ಇಂದು ಉದ್ಯೋಗ ಮೇಳ
ಬಳ್ಳಾರಿ: ಕೌಶಲ್ಯ ಆಯೋಗ, ಉದ್ಯೋಗ ಮತ್ತು ತರಬೇತಿ ಇಲಾಖೆ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿತ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಸೆ. 26ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಮಿನಿ ಉದ್ಯೋಗ ಮೇಳ ಆಯೋಜಿಸಿದೆ. ಮೇಳದಲ್ಲಿ ಯುರೇಕಾ ಫೋರ್ಬ್ಸ್, ಎಲ್ಐಸಿ ಆಫ್ ಇಂಡಿಯಾ, ಎಂಐಜಿ ಫೋರ್ಸ್, ಸೆಕ್ಯುರಿಟೀಸ್, ಈಗಲ್ ಟೆಕ್ನಲಾಜೀಸ್, ಎಂಎಸ್ ಸ್ಟಾಫಿಂಗ್ ಸಲ್ಯೂಷನ್ಸ್ ಪ್ರೈ. ಲಿ., ನವಭಾರತ್ ಫರ್ಟಿಲೈಜರ್ಸ್, ಐಎಫ್ಬಿಐ ಉದ್ಯೋಗದಾತರು ಪಾಲ್ಗೊಳ್ಳಲಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಯಾವುದೇ ಪದವೀಧರರು ಪಾಲ್ಗೊಳ್ಳಬಹುದು. ಆಸಕ್ತರು ವಿದ್ಯಾರ್ಹತೆ ಪ್ರಮಾಣ ಪತ್ರ, ಸ್ವವಿವರದೊಂದಿಗೆ ಮೇಳದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಮೊ.ಸಂ. 9036422052, 9844444958ನ್ನು ಸಂಪರ್ಕಿಸಬಹುದೆಂದು ಹಟ್ಟೆಪ್ಪ ತಿಳಿಸಿದ್ದಾರೆ.
ಇಂದು ಚಿತ್ರ ಪ್ರದರ್ಶನ
ಹೊಸಪೇಟೆ: ಭಾರತೀಯ ಚಲನಚಿತ್ರರಂಗ 100 ವರ್ಷ ಸಂಭ್ರಮ ಆಚರಿಸುತ್ತಿರುವುದರಿಂದ ಹಂಪಿ ಕನ್ನಡ ವಿಶ್ವವಿದ್ಯಾಲದ ಡಾ. ರಾಜಕುಮಾರ್ ಅಧ್ಯಯನ ಪೀಠ ಪ್ರಶಸ್ತಿ ವಿಜೇತ 3 ಚಲನಚಿತ್ರಗಳ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಸೆ. 26ರಿಂದ 28ರ ವರೆಗೆ ವಿವಿಯ ದರ್ಪಣ ಕಟ್ಟಡದಲ್ಲಿ ಹಮ್ಮಿಕೊಂಡಿದೆ. ಕಾದಂಬರಿಗಳನ್ನಾಧರಿಸಿದ ಚಲನಚಿತ್ರಗಳಲ್ಲಿ 3 ಚಲಚಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಸೆ. 26ರಂದು ಮಧ್ಯಾಹ್ನ 2ಕ್ಕೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ರಚಿತ ಗಿರೀಶ್ ಕಾಸರವಳ್ಳಿ ನಿರ್ದೇಶನದ ತಬರನ ಕತೆ ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ. ಕರೀಗೌಡ ಬೀಚನಹಳ್ಳಿ ಪ್ರತಿಕ್ರಿಯೆ ನೀಡುವರು. ಸೆ. 27ರಂದು ಮಧ್ಯಾಹ್ನ 2ಕ್ಕೆ ಪಿ. ಲಂಕೇಶ್ ಅವರ ಬಿರುಕು ಕಾದಂಬರಿ ಆಧಾರಿತ ಲಂಕೇಶ್ ನಿರ್ದೇಶನದ ಪಲ್ಲವಿ ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಹಂಪಿ ವಿವಿ ಪ್ರಾಧ್ಯಾಪಕ ಸಿ. ವೆಂಕಟೇಶ್ ಪ್ರತಿಕ್ರಿಯೆ ನೀಡುವರು. ಸೆ. 28ರಂದು ಮಧ್ಯಾಹ್ನ 2ಕ್ಕೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಸೂರ್ಯ ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಪ್ರಾಧ್ಯಾಪಕ ಡಾ.ಸಿ.ಆರ್. ಗೋವಿಂದರಾಜು ಪ್ರತಿಕ್ರಿಯೆ ನೀಡುವರು. ವಿವಿ ಕುಲಪತಿ ಡಾ.ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸುವರು. ವಿವಿ ಕುಲಸಚಿವ ವಿಜಯ್ ಪೂಣಚ್ಚ ತಂಬಂಡ, ಡಾ. ರಾಜ್ಕುಮಾರ್ ಅಧ್ಯಯನ ಪೀಠದ ಸಂಚಾಲಕ ಡಾ.ಗೋವಿಂದರಾಜು ಭಾಗವಹಿಸುವರೆಂದು ಪ್ರಕಟಣೆ ತಿಳಿಸಿದೆ.
ಇಂದು ಕಾರ್ಯಕ್ರಮ
ಬಳ್ಳಾರಿ: ಹಾನಗಲ್ಲ ಕುಮಾರಸ್ವಾಮಿಗಳ 146ನೇ ಜಯಂತ್ಯುತ್ಸವದಂಗವಾಗಿ ಸಂಗನಬಸವ ಸ್ವಾಮೀಜಿ ನೇತೃತ್ವದಲ್ಲಿ ಸೆ. 26ರಂದು ಬೆಳಗ್ಗೆ 10ಕ್ಕೆ ತಾಲೂಕಿನ ಸಂಡೂರಿನಲ್ಲಿ ದುಶ್ಚಟಗಳ ನಿರ್ಮೂಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನುರಿತ ವೈದ್ಯರಿಂದ ಉಚಿತ ತಪಾಸಣೆ, ಚಿಕಿತ್ಸೆ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಅಸುಂಡಿ ನಾಗರಾಜ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

