ಬಳ್ಳಾರಿ

ರಾಷ್ಟ್ರಮಟ್ಟದ ಪೈಕಾ ಕ್ರೀಡಾಕೂಟ: ಫಲಿತಾಂಶ

Published On :

ಬಳ್ಳಾರಿ: 6ನೇ ರಾಷ್ಟ್ರಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟದ ಫಲಿತಾಂಶ ಇಂತಿದೆ. ಫೆ. 3ರಂದು ನಡೆದ ವಿವಿಧ ಕ್ರೀಡೆಗಳ ವಿಜೇತರ ವಿವರ ಈ ರೀತಿ ಇದೆ.
ಟೇಬಲ್ ಟೆನ್ನಿಸ್(ಬಾಲಕರ): ತ್ರಿಪುರ ತಂಡದ ವಿರುದ್ಧ ಮಿಜೋರಾಂ ತಂಡ, ಉತ್ತರಾಖಂಡದ ವಿರುದ್ಧ ತಮಿಳುನಾಡು, ಮಧ್ಯಪ್ರದೇಶದ ತಂಡದ ವಿರುದ್ಧ ಮಣಿಪಾಲ್ ಹಾಗೂ ಉತ್ತರಪ್ರದೇಶ ವಿರುದ್ಧ ಕರ್ನಾಟಕ ತಂಡ ಜಯ ಸಾಧಿಸಿದ್ದು, ಎಲ್ಲ ವಿಜೇತ ತಂಡಗಳು ತಲಾ 3 ಪಾಯಿಂಟ್ ಗಳಿಸಿವೆ. ಸೋತ ಉತ್ತರಪ್ರದೇಶ ತಂಡ ಮಾತ್ರ 2 ಪಾಯಿಂಟ್ ಗಳಿಸಿದ್ದು, ಉಳಿದ ತಂಡಗಳು ಶೂನ್ಯ ಪಾಯಿಂಟ್ ಗಳಿಸಿವೆ.
ಟೇಬಲ್ ಟೆನ್ನಿಸ್(ಬಾಲಕಿಯರ): ಮಿಜೋರಾಂ ವಿರುದ್ಧ ತಮಿಳುನಾಡು ತಂಡ, ಮಧ್ಯಪ್ರದೇಶ ತಂಡದ ವಿರುದ್ಧ ತ್ರಿಪುರ, ಉತ್ತರಪ್ರದೇಶ ತಂಡದ ವಿರುದ್ಧ ಕರ್ನಾಟಕ ಹಾಗೂ ಮಣಿಪುರ ತಂಡದ ವಿರುದ್ಧ ಉತ್ತರಾಖಂಡ ತಂಡ ಜಯ ಸಾಧಿಸಿದ್ದು, ಎಲ್ಲ ವಿಜೇತ ತಂಡಗಳು ತಲಾ 3 ಪಾಯಿಂಟ್ ಗಳಿಸಿವೆ ಹಾಗೂ ಸೋತ ಮಣಿಪುರ ತಂಡ ಮಾತ್ರ 1 ಪಾಯಿಂಟ್ ಪಡೆದಿವೆ.
ಬಾಕ್ಸಿಂಗ್(ಬಾಲಕಿಯರ): 46 ಕೆ.ಜಿ. ವಿಭಾಗದಲ್ಲಿ ಹಿಮಾಚಲಪ್ರದೇಶದ ದೀಪಾ, ಹರಿಯಾಣದ ಜ್ಯೋತಿ, ಕರ್ನಾಟಕದ ಮೇಘನಾ, ಪಂಜಾಬಿನ ಇಂದ್ರಜಿತ್ ಕೌರ್. 48 ಕೆ.ಜಿ. ವಿಭಾಗದಲ್ಲಿ ಹರಿಯಾಣದ ದರ್ಶನಾ, ಮಣಿಪುರದ ಚಂಚನಾದೇವಿ, ತಮಿಳುನಾಡಿನ ಪ್ರದೀಕ್ಷಾ, ಹಿಮಾಚಲಪ್ರದೇಶದ ಕರಿಷ್ಮಾ. 50 ಕೆ.ಜಿ. ವಿಭಾಗದಲ್ಲಿ ಹರಿಯಾಣದ ಅಂಜು ಜಯ ಗಳಿಸಿದ್ದಾರೆ.
ಬಾಕ್ಸಿಂಗ್(ಬಾಲಕರ): 46 ಕೆ.ಜಿ. ವಿಭಾಗದಲ್ಲಿ ಆಂಧ್ರಪ್ರದೇಶದ ಜೆ. ಪ್ರಸಾದ್, ಹರಿಯಾಣದ ಹರೀಶ್, ಹಿಮಾಚಲಪ್ರದೇಶದ ನಿಖಿತ್. 48 ಕೆ.ಜಿ. ವಿಭಾಗದಲ್ಲಿ ಉತ್ತರಾಖಂಡದ ಎಸ್. ಸಂಧು, ಪಂಜಾಬಿನ ಪರ್ಮಿಂದರ್ ಸಿಂಗ್, ಮಣಿಪಾಲ್ನ ಅಟ್ನಬ್ ಮೇಥೇಯಿ. 50 ಕೆ.ಜಿ. ವಿಭಾಗದಲ್ಲಿ ಮಣಿಪಾಲ್ನ ಮೊಹ್ಮದ್ ಇ. ಖಾನ್, ಆಂಧ್ರಪ್ರದೇಶದ ವಿ. ಜ್ಯೋತಿಸ್ವರೂಪ್, ಉತ್ತರಾಖಂಡದ ಹರ್ಮಿಂದ್ ಕುಮಾರ್. 52 ಕೆ.ಜಿ. ವಿಭಾಗದಲ್ಲಿ ಆಂಧ್ರಪ್ರದೇಶದ ಎನ್. ಹರಿಕೃಷ್ಣ, ಹರಿಯಾಣದ ಅಂಕಿತ್, ಮಹಾರಾಷ್ಟ್ರದ ಕೆ.ಎಚ್. ಹರಿದಾಸ್ವಿನ್. 54 ಕೆ.ಜಿ. ವಿಭಾಗದಲ್ಲಿ ಹರಿಯಾಣದ ನವೀನ್ ಬೂರ, ತಮಿಳುನಾಡಿನ ಸಿ.ವಿ. ರಾಮಜಯೇಂದ್ರನ್. 57 ಕೆ.ಜಿ. ವಿಭಾಗದಲ್ಲಿ ಪಂಜಾಬಿನ ಜಶಂದೀಪ್ ಸಿಂಗ್ ವಿಜಯ ಸಾಧಿಸಿದ್ದಾರೆ.
ಬ್ಯಾಡ್ಮಿಂಟನ್ (ಬಾಲಕರ): ಗ್ರೂಪ್ ಎ ಮತ್ತು ಬಿ ವಿಭಾಗದಲ್ಲಿ ಪಂದ್ಯಗಳು ನಡೆದಿದ್ದು, ಪಂದ್ಯದಲ್ಲಿ ಭಾಗವಹಿಸಿದ್ದವರ ವಿವರ ಇಂತಿದ್ದು, ಕಂಸದಲ್ಲಿ ಪಾಯಿಂಟ್ಸ್ಗಳಿವೆ. ಗ್ರೂಪ್ ಎ ನಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಪಂದ್ಯ (2-0) ಹಾಗೂ ಕರ್ನಾಟಕ ಮತ್ತು ಜಾರ್ಖಂಡ್ (2-0). ಗ್ರುಪ್ ಬಿ ವಿಭಾಗದಲ್ಲಿ ಉತ್ತರಾಖಂಡ ಮತ್ತು ಮಿಜೋರಾಂ (2-0) ಹಾಗೂ ಉತ್ತರಾಖಂಡ ಮತ್ತು ಮಧ್ಯಪ್ರದೇಶ (2-0) ಅಂಕಗಳಿಂದ ಜಯ ಸಾಧಿಸಿವೆ.
ಬ್ಯಾಡ್ಮಿಂಟನ್ (ಬಾಲಕಿಯರ): ಗ್ರೂಪ್ ಎ ಮತ್ತು ಬಿ ವಿಭಾಗದಲ್ಲಿ ಪಂದ್ಯಗಳು ನಡೆದಿದ್ದು, ಪಂದ್ಯದಲ್ಲಿ ಭಾಗವಹಿಸಿದ್ದವರ ವಿವರ ಇಂತಿದ್ದು, ಕಂಸಿನಲ್ಲಿ ಸ್ಕೋರ್ ವಿವರ ನೀಡಲಾಗಿದೆ. ಗ್ರೂಪ್ ಎ ನಲ್ಲಿ ತಮಿಳುನಾಡು ಮತ್ತು ಜಾರ್ಖಂಡ್ (2-1), ಜಾರ್ಖಂಡ್ ಮತ್ತು ಮಿಜೋರಾಂ (2-0), ತಮಿಳುನಾಡು ಮತ್ತು ತ್ರಿಪುರ (2-0). ಗ್ರುಪ್ ಬಿ ನಲ್ಲಿ ಕರ್ನಾಟಕ ಮತ್ತು ಉತ್ತರಾಖಂಡ (2-0), ಹಿಮಾಚಲಪ್ರದೇಶ ಮತ್ತು ಕರ್ನಾಟಕ (2-1), ಉತ್ತರಾಖಂಡ ಮತ್ತು ಮಧ್ಯಪ್ರದೇಶ (2-0), ಹಿಮಾಚಲಪ್ರದೇಶ ಮತ್ತು ಮಧ್ಯಪ್ರದೇಶ (2-0), ತಮಿಳುನಾಡು ಮತ್ತು ಮಿಜೋರಾಂ (2-0), ಕರ್ನಾಟಕ ಮತ್ತು ಮಧ್ಯಪ್ರದೇಶ (2-0), ಹಿಮಾಚಲಪ್ರದೇಶ ಮತ್ತು ಉತ್ತರಾಖಂಡ(2-0) ಅಂಕ ಪಡೆದಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.