ಇಂದು ವಿಜಯನಗರ ಕಾಲೇಜಿನ ಸ್ವರ್ಣೋತ್ಸವ
ಹೊಸಪೇಟೆ: ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ವಿಜಯನಗರ ಕಾಲೇಜಿನ ಸುವರ್ಣ ಮಹೋತ್ಸವ ಸಮಾರಂಭ ನಗರದ ತಾಲೂಕು ಕ್ರೀಡಾಂಗಣದಲ್ಲಿ ಏ. 10, 11, 12ರಂದು ನಡೆಯಲಿದೆ.
ಗುರುವಾರ ಬೆಳಗ್ಗೆ 10.30ಕ್ಕೆ ಕೊಟ್ಟರುಸ್ವಾಮಿ ಮಠದ ಸಂಗನಬಸವ ಶ್ರೀ ಜಂಬುನಾಥೇಶ್ವರ ಸ್ವಾಮೀಜಿ ವಿದ್ಯಾ ಸಂಕೀರ್ಣ ಉದ್ಘಾಟಿಸುವರು. ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀ ಸುವರ್ಣ ಭವನ ಉದ್ಘಾಟಿಸುವರು.
ಬಳ್ಳಾರಿ ವೀ.ವಿ. ಸಂಘದ ಮಾಜಿ ಅಧ್ಯಕ್ಷ, ಕಾರ್ಯದರ್ಶಿ ಎನ್. ತಿಪ್ಪಣ್ಣ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸುವರು. ರಾಜ್ಯ ಉಚ್ಚನ್ಯಾಯಾಲ ನಿವೃತ್ತ ನ್ಯಾಯಾಧೀಶ ಕೆ.ಎ. ಸ್ವಾಮಿ ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು.
ಬಳ್ಳಾರಿ ವೀ.ವಿ. ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಅಧ್ಯಕ್ಷತೆ ವಹಿಸುವರು. ಸಂಘದ ಮಾಜಿ ಅಧ್ಯಕ್ಷ ಕೋಳೂರು ಬಸವನಗೌಡ, ಮಾಜಿ ಕಾರ್ಯದರ್ಶಿ ಅಲ್ಲಂ ದೊಡ್ಡಪ್ಪ, ಕಾಲೇಜು ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಜಾಲಿ ವಾಮದೇವಪ್ಪ, ನಿವೃತ್ತ ಪ್ರಾಚಾರ್ಯ ಸಿ.ಬಿ. ಚಂದ್ರಶೇಖರಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾಲೇಜಿನ ಆಡಳಿತ ಮಂಡಳಿ ಮಾಜಿ ಅಧ್ಯಕ್ಷರು, ದಾನಿಗಳನ್ನು ಸನ್ಮಾನಿಸಲಾಗುವುದು. ಮಧ್ಯಾಹ್ನ 2.30ಕ್ಕೆ ವಿಶೇಷ ಉಪನ್ಯಾಸ ನಡೆಯಲಿದೆ.
ಬಳ್ಳಾರಿ ವೀ.ವಿ. ಸಂಘದ ಉಪಾಧ್ಯಕ್ಷ ಕೆ.ಎಂ. ಮಹೇಶ್ವರ ಸ್ವಾಮಿ ಅಧ್ಯಕ್ಷೆ ವಹಿಸುವರು.ಧಾರವಾಡ ಕವಿವಿ ಪ್ರಾಧ್ಯಾಪಕ ಎನ್.ಎಂ. ಬಡಿಗೇರ ದೇವಕಣ ಕುರಿತು ಉಪನ್ಯಾಸ ನೀಡುವರು. ಬಸವತತ್ವ ಹಾಗೂ ಪ್ರಸ್ತುತ ಸಮಾಜ ಕುರಿತು ಧಾರವಾಡ ಸಂಸ್ಕೃತಿ ಚಿಂತಕ ರಂಜಾನ್ ದರ್ಗಾ ಉಪನ್ಯಾಸ ನೀಡುವರು. ಕನ್ನಡದ ಸ್ತ್ರೀವಾದಿ ನೆಲೆಗಳು ಕುರಿತು ಗುಲ್ಬರ್ಗದ ಎಂಎಸ್‌ಐ ಪದವಿ ಮಹಾವಿದ್ಯಾಲಯ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ಬಾಳಿ ಉಪನ್ಯಾಸ ನೀಡುವರು. ಬಳ್ಳಾರಿ ವೀ.ವಿ. ಸಂಘದ ಸಹಕಾರ್ಯದರ್ಶಿ ಜೆ.ಎಸ್. ನೇಪಾಕ್ಷಪ್ಪ, ಕಾರ್ಯಕಾರಿ ಸಮಿತಿ ಸದಸ್ಯರಾದ ಟಿ.ಎಚ್.ಎಂ. ಗುರುಮೂರ್ತಿ, ಅಲ್ಲಂ ಬಸವರಾಜ, ಬಿ.ವಿ. ಬಸವರಾಜ, ಡಾ. ಜಿ. ಸಿದ್ಧಲಿಂಗಮೂರ್ತಿ, ಕಣ್ಣಿರಾಜಶೇಖರ, ಪಲ್ಲೇದ ಜಗದೀಶ, ಎಸ್. ಮಲ್ಲನಗೌಡ, ಯಾಳ್ಪಿ ಮೇಟಿ ಪಂಪನಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಂಜೆ 5.30ಕ್ಕೆ ಹೂವಿನಹಡಗಲಿ ಕಲಾವಿದ ಪ್ರಕಾಶ ಜೈನ್ ದಾಸನಹಳ್ಳಿ, ಬೆಂಗಳೂರಿನ ಡಾ. ನಾಗರಾಜ ಹವಾಲ್ದಾರ್, ವಿದ್ಯಾರ್ಥಿಗಳಿಂದ ಸಂಗೀತ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

