ಬಳ್ಳಾರಿ

ಸುದ್ದಿ ಸಂಕ್ಷೇಪ

Published On :

6ರಿಂದ ಜೀರ್ಣೋದ್ಧಾರ
ಹಗರಿಬೊಮ್ಮನಹಳ್ಳಿ: ತಾಲೂಕಿನ ಪಿಂಜಾರ್ ಹೆಗ್ಡಾಳ ಗ್ರಾಮದಲ್ಲಿ ಶ್ರೀಮತ್ಸ್ಯಾವತಾರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಧ್ವಜಸ್ತಂಭ ಪ್ರತಿಷ್ಠಾಪನಾ ಕಾರ್ಯಕ್ರಮ ಫೆ. 6ರಿಂದ 9ರ ವರೆಗೆ ಜರುಗಲಿದೆ ಎಂದು ದೇವಸ್ಥಾನ ಸಮಿತಿಯ ಹೆಗ್ಡಾಳ ಶ್ರೀನಿವಾಸಶೆಟ್ಟಿ ತಿಳಿಸಿದ್ದಾರೆ. ಫೆ. 6ರಂದು ಸಂಜೆ ವಿಶ್ವಕ್ಸೇನ ಪೂಜೆಯೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿವೆ. ಫೆ. 7ರಂದು ಕುಂಭ ಆವಾಹನೆ, ಸ್ತಂಭ ಅಭಿಷೇಕ, ಫೆ. 8ರಂದು 108 ಕಳಸ ಅಭಿಷೇಕ, ಗೋಷ್ಠಿ ಹಾಗೂ ಫೆ. 9ರಂದು ಧ್ವಜಸ್ತಂಭ, ಧ್ವಜಾರೋಹಣ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ ಎಂದು ಅವರು ಹೇಳಿದ್ದಾರೆ.
ಭಾವೈಕ್ಯತಾ ದಿನಾಚರಣೆ
ಹೊಸಪೇಟೆ: ತಾಲೂಕಿನ ಮರಿಯಮ್ಮನಹಳ್ಳಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಜೆ.ಸಿ.ಐ. ಮರಿಯಮ್ಮನಹಳ್ಳಿ ಕಲಾ-2014ರ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿ. ಜಿಲಾನ್ ಬಾಷಾ, ಕುರಿ ಶಿವಮೂರ್ತಿ, ಮರಿಯಮ್ಮನಹಳ್ಳಿಯ ವೈದ್ಯ ಡಾ.ಜಿ.ಎಂ. ಸೋಮೇಶ್ವರ, ಜೆ.ಸಿ.ಐ. ವಲಯ-24ರ ಅಧ್ಯಕ್ಷ ರಾಜಾಭಕ್ಷಿ, ಉಪಾಧ್ಯಕ್ಷೆ ಸವಿತಾ ರಮೇಶ್ ಮಾತನಾಡಿದರು. 2014ನೇ ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಂ. ಸೋಮೇಶ್ ಉಪ್ಪಾರ ಇವರಿಗೆ ನಿಕಟಪೂರ್ವ ಅಧ್ಯಕ್ಷ ಸಿ. ಪ್ರಕಾಶ್ ಅಧಿಕಾರ ಹಸ್ತಾಂತರಿಸಿದರು.
ವಲಯಾಧ್ಯಕ್ಷ ಪ್ರಮಾಣವಚನ ಬೋಧಿಸಿದರು. ನೂತನ ಕಾರ್ಯಕಾರಿ ಸಮಿತಿ ಸದಸ್ಯ ಐ. ಸುಬ್ಬರಾವ್, ಕೆ. ಜಯಪ್ರಕಾಶ್, ಬಿ.ಎಂ.ಎಸ್. ಕೊಟ್ರೇಶ್, ಸದಸ್ಯ ಎಸ್. ನವೀನ್ಕುಮಾರ್, ಡಾ. ಈಡಿಗರ ಎರ್ರಿಸ್ವಾಮಿ, ಪಿ. ರಾಮಚಂದ್ರ, ಎಚ್.ಜಿ. ಮರೇಗೌಡ ಇವರಿಗೆ ವಲಯ ಉಪಾಧ್ಯಕ್ಷೆ ಪ್ರಮಾಣವಚನ ಬೋಧಿಸಿದರು.
ಜೆ.ಸಿ.ಐ. ಮಾಜಿ ಅಧ್ಯಕ್ಷ ಎಂ. ಬದರಿನಾಥ, ಎಸ್. ನವೀನ್ಕುಮಾರ್, ಗೌತಮ್, ಪಿ. ರಾಮಚಂದ್ರ, ಎಸ್. ಸನತ್ಕುಮಾರ್, ಪ್ರಾಚಾರ್ಯ ಪ್ರಾಣೇಶ್ ಕುಲಕರ್ಣಿ, ಉಪನ್ಯಾಸಕಿ ಮಂಜುಳಾ, ಭಾರ್ಗವಿ, ಪ್ರಕಾಶ್, ಸಂದೀಪ್ ರಾಯಸಂ, ಬಿ.ಎಂ.ಎಸ್. ಮೃತ್ಯುಂಜಯ, ಗೌತಮ್ ಜೈನ್ ಇದ್ದರು. ಪತ್ತಾರ್ ಪೀರಸಾಬ್ ರಿವಾಯತ್, ಮೊಹರಂ ಪದಗಳ ಗಾಯನ ಕಾರ್ಯಕ್ರಮ ನಡೆಯಿತು. ಪದಗ್ರಹಣ ಕಾರ್ಯಕ್ರಮದ ನಂತರ ಸಂಡೂರಿನ ಜೆಸಿ ಡಿ.ಜೆ. ಪ್ರದೀಪ್ ಕಾಲೇಜು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕುರಿತು ತರಬೇತಿ ನೀಡಿದರು.
ಕೌಶಲ್ಯ, ಕ್ರಿಯಾತ್ಮಕತೆ ಬೆಳೆಸಿ: ಗದ್ದಿ
ಹನುಮಸಾಗರ: ಪ್ರತಿಯೊಬ್ಬರಲ್ಲೂ ವಿಶೇಷವಾದ ಕೌಶಲ್ಯ ಹಾಗೂ ಕ್ರಿಯಾತ್ಮಕ ಗುಣಗಳಿರುತ್ತವೆ. ಅವುಗಳನ್ನು ಪ್ರದರ್ಶಿಸಲು ಅವಕಾಶ ಸಿಗಬೇಕಿದೆ ಎಂದು ಜೇಸಿಐ ವಲಯ ನಿರ್ದೇಶಕ ಗಣೇಶ ಗದ್ದಿ ಅವರು ಹೇಳಿದರು.
ಜೇಸೀ ಸಂಸ್ಥೆಯಲ್ಲಿ ನಡೆದ ಚಾಪ್ಟರ್ ಡೆವಲಪ್ಮೆಂಟ್ ಮ್ಯಾನೇಜ್ಮೆಂಟ್ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ಇಳಕಲ್ನ ಚಂದ್ರಶೇಖರ ಜಾಪಗಲ್ ಮಾತನಾಡಿದರು. ಕರಿಬಸವರಾಜ ಬದಾಮಿ ತರಬೇತಿ ನೀಡಿದರು. ಸ್ಥಳೀಯ ಜೆಸಿಐ ಅಧ್ಯಕ್ಷ ಪ್ರಾಣೇಶಾಚಾರ ಪಪ್ಪು ಅವರನ್ನು ಗಣೇಶ ಗದ್ದಿ ಸನ್ಮಾನಿಸಿದರು. ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ನ ವ್ಯವಸ್ಥಾಪಕ ರಾಘವೇಂಧ್ರ ಜಮಖಂಡಿ, ವಿಶ್ವನಾಥ ನಾಗೂರ, ವಾಸುದೇವ ನಾಗೂರ, ಸಿ.ಎನ್. ಶಾಸ್ತ್ರಿ, ಕಿಶನರಾವ್ ಕುಲಕರ್ಣಿ, ವೆಂಕಟೇಶ ಕಟಗೇರಿ, ಭೋಜರಾಜ ಪತ್ತಾರ, ವಿಜಯಕುಮಾರ ಮಠ, ಗೋವಿಂದ ಎಣ್ಣಿ, ಬಸವರಾಜ ಹಕ್ಕಿ ಇದ್ದರು. ಶ್ರೀನಿವಾಸ ಜಹಗೀರದಾರ ನಿರೂಪಿಸಿ ವಂದಿಸಿದರು.
ಮೋದಿ ಪ್ರಧಾನಿ ಖಚಿತ: ಚೆನ್ನಕೇಶವ
ಗಂಗಾವತಿ:  ಈ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗುವುದು ಖಚಿತ ಎಂದು ಬಿಜೆಪಿ ಮುಖಂಡ ಎಚ್.ಜಿ. ಚೆನ್ನಕೇಶವ ಹೇಳಿದರು. ಬಿಜೆಪಿ ಸೇರಿದ ಬಳಿಕ ಪ್ರಥಮ ಬಾರಿಗೆ ಕಚೇರಿಗೆ ಆಗಮಿಸಿ, 40 ವರ್ಷಗಳಿಂದ ಕಾಂಗ್ರೆಸ್ ನಾಯಕರಾಗಿರುವ ತಮ್ಮ ತಂದೆ ಎಚ್.ಜಿ. ರಾಮುಲು ಅವರ ಆಶೀರ್ವಾದ ತಮ್ಮ ಮೇಲಿದೆ ಎಂದರು. ಕೆ. ವಿರೂಪಾಕ್ಷಪ್ಪ, ಸಂಸದ ಶಿವರಾಮಗೌಡ, ಮಾಜಿ ಪರಣ್ಣ ಮುನವಳ್ಳಿ, ಎಚ್.ಎಂ. ಸಿದ್ದರಾಮಸ್ವಾಮಿ, ತಿಪ್ಪೇರುದ್ರಸ್ವಾಮಿ, ಎಸ್.ಬಿ. ಹಂದ್ರಾಳ, ಗಿರೇಗೌಡ, ನರಸಿಂಗ ರಾವ್, ಟಿ. ರಾಮಚಂದ್ರ, ಮನೋಹರ ಗೌಡ ಇದ್ದರು.
ಬಲ್ಡೋಟ ಸಮೂಹದ ವಿಜ್ಞಾನಿಗಳಿಗೆ ರಾಷ್ಟ್ರೀಯ ಪ್ರಶಸ್ತಿ
ಹೊಸಪೇಟೆ: ಭೂ ವಿಜ್ಞಾನ ರಂಗದ ಪ್ರತಿಷ್ಠಿತ ಸಂಸ್ಥೆಯಾದ ಬಲ್ಡೋಟ ಸಮೂಹದ ಇಬ್ಬರು ಭೂವಿಜ್ಞಾನಿಗಳಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ದೇಶದ ಖನಿಜ ಶೋಧನೆ ಮತ್ತು ಉತ್ಖನನ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವುದಕ್ಕಾಗಿ ಎಂಎಸ್ಪಿಎಲ್ ಸಂಸ್ಥೆಯ ಉತ್ಖನನ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಶಿಬ್ಬನ್ಕುಮಾರ್ ಭೂಷಣ್ ಮತ್ತು ಕಿರಿಯ ಭೂವಿಜ್ಞಾನಿ ಆಶಿಷ್ಕುಮಾರ್ ಅವರಿಗೆ ರಾಷ್ಟ್ರೀಯ ಭೂವಿಜ್ಞಾನಿ ಪ್ರಶಸ್ತಿ ಲಭ್ಯವಾಗಿದೆ.
ಭಾರತ ಸರ್ಕಾರದ ಗಣಿ ಸಚಿವಾಲಯವು ಪ್ರತಿವರ್ಷ ರಾಷ್ಟ್ರೀಯ ಭೂವಿಜ್ಞಾನಿ ಪ್ರಶಸ್ತಿಯನ್ನು ಭೂ ವಿಜ್ಞಾನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಎರಡು ವಿಭಾಗವಾಗಿ ವಿಂಗಡಿಸಿ ಪ್ರಶಸ್ತಿ ನೀಡುತ್ತಿದ್ದು, ಮೂವತ್ತೈದಕ್ಕಿಂತ ಕಡಿಮೆ ವಯೋವಾನದ ಭೂವಿಜ್ಞಾನಿಗಳಿಗೆ ಯುವ ಸಂಶೋಧಕ ಪ್ರಶಸ್ತಿ ನೀಡಲಾಗಿದೆ.
ಕಲ್ಲಿದ್ದಲು, ತೈಲ, ನೈಸರ್ಗಿಕ ಅನಿಲ, ಅಂತರ್ಜಲ, ಗಣಿಗಾರಿಕೆ ತಂತ್ರಜ್ಞಾನ, ಖನಿಜ ಸಂಸ್ಕರಣೆ, ಮೂಲ ಭೂ ವಿಜ್ಞಾನ, ಭೂ ಪರಿಸರ ಅಧ್ಯಯನ ಮತ್ತು ಸಾಗರಾಭಿವೃದ್ಧಿ ಕ್ಷೇತ್ರಗಳಲ್ಲಿ ಶೋಧನೆ ಮತ್ತು ಉತ್ಖನನ ವಿಭಾಗಗಳಲ್ಲಿ ವಿಶೇಷ ಸೇವೆ ಸಲ್ಲಿಸಿದವರನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಅಪರೂಪದ ಭೂ ಖನಿಜ, ಕಬ್ಬಿಣದ ಅದಿರು, ಪೊಟ್ಯಾಷ್ ಮತ್ತು ಮೂಲಧಾತುಗಳ ಉತ್ಖನನ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿದ್ದಕ್ಕಾಗಿ ಪ್ರಶಸ್ತಿ ಲಭಿಸಿದೆ ಎಂದು ಎಂಎಸ್ಪಿಎಲ್ ಸಂಸ್ಥೆಯ ಪಿಆರ್ಒ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.