ಮಾನವ ಸಂಬಂಧಗಳಿಗೆ ಕೋಮಾಸ್ಥಿತಿ
ಕೊಟ್ಟೂರು: ಸಂಕೀರ್ಣಗೊಳ್ಳುತ್ತಿರುವ ಮಾನವನ ಬದುಕು ನಿಜಕ್ಕೂ ಗಂಭೀರ ಪರಿಸ್ಥಿತಿ ತಲುಪಿದೆ. ಮಾನವ ಸಂಬಂಧಗಳಿಗೆ ಕೋಮಾಸ್ಥಿತಿ ಬಂದೊದಗಿದೆ ಎಂದು ಉಪನ್ಯಾಸಕ ಬಿ. ಗೋವಿಂದಪ್ಪ ಹೇಳಿದರು.
ಪಟ್ಟಣದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಜೆಸಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜನತೆ ದೇಶದ ನಿಜವಾದ ಸಂಪತ್ತು. ಜನರಿಂದ ಸಮಾಜದ ಆರೋಗ್ಯ ಖಂಡಿತ ಸುಧಾರಿಸುತ್ತದೆ. ಸಮಾಜಮುಖಿ ಕಾರ್ಯಚಟುವಟಿಕೆಗಳಲ್ಲಿ ಸದಾ ತೊಡಗಿಸಿಕೊಳ್ಳುವ ಜೆಸಿಐ ನಂತಹ ಸಂಘಟನೆಗಳು ಉತ್ತಮ ಕೆಲಸಗಳ ನಿರ್ವಹಣೆ ಜತೆಗೆ ಪ್ರತಿಯೊಬ್ಬರಲ್ಲಿ ವ್ಯಕ್ತಿತ್ವ ವಿಕಸನ ಮಾಡಿಸುವ ಕೆಲಸ ನಿರಂತರ ಮಾಡುತ್ತಿವೆ. ನೇತ್ರದಾನ, ರಕ್ತದಾನದಂತಹ ಕಾರ್ಯಗಳನ್ನು ಗ್ರಾಮೀಣ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಆಗಾಗ ಏರ್ಪಡಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಕೊಟ್ಟೂರು ಕಟ್ಟೇಮನಿ ಹಿರೇಮಠದ ಅಧ್ಯಕ್ಷ ಶ್ರೀ ಯೋಗಿರಾಜೇಂದ್ರ ಶಿವಾಚಾರ್ಯರು, ಮನುಷ್ಯನ ಬೆಳವಣಿಗೆಗೆ ಕ್ರೀಡೆಗಳು ಪೂರಕವಾಗಿ ಕೆಲಸ ಮಾಡುತ್ತವೆ. ಆರೋಗ್ಯವಂತ ಸಮಾಜ ಬೆಳೆಯಲು ಪ್ರತಿಯೊಬ್ಬರೂ ಸದಾ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದರು.
ಜೆಸಿಐ ಸಪ್ತಾಹದ ಅಂಗವಾಗಿ ನಾಗರಿಕ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಇಲಾಖೆಯ ಪರಶುರಾಮ, ಜೆಸ್ಕಾಂನ ಬಿ. ವೀರಣ್ಣ, ಅಂಗನವಾಡಿ ಕಾರ್ಯಕರ್ತೆ ಅನ್ನಪೂರ್ಣಮ್ಮ, ನಾಟಿ ವೈದ್ಯ ಕೊಟ್ರಪ್ಪ, ಅಂಚೆ ಇಲಾಖೆಯ ಸಿದ್ರಾಮ ಕೊಲ್ಲಾರ, ಶಿಕ್ಷಕ ಈಶ್ವರಪ್ಪ ತುರಕಾಣಿ, ಯೋಗೀಶ್ವರ ದಿನ್ನೆ ಅವರನ್ನು ಸನ್ಮಾನಿಸಲಾಯಿತು. ಜೆಸಿಐ ಕೊಟ್ಟೂರು ಕಾಟನ್ ಅಧ್ಯಕ್ಷ ಜಗದೀಶ ಚಂದ್ರಬೋಸ್ ಅಧ್ಯಕ್ಷತೆ ವಹಿಸಿದ್ದರು.
ಪಪಂ ಮಾಜಿ ಉಪಾಧ್ಯಕ್ಷ ಎಚ್. ಗುರುಬಸವರಾಜ ಜೆಸಿಐನ ಚಂದ್ರು, ನಿರ್ಮಲಾ ರಡ್ಡೇರ, ಡಾ. ರವಿ, ಸಕ್ರಪ್ಪ ರಡ್ಡೇರ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

