ಬಳ್ಳಾರಿ

ಜನಪ್ರತಿನಿಧಿಗಳು ಜನ ಸೇವಕರಾಗಿ

Published On :

ಕುಷ್ಟಗಿ:  ಸ್ಥಳೀಯ ಹಾಗೂ ಗ್ರಾಮೀಣ ಭಾಗದಲ್ಲಿರುವ ಚುನಾಯಿತ ಪ್ರತಿನಿಧಿಗಳು ಚುನಾವಣೆಗೋಸ್ಕರ ಕ್ರಿಯಾಶೀಲರಾಗಿರದೇ ಸದಾ ನಿಸ್ವಾರ್ಥ, ಪ್ರಾಮಾಣಿಕತೆಯಿಂದ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿ, ಜನರ ಸೇವಕರಾಗಿ ಎಂದು ಮಾಜಿ ಶಾಸಕ ಕೆ. ಶರಣಪ್ಪ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಇಲ್ಲಿನ ಬುತ್ತಿಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಲೋಕಸಭಾ ಚುನಾವಣೆ ಪೂರ್ವ ಸಿದ್ಧತೆ ಹಾಗೂ ಪಕ್ಷದ ಸಂಘಟನೆ ಹಿನ್ನೆಲೆಯಲ್ಲಿ ಜೆಡಿಎಸ್ ತಾಲೂಕು ಮಟ್ಟದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯ ಬೇಡ. ಮುಖಂಡರ ಸಲಹೆಯಂತೆ ಪಕ್ಷ ಸಂಘಟನೆಗೆ ಕಾರ್ಯಕರ್ತರು ಶ್ರಮಿಸಿದರೆ ಮಾತ್ರ ಪಕ್ಷ ಆಡಳಿತಕ್ಕೆ ಬರಲು ಸಾಧ್ಯವಾಗುತ್ತದೆ ಎಂದರು.
ಪ್ರಕಾಶ ರಾಠೋಡ್ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷದ ವರಿಷ್ಠರು ಯಾರನ್ನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರೂ ಅವರ ಗೆಲುವಿಗೆ ಶ್ರಮಿಸೋಣ ಎಂದರು.
ಪಕ್ಷದ ವತಿಯಿಂದ ಕರೆಯಲಾಗಿದ್ದ ಸಭೆಯ ಮಾಹಿತಿ ಕಾರ್ಯಕರ್ತರಿಗೆ ಮುಟ್ಟಿರಲಿಲ್ಲ. ಹೀಗಾಗಿ, ಸಭೆಯಲ್ಲಿ ಕಾರ್ಯಕರ್ತರ ಸಂಖ್ಯೆ ಕಡಿಮೆ ಇತ್ತು. ಹೀಗಾಗಿ, ಬೆಳಗ್ಗೆ 11ಕ್ಕೆ ಕರೆಯಲಾಗಿದ್ದ ಸಭೆಯನ್ನು ಸಂಜೆ 4ಕ್ಕೆ ನಡೆಸಲಾಯಿತು.
ಮಾಹಿತಿ ನೀಡಿಲ್ಲ: ಪಕ್ಷದ ವತಿಯಿಂದ ನಡೆದ ಕಾರ್ಯಕರ್ತರ ಸಭೆಯ ಕುರಿತು ಎರಡು ದಿನಗಳ ಹಿಂದೆಯೇ ತಾಲೂಕು ಅಧ್ಯಕ್ಷ ಸಿ.ಎಂ ಹಿರೇಮಠ ಸುದ್ದಿಗೋಷ್ಠಿಯಲ್ಲಿ ಶನಿವಾರ 11ಕ್ಕೆ ಸ್ಥಳೀಯ ಬುತ್ತಿಬಸವೇಶ್ವ ದೇವಸ್ಥಾನದ ಸಭಾಂಗಣದಲ್ಲಿ ಸಭೆ ನಡೆಯುವ ಮಾಹಿತಿ ನೀಡಿದ್ದರು. ಆದರೆ, ಸಭೆಯಲ್ಲಿ ಕಾರ್ಯಕರ್ತರು ಸಭೆ ಕುರಿತಂತೆ ತಮಗೆ ಮಾಹಿತಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ.
ಪಕ್ಷದ ತಾಲೂಕಾಧ್ಯಕ್ಷ ಸಿ.ಎಂ. ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷೆ ಮಾಲತಿ ನಾಯಕ, ತಾಪಂ ಸದಸ್ಯೆ ಸುವರ್ಣಾ ಕುಂಬಾರ, ಯುವ ಮುಖಂಡ ಕೆ. ಮಹೇಶ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಮಿನುದ್ದೀನ್ ಮುಲ್ಲಾ, ಮಾಜಿ ಅಧ್ಯಕ್ಷೆ ಕಾಳಮ್ಮ ಬಡಿಗೇರ, ಮಹೇಶ ಕೊನಸಾಗರ, ವಜಿರಲಿ ಗೋನಾಳ, ಮಹಾಂತೇಶ ಕುಷ್ಟಗಿ, ರಾಘವೇಂದ್ರ ದೇಸಾಯಿ, ಚಂದ್ರು ಬಾವಿಕಟ್ಟಿ, ಬಸವರಾಜ ಕುದರಿಮೋತಿ, ಡಾ. ಬಾಬು, ಶರಣಪ್ಪ ಬಿಜಕಲ್, ಅಶೋಕ ಲಾಯಗುಂದಿ, ಶರಣಪ್ಪ ಯರಗೇರಾ, ಸಿದ್ಧನಗೌಡ ಪಾಟೀಲ ಹಾಗೂ ಪಕ್ಷದ ತಾಲೂಕು ಘಟಕದ ವಿವಿಧ ವಿಭಾಗಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಮಲ್ಲಿಕಾರ್ಜುನ ಮೇಟಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.