ಅತಿಥಿಗೃಹದಲ್ಲಿ ರಾಸಲೀಲೆ ಆರೋಪ
ಕೊಪ್ಪಳ: ಇಲ್ಲಿಯ ಕೆಎಸ್ಆರ್ಟಿಸಿ ವಿಭಾಗೀಯ ಕಚೇರಿಯಲ್ಲಿರುವ ಅತಿಥಿಗೃಹದಲ್ಲಿ ಭದ್ರತಾ ವಿಭಾಗದ ವಿಭಾಗೀಯ ಅಧಿಕಾರಿ ಸತ್ಯಸುಂದರಂ ರಾಸಲೀಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅಪರಿಚಿತ ಮಹಿಳೆಯೋರ್ವಳು ಇರುವಾಗಲೇ ಕೊಠಡಿಯಲ್ಲಿ ಕೂಡಿ ಹಾಕಿದ್ದರು. ಇದರಿಂದ ಕೆಲಕಾಲ ಕಚೇರಿ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು ಮತ್ತು ನಾನಾ ಚರ್ಚೆಗೂ ದಾರಿ ಮಾಡಿಕೊಟ್ಟಿತು.
ಈ ವೇಳೆಯಲ್ಲಿ ಕಚೇರಿಯ ಇತರೆ ಸಿಬ್ಬಂದಿ ಬಾಗಿಲು ತೆರೆಯುತ್ತಿದ್ದಂತೆ ಅದರಲ್ಲಿದ್ದ ಮಹಿಳೆಯೂ ಅಲ್ಲಿಂದ ಕಾಲಿಗೆ ಬುದ್ಧಿ ಹೇಳಿದಳು. ಈ ವೇಳೆಯಲ್ಲಿ ಹೊರಗೆ ಬಂದ ಭದ್ರತಾ ಅಧಿಕಾರಿ ಸತ್ಯಸುಂದರಂ ಅವರು ನಾನು ಏನು ಮಾಡಿಲ್ಲ. ನನಗೆ ಗೊತ್ತಿರುವವರೊಬ್ಬರು ಭೇಟಿ ಮಾಡಲು ಬಂದಿದ್ದರು. ಈ ವೇಳೆಯಲ್ಲಿ ನನ್ನ ಸಿಬ್ಬಂದಿಯೇ ಲಾಕ್ ಮಾಡಿ, ಇಷ್ಟೆಲ್ಲಾ ಅವಘಡಕ್ಕೆ ಕಾರಣವಾಗಿದ್ದಾರೆ. ಇಲ್ಲಿ ಏನು ನಡೆದೇ ಇಲ್ಲ ಎಂದು ಸಮುಜಾಯಿಷಿ ನೀಡಿದರು. ಆದರೆ, ಸಂಜೆಯಿಂದಲೇ ಈ ರೀತಿ ಮಹಿಳೆಯೋರ್ವಳನ್ನು ಕರೆದುಕೊಂಡು ಕಚೇರಿಯ ಗೆಸ್ಟ್ ಹೌಸ್ನಲ್ಲಿ ಇರುವ ಜರೂರತ್ತು ಏನಿತ್ತು. ಈ ಹಿಂದೆಯೇ ಅನೇಕ ಸಾರಿ ಹೀಗೆ ಮಾಡುತ್ತಿದ್ದರು. ಈ ಸಾರಿ ನಾನು ಸಾಕ್ಷಿ ಸಮೇತ ಹಿಡಿದು, ಕೂಡಿ ಹಾಕಿದ್ದೇನೆ. ಮುಂದಿನ ಕ್ರಮಕೈಗೊಳ್ಳುವುದು ಮೇಲಧಿಕಾರಿಗಳಿಗೆ ಬಿಟ್ಟಿರುವ ವಿಷಯ ಎಂದು ಸಿಬ್ಬಂದಿ ಅಮರೇಶ ಲೆಕ್ಕಿ ಹೇಳಿದ್ದಾರೆ. ಆದರೆ, ಈ ಯಾವ ವಿಷಯದ ಕುರಿತು ಮೇಲಧಿಕಾರಿಗಳ್ಯಾರು ಬಾಯಿ ಬಿಡಲೇ ಇಲ್ಲ. ತನಿಖೆ ನಡೆಸಿದರೆ ಸತ್ಯವೆಲ್ಲಾ ಬಯಲಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

