ಬಳ್ಳಾರಿ

ಶರಣರ ವಚನ ದೇವರಿಗೆ ಹೇಳಿದ ವಾಕ್ಯ

Published On :

ಹೊಸಪೇಟೆ: ವಚನಗಳು ದೇವರು ಹೇಳಿದ ವಾಕ್ಯಗಳಲ್ಲ, ಬದಲಿಗೆ ದೇವರಿಗೆ ಹೇಳಿದ ವಾಕ್ಯಗಳು ಎಂದು ಸಮಾಜ ವಿಜ್ಞಾನಿ ರಂಜಾನ್ ದರ್ಗಾ ಅಭಿಪ್ರಾಯಪಟ್ಟರು.
ನಗರದ ವಿಜಯನಗರ ಮಹಾವಿದ್ಯಾಲಯದ ಸುವರ್ಣ ಮಹೋತ್ಸವದಲ್ಲಿ ಬಸವತತ್ವ ಹಾಗೂ ಪ್ರಸ್ತುತ ಸಮಾಜ ವಿಷಯವಾಗಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಚನಗಳಲ್ಲಿ ಪ್ರತಿಪಾದಿಸಿರುವ ಸರ್ವರಿಗೂ ಸಮಪಾಲು- ಸರ್ವರಿಗೂ ಸಮಬಾಳು ಮಾನವ ಹಕ್ಕುಗಳ ಪರಿಕಲ್ಪನೆಯಲ್ಲಿ ಸಂವಿಧಾನದ ಪ್ರಜ್ಞೆ ನೀಡಿದ್ದು ಬಸವಾದಿ ಪ್ರಮಥರು. ಜನಾಂಗದಲ್ಲಿರುವ ಮೇಲು-ಕೀಳು, ಜಾತಿ, ಲಿಂಗ, ವರ್ಣಬೇಧ ಖಂಡಿಸಿ ಅನಿಷ್ಠ ಅಂಟು ಜಾಢ್ಯ ತೊಡೆದು ಹಾಕುವುದನ್ನೇ ಗುರಿಯಾಗಿಸಿಕೊಂಡು ವಚನಗಳಲ್ಲಿ ಕ್ರಾಂತಿಯನ್ನೇ ಮಾಡಿದವರು 12ನೇ ಶತಮಾನದ ಶರಣರು ಎಂದರು.
ಅಪಮಾನ, ಶೋಷಣೆ ದೌರ್ಜನ್ಯ, ತುಳಿತಕ್ಕೊಳಗಾದವರನ್ನು ಎತ್ತಿ ಹಿಡಿದು ಸನ್ಮಾರ್ಗ ತೋರಿದ್ದು ವೀರಶೈವ ಧರ್ಮ. ಸ್ವಾರ್ಥ ಬದಿಗಿರಿಸಿ ಎಲ್ಲದು ನಿನ್ನದೆ ಎನ್ನುವ ಅನುಭಾವವನ್ನು ನೀಡು ಎನ್ನುವ ನಿಸ್ವಾರ್ಥ ಪ್ರತಿಪಾದಿಸಿದರು. ಖಗೋಳ, ಭೂಗೋಳ, ಭೌತ ಹಾಗೂ ವೈಜ್ಞಾನಿಕ ಶಾಸ್ತ್ರ ಒಳಗೊಂಡಿರುವ ವಚನ ಸಾಹಿತ್ಯದ ಆಳವಾದ ಅಧ್ಯಯನ ಅಗತ್ಯವಾಗಿದೆ. ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣಿಗೆ ಅನುಚರಭಾವದಿಂದ-ಸಹಚರ ಭಾವದ ಸ್ಥಾನ ನೀಡಿ ಹೆಣ್ಣಿಗೂ ಗಂಡಿನ ಸಮಾನ ಸ್ಥಾನ ನೀಡಬೇಕು ಎಂದರು.
ಕೆ.ಎಂ. ಮಹೇಶ್ವರ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು, ಜೆ.ಎಸ್. ನೇಪಾಕ್ಷಪ್ಪ, ಟಿ.ಎಚ್.ಎಂ. ಗುರುಮೂರ್ತಿ, ಅಲ್ಲಂ ಬಸವರಾಜ, ಪಲ್ಲೇದ ಜಗದೀಶ, ಎಸ್. ಮಲ್ಲನಗೌಡ, ಯಾಳ್ಪಿ ಮೇಟಿ ಪಂಪನಗೌಡ, ಡಾ. ಜಿ. ಸಿದ್ಧಲಿಂಗಮೂರ್ತಿ, ಕಣ್ಣಿ ರಾಜಶೇಖರ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.