಾಯತ್ ಸಿಇಓ ಮತ್ತು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ನಗರ ಪ್ರದೇಶದಲ್ಲಿನ ಜನರಿಗೆ ಉತ್ತಮ ಅರೋಗ್ಯ ಸೇವೆ ಒದಗಿಸಲಾಗುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ ಮಾತನಾಡಿದರು. ಕನ್ನಡ ಉಪನ್ಯಾಸಕ ಡಾ. ಕೆ.ಬಸಪ್ಪ ಸ್ಥಳೀಯ ಸಮಸ್ಯೆಗಳ ಕುರಿತು ಮಾತನಾಡಿದರು. ಪಾಲಿಕೆಯ ಆರೋಗ್ಯಾಧಿಕಾರಿ ಡಾ. ಫಾರೂಕ್, ಪಾಲಿಕೆ ಸದಸ್ಯರಾದ ನಾಗರಾಜ, ಬೆಣಕಲ್ಲು ಬಸವರಾಜ, ರಂಗಯ್ಯ, ನಿವೃತ್ತ ಎಎಸ್ಐ ಪಾಂಡುರಂಗ, ಕಾಂಗ್ರೆಸ್ ಮುಖಂಡ ಗಾದಿಲಿಂಗಪ್ಪ, ಛಾಯಾಗ್ರಾಹಕ ದುರುಗಣ್ಣ, ಕೆ. ಮೋಹನ್, ಸಬಸ್ಟೀನ್, ಅಸ್ಪತ್ರೆಯ ಸಿಬ್ಬಂದಿ, ಸಾರ್ವಜನಿಕರು ಇದ್ದರು. ವೈದ್ಯಾಧಿಕಾರಿ ಡಾ. ಕೆ.ಭಾರತಿ ಸ್ವಾಗತಿಸಿ, ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

