ಸುಕುಮಾರನ ಭಾವಚಿತ್ರ ಭವ್ಯ ಮೆರವಣಿಗೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 29
ಹಾನಗಲ್ ಕುಮಾರ ಶಿವಯೋಗಿಗಳವರ 146ನೇ ಜಯಂತಿ ಮಹೋತ್ಸವದ ಅಂಗವಾಗಿ ಮಹಾಜಂಗಮ ಪುಸ್ತಕೋತ್ಸವ ಹಾಗೂ ಸುಕುಮಾರನ ಭವ್ಯ ಭಾವಚಿತ್ರದೊಂದಿಗೆ ವಿವಿಧ ಭಾಗಗಳಿಂದ ಆಗಮಿಸಿದ 75ಕ್ಕೂ ಹೆಚ್ಚು ಹರ-ಗುರು-ಚರ ಮೂರ್ತಿಗಳು ಸಮ್ಮುಖದಲ್ಲಿ ಭಾನುವಾರ ಬೆಳಗ್ಗೆ ಪಾದಯಾತ್ರೆ ಕಾರ್ಯಕ್ರಮ ನಡೆಯಿತು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತಾದಿಗಳು, ಬಸವಾದಿ ಶಿವಶರಣ ವಚನ ಚಳವಳಿಯನ್ನು ಸಾರುವಂತೆ ಮಹಾ ಜಂಗಮ ಗ್ರಂಥದ ಮತ್ತು ಹಾನಗಲ್ ಕುಮಾರ ಶಿವಯೋಗಿಗಳ ಭವ್ಯ ಭಾವಚಿತ್ರದೊಂದಿಗೆ ಕುದುರೆ ಸಾರೋಟದಲ್ಲಿ ಅದ್ಧೂರಿ ಮೆರವಣಿಗೆ ಜರುಗಿತು. 15ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು, ಭಜನಾ ತಂಡಗಳು ವಾದ್ಯಗಳು ಮಹಾಜಂಗಮ ಮಹಾಗ್ರಂಥದ ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಸುಮಾರು 500 ಸುಮಂಗಲೆಯರು ಶ್ರೀ ಮಠದಿಂದ ಗ್ರಂಥವನ್ನು ತಲೆಯ ಮೇಲೆ ಹೊತ್ತು ನಗರ ಪ್ರಮುಖ ಬೀದಿಗಳಲ್ಲಿ ಸಾಗಿದರು. ನಗರದ ಬಸವೇಶ್ವರ ವೃತ್ತ, ಗಡಗಿ ಚೆನ್ನಪ್ಪ ಸರ್ಕಲ್, ಬೆಂಗಳೂರು ರಸ್ತೆ, ಬ್ರೂಸ್ಪೇಟೆ ಪೊಲೀಸ್ ಸ್ಟೇಷನ್ ರಥಬೀದಿ ಮೂಲಕ ಶ್ರೀ ಮಠಕ್ಕೆ ಬಂದು ತಲುಪಿತು.
ಜೀವನ ದರ್ಶನ ಪ್ರವಚನ: 12ನೇ ದಿನ ಜರುಗಿದ ಹಾನಗಲ್ ಶ್ರೀ ಕುಮಾರಶಿವಯೋಗಿಗಳ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ಅಂಗವಾಗಿ ಶ್ರೀ ಮದ್ವೀರಶೈವ ಶಿವಯೋಗವುಂದಿರ ಸಂಸ್ಥೆಯ ಅಧ್ಯಕ್ಷ, ಹಂಪಿ ಹೇಮಕೂಟ ಸಿಂಹಾಸನಾಧೀಶ್ವರ ಸಂಗನಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ಡಾ. ಕರಿಬಸವರಾಜೇಂದ್ರ ಸ್ವಾಮೀಜಿ, ಮರಿಮಹಾಂತಶ್ರೀ, ಸದಾಶಿವ ಸ್ವಾಮೀಜಿ, ಅಕ್ಕಿಆಲೂರು, ಕಲ್ಯಾಣ ಸ್ವಾಮೀಜಿ, ಹಾವನೂರಿನ ಶಿವಕುಮಾರ ಸ್ವಾಮೀಜಿ, ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ 75ಕ್ಕೂ ಹೆಚ್ಚು ಹರ ಗುರು ಚರ ಮೂರ್ತಿಗಳು, ಶಿವಯೋಗವುಂದಿರ ಸಾಧಕರು ಬೆಳಗ್ಗೆ ಕೊಟ್ಟೂರುಸ್ವಾಮಿ ಮಠದಿಂದ ಮಹಾಜಂಗಮ ಪುಸ್ತಕೋತ್ಸವದ ಪಾದಯಾತ್ರೆ ಆರಂಭವಾಯಿತು.
ವಡ್ಡು, ತಾಳೂರು, ಶ್ರೀಧರಗಡ್ಡೆ, ಕೊರ್ಲಗುಂದಿ, ಸೋಮಸಮುದ್ರ, ಕಮ್ಮರಚೇಡು, ಅಸುಂಡಿ, ಸಿರಿವಾರ, ಸ್ಥಳೀಯ ಬಳ್ಳಾರಿ ನಗರದ ಸದ್ಭಕ್ತರು, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ವೀವಿ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ, ಇಂದುಶೇಖರ್, ಸಾಹುಕಾರ ಸತೀಶ್ಬಾಬು, ಎಸ್. ಗುರುಲಿಂಗನಗೌಡ, ಪಲ್ಲೇದ ಪಂಪಾಪತೆಪ್ಪ, ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಸಾಲಿ ಸಿದ್ದಯ್ಯಸ್ವಾಮಿ, ಮಹಾಲಿಂಗಯ್ಯಸ್ವಾಮಿ, ಆರ್.ವೈ.ಎಂ.ಸಿ. ಎಂಜಿನಿಯರಿಂಗ್ ಕಾಲೇಜ್ ಅಧ್ಯಕ್ಷ ಬಿ.ವಿ. ಬಸವರಾಜ್, ಪಾಲಿಕೆ ಸದಸ್ಯ ಮಲ್ಲನಗೌಡ, ಗೋನಾಳು ವಿರೂಪಾಕ್ಷಗೌಡ, ಹಲಕುಂದಿ ವಿಜಯಕುಮಾರಗೌಡ, ಬಸವರಾಜ, ಪಿ.ಎಸ್. ಸೋಮಲಿಂಗನಗೌಡ, ಅಸುಂಡಿ ನಾಗರಾಜ, ಮಠದ ಪ್ರಧಾನ ಕಾರ್ಯದರ್ಶಿ ಬಸವರಾಜಸ್ವಾಮಿ, ಜಂಭಯ್ಯಸ್ವಾಮಿ, ಜಾನೇಕುಂಟೆ ಸಣ್ಣಬಸವರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

