ಬಳ್ಳಾರಿ

ಗೋಲ್ಡ್‌ಪ್ಲಸ್: ಅಕ್ಷಯ ತೃತೀಯ ಸಂಭ್ರಮ

Published On :

ಬಳ್ಳಾರಿ: ಗೋಲ್ಡ್ ಪ್ಲಸ್ ಅಕ್ಷಯ ತೃತೀಯವನ್ನು ಸಂಭ್ರಮಿಸುವ ಅವಕಾಶ ನೀಡುತ್ತಿದೆ. ಚಿನ್ನದ ಉತ್ಸಾಹ ಉತ್ತೇಜಿಸುವ ನಿಟ್ಟಿನಲ್ಲಿ ಗೋಲ್ಡ್ ಪ್ಲಸ್, ಪ್ರತಿ ಹತ್ತು ಗ್ರಾಂ ಚಿನ್ನ ಖರೀದಿಗೆ ಚಿನ್ನದ ನಾಣ್ಯ ಉಚಿತವಾಗಿ ನೀಡುತ್ತಿದೆ. ಜೊತೆಗೆ ಗ್ರಾಹಕರು ಪ್ರತಿ ಖರೀದಿ ಮೇಲೆ ಖಚಿತ ಉಡುಗೊರೆ ಪಡೆಯಬಹುದು. ಈ ಕೊಡುಗೆ ಮೇ 2ರ ವರೆಗೆ ಕರ್ನಾಟಕದ ಎಲ್ಲ ಗೋಲ್ಡ್ ಪ್ಲಸ್ ಮಳಿಗೆಗಳಲ್ಲಿ ಇರುತ್ತದೆ ಎಂದು ಟೈಟಾನ್ ಆಭರಣ ವಿಭಾಗದ ರೀಟೇಲ್ ಮತ್ತು ಮಾರುಕಟ್ಟೆ ಉಪಾಧ್ಯಕ್ಷ ಸಂದೀಪ್ ಕುಲ್ಹಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತಾಗಿ ಪತ್ರಿಕಾ ಪ್ರಕಟಣೆ ನೀಡಿರುವ ಭಾರತದಲ್ಲಿ ಅಕ್ಷಯ ತೃತೀಯ ದಿನ ಆಭರಣ ಖರೀದಿ ಯಶಸ್ಸಿನ ಸಂಕೇತ. ಚಿನ್ನದಲ್ಲಿ ಈ ಭಾವನೆ ಬಲವಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರಿಗಾಗಿ ನಾನಾ ಯೋಜನೆ ಘೋಷಿಸಿದ್ದೇವೆ. ಗೋಲ್ಡ್‌ಪ್ಲಸ್ ಗ್ರಾಹಕರಿಗೆ ಟಾಟಾ ಹೌಸ್‌ನ ಶುದ್ಧ ಆಭರಣ ಖರೀದಿ ಅವಕಾಶ ನೀಡುತ್ತಿದೆ ಎಂದರು.
ಗೋಲ್ಡ್ ಪ್ಲಸ್ ಆಭರಣಗಳು 22 ಮತ್ತು 18 ಕ್ಯಾರೆಟ್ ಶುದ್ಧತೆ ಭರವಸೆ ಹೊಂದಿದೆ. ಉತ್ಕೃಷ್ಟ ಕಸೂತಿಯಲ್ಲಿವೆ. ಪ್ರತಿ ಉತ್ಪನ್ನ ಕೂಡ ಶುದ್ಧತೆಯ ಪತ್ರ ಹೊಂದಿರುತ್ತದೆ ಎಂದು ತಿಳಿಸಿದ್ದಾರೆ.ವೈಶಾಖ ಮಾಸದ ತೃತೀಯ ದಿನವಾದ ಅಕ್ಷಯ ತೃತೀಯ, ಧಾರ್ಮಿಕ ಪಂಚಾಂಗದ 4 ಪ್ರಮುಖ ದಿನಗಳಲ್ಲಿ ಒಂದಾಗಿದೆ. ಈ ದಿನದಂದು ಸೂರ್ಯ ಮತ್ತು ಚಂದ್ರರು ಸಮಾನಾಂತರ ಪ್ರಕಾಶಮಾನ ಹೊಂದಿರುತ್ತಾರೆ. ಈ ದಿನ ಭಗವಾನ್ ವಿಷ್ಣುವಿನ ಅವತಾರವಾದ ಪರಶುರಾಮನ ಜನ್ಮ ದಿನ ಕೂಡ ಹೌದು. ಅಕ್ಷಯ ಎಂದರೆ ಖಾಲಿಯಾಗದ ಎಂಬ ಅರ್ಥವಿದೆ. ಹೀಗಾಗಿ ಈ ದಿನ ಹೊಸ ಬಗೆಯ ಹೂಡಿಕೆಗೆ, ಆಭರಣ ಖರೀದಿಗೆ ಉತ್ತಮವಾಗಿದೆ. ಈ ವರ್ಷ ಮೇ 2, 2014ರಂದು ಅಕ್ಷಯ ತೃತೀಯ ಬಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.