ಭ್ರಷ್ಟ ಕಾಂಗ್ರೆಸ್ ಕಿತ್ತು ಹಾಕಿ
ಹಗರಿಬೊಮ್ಮನಹಳ್ಳಿ: ದೇಶದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಬಲವಾಗಿ ಬೀಸುತ್ತಿದೆ. ಹತ್ತು ವರ್ಷದಲ್ಲಿ ಲಕ್ಷಾಂತರ ಕೋಟಿ ರು. ಗಳ ಭ್ರಷ್ಟಾಚಾರದಲ್ಲಿ ಸಿಕ್ಕಿ ಹಾಕಿಕೊಂಡಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಭ್ರಷ್ಟಚಾರವನ್ನು ಬುಡಸಮೇತ ಕಿತ್ತು ಹಾಕದಿದ್ದರೆ ದೇಶಕ್ಕೆ ಗಂಡಾಂತರ ಕಾದಿದ್ದು, ಸುಭದ್ರ ರಾಷ್ಟ್ರಕ್ಕಾಗಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ. ನೇಮಿರಾಜನಾಯ್ಕ ಮತದಾರರಲ್ಲಿ ಮನವಿ ಮಾಡಿದರು.
ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಪರ ಮತ ಯಾಚಿಸಿ ಅವರು ಮಾತನಾಡಿದರು.
ಹತ್ತು ವರ್ಷದಲ್ಲಿ ದೇಶದಲ್ಲಿ ಜರುಗಿದ 2ಜಿ ಹಗರಣ, ಕಾಮನ್ವೆಲ್ತ್ ಗೆಮ್ಸ್ ಅವ್ಯವಹಾರ, ಭೂ ಅಕ್ರಮಗಳಿಂದಾಗಿ ದೇಶಕ್ಕೆ ಸಾಕಷ್ಟು ಕಳಂಕ ಬಂದಿದೆ. ಈ ಕಳಂಕ ತೊಡೆದು ಹಾಕಲು ಬಿಜೆಪಿ ಬೆಂಬಲಿಸುವಂತೆ ಕರೆ ನೀಡಿದರು.
ಕನಿಷ್ಠ ಪಕ್ಷ ಎರಡು ಸಾವಿರ ಎಕರೆ ಒಣಭೂಮಿಗೆ ಶಾಶ್ವತ ನೀರೊದಗಿಸುವ ಚಿಲುವಾರಬಂಡಿ ಏತ ನೀರಾವರಿ ಯೋಜನೆ ಸೇರಿದಂತೆ ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ, ಏತನೀರಾವರಿ ಯೋಜನೆಗಳ ಪುನರುಜ್ಜೀವನಗೊಳಿಸುವಂಥ ಸಾಕಷ್ಟು ಕಾರ್ಯಗಳನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಜಾರಿಗೊಂಡಿದ್ದುವು. ಅಲ್ಲದೆ ತಂಬ್ರಹಳ್ಳಿಯ ಕುದುರೆಕಾಲುವೆ ನವೀಕರಣ, ಸುತ್ತಲಿನ ಏತ ನೀರಾವರಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡು ರೈತರಿಗೆ ಅನುಕೂಲ ಮಾಡಿ ಕೊಡಲಾಯಿತು ಎಂದರು.
ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಅಂಗಡಿ ಗವಿಸಿದ್ದಪ್ಪ, ವಿಪ ಸದಸ್ಯ ಕಿನ್ನಾಳ್ ಸುಬಾಷ್, ಡಿಶ್ ಮಂಜುನಾಥ, ಪಿ. ಸೂರ್ಯಬಾಬು, ನರೆಗಲ್ ಕೊಟ್ರೇಶ್, ಶರೀಫ್ಸಾಬ್, ಎಸ್.ಎಂ. ಪ್ರಕಾಶ್, ಸಂಡೂರು ಮೆಹಬೂಬ್ ಬಾಷಾ, ಮಡಿವಾಳ ಕೊಟ್ರೇಶ್, ಬಸವರಾಜ್, ಶಾಂತಪ್ಪ ಭಾಗವಹಿಸಿದ್ದರು.
ಶ್ರೀರಾಮುಲು ಪರ ಬಿಜೆಪಿ ಮುಖಂಡರ ಪ್ರಚಾರ
ಕಂಪ್ಲಿ: ಬಳ್ಳಾರಿ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಪರ ಬಿಜೆಪಿ ಮುಖಂಡ ಮಹೇಶರೆಡ್ಡಿ ಕೋಳೂರು ವ್ಯಾಪ್ತಿಯ ವಿವಿಧ ಗ್ರಾಮಗಳ ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಕೋಳೂರು, ಸಿಂದಿಗೇರಿ, ಬಯಲೂರು, ದಮ್ಮೂರು, ಕಗ್ಗಲ್, ಸೋಮಸಮುದ್ರ ಮದಿರೆ, ಭಾಗ್ಯನಗರ ಇತರ ಗ್ರಾಮಗಳಲ್ಲಿ ಮತ ಯಾಚಿಸಿದರು. ಕೋಳೂರು ಜಿಪಂ ಸದಸ್ಯೆ ಮಮತಾ ಮಹೇಶರೆಡ್ಡಿ, ಶೇಖಣ್ಣ, ಕುಮಾರಪ್ಪ, ವಿಜಯಕುಮಾರ್, ಕೋನಾದ ವೀರೇಶ, ಶಿವಾನಂದಪ್ಪ, ಗಾದಿಲಿಂಗಪ್ಪ, ಪ್ರಕಾಶ, ಗುರಪ್ಪ ಇತರರಿದ್ದರು.
ಲಕ್ಷ ಮತಗಳ ಅಂತರದಿಂದ ಶ್ರೀರಾಮುಲು ಗೆಲವು
ಕಂಪ್ಲಿ: ಜನಸಾಮಾನ್ಯರ ಸೇವೆ ಮಾಡುತ್ತ ಜನ ಮಾನಸದಲ್ಲಿರುವ ಸ್ವಾಭಿಮಾನಿ ಬಿ. ಶ್ರೀರಾಮುಲು ಅವರು ಲಕ್ಷಕ್ಕಿಂತ ಅಧಿಕ ಮತಗಳಿಂದ ಜಯ ಗಳಿಸಲಿದ್ದಾರೆ ಎಂದು ನಂ. 10 ಮುದ್ದಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಳ್ಳಾರಿ ಮಾರುತಿ ತಿಳಿಸಿದರು. ಸಮೀಪದ ನಂ. 10 ಮುದ್ದಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯಲ್ಲಮ್ಮ ಕ್ಯಾಂಪ್ನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಪರ ಮನೆ ಮನೆಗೆ ತೆರಳಿ ಮತ ಯಾಚಿಸಿ ಮಾತನಾಡಿದರು. ಬಿ. ಶ್ರೀರಾಮುಲು ಅವರು ಯಾವುದೇ ಹಗರಣಗಳಲ್ಲಿ ಭಾಗಿಯಾಗಿರದೆ ಸ್ವಚ್ಛಂದ ವ್ಯಕ್ತಿಯಾಗಿದ್ದಾರೆ. ವಾಲ್ಮೀಕಿ ಸಮುದಾಯ ಸೇರಿ ಎಲ್ಲ ಸಮುದಾಯದವರನ್ನು ಸಮಾನವಾಗಿ ಕಂಡು ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಇವರ ಗೆಲವು ನಿಶ್ಚಿತವಾಗಿದ್ದು, ಶ್ರೀರಾಮುಲು ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು. ಮತ ಯಾಚನೆಯಲ್ಲಿ ಬಿ.ಡಿ. ಶಂಕ್ರಪ್ಪ, ಬಿ.ಎಸ್. ಶಿವಮೂರ್ತಿ, ಜಡೆ ಮಹಾದೇವ, ವಿ. ರಂಗಪ್ಪ, ಜಿ. ಶೇಖರಪ್ಪ, ಎಸ್. ಗೋಪಾಲ, ವಿಪ್ರದ ಭೀಮೇಶ್, ದಂಡಿನ ಗೋಪಾಲ, ಬಿಂಗಿ ತಿಮ್ಮಪ್ಪ, ಎಚ್. ಗೋಪಾಲ್, ಎಚ್. ಈರಣ್ಣ, ಜಡೆ ಹರಿಶ್ಚಂದ್ರಪ್ಪ, ಡಿ. ಪದ್ದಮ್ಮ, ತಳವಾರ ರೇಣುಕಮ್ಮ, ಬಿ. ಲಕ್ಷ್ಮಿ ಇತರರಿದ್ದರು.
ಶ್ರೀರಾಮುಲು ಪರ ಎಂ.ಬಿ. ಬಸವರಾಜ ಪ್ರಚಾರ
ಹೂವಿನಹಡಗಲಿ: ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಪರ ತಾಲೂಕು ಬಿಜೆಪಿ ವಕ್ತಾರ ಎಂ.ಬಿ. ಬಸವರಾಜ ತಾಲೂಕಿನ ಸೋಗಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿದರು.
ದೇಶದ ಸಮಗ್ರ ಅಭಿವೃದ್ಧಿಗಾಗಿ ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಬಿ. ಶ್ರೀರಾಮುಲು ಅವರಿಗೆ ಮತ ನೀಡಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಸೋಗಿ ಗ್ರಾಮದ ನೂರಾರು ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ಮತ ಯಾಚನೆ ಜರುಗಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

