ಯುವಕರು ರಕ್ತದಾನಕ್ಕೆ ಮುಂದಾಗಲಿ
ಹೊಸಪೇಟೆ: ಮೂಢನಂಬಿಕೆಗಳಿಂದಾಗಿ ಯುವಕರು ಇತ್ತೀಚಿಗೆ ರಕ್ತದಾನ ಮಾಡಲು ಹಿಂಜಿಯುತ್ತಿರುವುದು ಖೇದಕರ ಸಂಗತಿ. ಇದರಿಂದಾಗಿ ಅಸ್ಪತ್ರೆಗಳಲ್ಲಿ ರಕ್ತದ ಕೊರತೆಯುಂಟಾಗುತ್ತಿದೆ. ಯುವಕರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಎಸ್. ಶಿವಣ್ಣ ಹೇಳಿದರು.
ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಬಳ್ಳಾರಿಯ ವಿಮ್ಸ್, ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಗೃಹ ರಕ್ಷಕ ದಳ, ಸ್ಪಂದನ ಚಾರಿಟೇಬಲ್ ಟ್ರಸ್ಟ್ ಹಾಗೂ ಹೊಸಪೇಟೆ ರೋಟರಿ- ಇನ್ನರ್ ವ್ಹೀಲ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಆರೋಗ್ಯವಂತ ಮನುಷ್ಯ ವರ್ಷದಲ್ಲಿ 3 ಬಾರಿ ರಕ್ತದಾನ ದಾನ ಮಾಡಬಹುದು. ಇದರಿಂದ ಹೊಸ ರಕ್ತ ಉತ್ಪತ್ತಿಯಾಗಿ ಜೀವನದಲ್ಲಿ ಉತ್ಸಾಹ ಮತ್ತು ದೈಹಿಕ ಆರೋಗ್ಯ ಸಹ ವೃದ್ಧಿಸುತ್ತದೆ. ರಕ್ತದ ಅವಶ್ಯಕತೆ ಇರುವಂತವರಿಗೆ ಯುವಕರು ರಕ್ತದಾನ ಮಾಡಿ ರಕ್ಷಿಸಲು ಮುಂದಾಗಬೇಕು ಎಂದರು.
ರಕ್ತ ಬಹು ಮುಖ್ಯ: ಬಳ್ಳಾರಿಯ ವಿಮ್ಸ್ ನಿರ್ದೇಶಕ ಡಾ. ಲಕ್ಷ್ಮೀ ನಾರಾಯಣ ರೆಡ್ಡಿ ಮಾತನಾಡಿ, ಹೆಚ್ಚಾಗಿ ಡೆಂಘೀ ಜ್ವರದ ರೋಗಿಗಳು ವಿಮ್ಸ್ಗೆ ದಾಖಲಾಗುತ್ತಿದ್ದು, ಅಂತಹ ರೋಗಿಗೆ 24 ಗಂಟೆಯಿಂದ 72 ಗಂಟೆಯೊಳಗೆ ರಕ್ತದಲ್ಲಿರುವ ಪ್ಲೆಟಿಲೆಟ್ ಅತಿ ಅವಶ್ಯಕತೆಯಿದೆ. ಸಮಯಕ್ಕೆ ಸರಿಯಾಗಿ ಉತ್ತಮ ಚಿಕಿತ್ಸೆ ದೊರೆಯದೆ ಹೋದರೆ, ರೋಗಿ ಮೃತಪಡುವ ಸಾಧ್ಯತೆ ಇರುತ್ತದೆ. ಆಗ ಜೀವ ಉಳಿಸಲು ರಕ್ತ ಬಹು ಮುಖ್ಯ ಪಾತ್ರವಹಿಸುತ್ತದೆ ಎಂದರು.
ಸ್ಥಳೀಯ ನ್ಯಾಯಾಲಯದ ನ್ಯಾಯಧೀಶ ಮಾರುತಿ ಬಗಾಡೆ, ಕೆ. ನಾರಾಯಣಪ್ರಸಾದ್, ಹತ್ತಿಕಾಳು ಪ್ರಭು ಸಿದ್ದಪ್ಪ, ಇನ್ನರ್ ವ್ಹೀಲ್ನ ಅಧ್ಯಕ್ಷೆ ಡಾ. ಮಾಧವಿ, ಮೇಘನಾ ಮಂಜುನಾಥ, ಆರ್. ಗೋಪಿನಾಥ, ರತ್ನಮ್ಮ, ಡಾ. ಗುರುರಾಜ್ ಆಚಾರ್, ತಾಲೂಕು ವೈದ್ಯಾಧಿಕಾರಿ ಡಾ. ಶಂಕರ್ ನಾಯ್ಕ್, ಆರೋಗ್ಯಾಧಿಕಾರಿ ಪಿ.ಎನ್. ಸುರೇಶ್, ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಪ್ರೊ. ಸತ್ಯನಾರಾಯಣ, ಕಾರ್ಯದರ್ಶಿ ಡಾ. ನಾಗರಾಜ್, ವಕೀಲರ ಸಂಘದ ಅಧ್ಯಕ್ಷ ರತ್ನಾಕರ ರಾವ್, ಜಿಲ್ಲಾ ಗೃಹ ರಕ್ಷಕ ದಳದ ಪಿ. ಶೇಕಬ್, ಕೊಪ್ಪಳ ಜಿಲ್ಲಾ ಗೃಹ ರಕ್ಷಕದಳದ ರವಿಕುಮಾರ್, ಬಿ. ದೇವಣ್ಣ, ಡಾ. ಬಿಂದು ರಾಣಿ, ನಗರ ಠಾಣಾ ಪಿಎಸ್ಪೈ ಪಿ.ಕೆ. ಜೋಷಿ ಇದ್ದರು.
ಎಚ್. ಶ್ರೀನಿವಾಸರಾವ್ ಸ್ವಾಗತಿಸಿದರು. ಡಾ.ಕೆ. ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೈಯದ್ ಮಹ್ಮದ್ ವಂದಿಸಿದರು. ಡಾ. ಮುನಿವಾಸು ದೇವರೆಡ್ಡಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

