ವ್ಯಾಪಾರಿ ಮೇಲೆ ಹಲ್ಲೆ: ದೂರು ದಾಖಲು
ಬಳ್ಳಾರಿ: ಬೀದಿ ಬದಿಯಲ್ಲಿ ಚಿಕನ್ ಪಕೋಡ ಮಾರುತ್ತಿರುವ ಅಂಗವಿಕಲನ ಮೇಲೆ ಕ್ಷುಲ್ಲಕ ಕಾರಣಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಎಂದು ಹೇಳಿಕೊಂಡ ನಾಲ್ವರು ಹಲ್ಲೆ ಮಾಡಿರುವ ಘಟನೆ ನಗರ ಎಸ್ಪಿ ಸರ್ಕಲ್ನಲ್ಲಿ ನಡೆದಿದೆ. ಲಕ್ಷ್ಮಣ ಎಂಬಾತ ರಾತ್ರಿ ಬೀದಿ ಬದಿಯಲ್ಲಿ ಚಿಕನ್ ಪಕೋಡ ಮಾರುತ್ತಿದ್ದರು ಈ ಸಂದರ್ಭ ಶಿವರಾಜ್, ಮಂಜು, ಪ್ರಸಾದ್, ಸುಧಾಕರ್ ಎನ್ನುವವರು ರು. 150ಗಳ ಚಿಕನ್ ತಿಂದು, ಬಿಲ್ ಕೊಡುವಂತೆ ಕೇಳಿದಾಗ, ನಾವು ಕರ್ನಾಟಕ ರಕ್ಷಣಾ ವೇದಿಕೆಯವರು ಎಂದು ಹೇಳಿಕೊಂಡಿದ್ದಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ಲಕ್ಷ್ಮಣನ ಮೇಲೆ ನಾಲ್ವರು ಹಲ್ಲೆ ಮಾಡಿದ್ದಾರೆ. ಈ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮದೇವ್ ಅವಹೇಳನಕಾರಿ ಹೇಳಿಕೆ: ಖಂಡನೆ
ಸಿರುಗುಪ್ಪ: ಯೋಗಗುರು ಬಾಬಾ ರಾಮದೇವ್ ದಲಿತರ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡಿಸಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಾಗರ ಬಣ) ಸಿರುಗುಪ್ಪ ತಾಲೂಕು ಘಟಕದ ಸಂಚಾಲಕ ಎಚ್.ಬಿ. ಗಂಗಪ್ಪ ನೇತೃತ್ವದಲ್ಲಿ ಉಪ ತಹಸೀಲ್ದಾರ್ ಬಿ. ಮಲ್ಲೇಶಪ್ಪ ಮೂಲಕ ರಾಜ್ಯಪಾಲರಿಗೆ ಶನಿವಾರ ಮನವಿ ಸಲ್ಲಿಸಿದರು.
ಲಕ್ನೋ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿಯವರು ದಲಿತರ ಮನೆಗಳಲ್ಲಿ ಹನಿಮೂನ್, ಪಿಕ್ನಿಕ್ ಮಾಡಲು ಹೋಗುತ್ತಾರೆ ಎಂದು ರಾಮ್ ದೇವ ಹೇಳಿರುವುದು ದಲಿತರಿಗೆ ಮಾಡಿದ ಅಪಮಾನವಾಗಿದೆ. ಈ ಹೇಳಿಕೆ ಹಿಂಪಡೆದು ದಲಿತರಲ್ಲಿ ಕ್ಷಮೆ ಯಾಚಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಏ. 28ರಂದು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬಾಬಾ ರಾಮ್ದೇವರ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಎಚ್.ಬಿ. ಗಂಗಪ್ಪ ತಿಳಿಸಿದ್ದಾರೆ.
ಈ ಸಂದರ್ಭ ಸಂಘಟನಾ ಸಂಚಾಲಕ ದೊಡ್ಡಬಸಪ್ಪ, ಗಿರಿಮಲ್ಲಪ್ಪ, ದಲಿತ ಒಕ್ಕೂಟದ ಎಸ್. ವೀರೇಶ, ಎಂ. ವಿರೇಶ, ಎಸ್. ರಫಿ, ವೀರೇಶ, ರಾಮಾಂಜಿನಿ, ಹುಸೇನಪ್ಪ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

