ನಮೋ ಬ್ರಿಗೇಡ್ನಿಂದ ಚಹಾ ವಿತರಣೆ
ಹೊಸಪೇಟೆ: ನಗರದಲ್ಲಿ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ನಮೋ ಬ್ರಿಗೇಡ್ ವತಿಯಿಂದ ನಮೋ ಚಹಾ ವಿತರಣೆ ಕಾರ್ಯವು ಯಶಸ್ವಿಯಾಗಿ ನಡೆಯಿತು.
ತಳ್ಳುವ ಬಂಡಿಯಲ್ಲಿ ಚಹಾ ವಿತರಣೆ ಮಾಡುತ್ತಾ ಮೆರವಣಿಗೆ ನಡೆಸುವ ಮೂಲಕ ಜನರಿಗೆ ಉಚಿತವಾಗಿ ಚಹಾ ವಿತರಿಸಿದರು. ನಗರದ ವಡಕರಾಯ ದೇವಸ್ಥಾನದಿಂದ ಆರಂಭವಾದ ಚಹಾ ವಿತರಣಾ ಕಾರ್ಯವು ನಗರದ ಕೌಲ್ಪೇಟೆ, ಮೇನ್ ಬಜಾರ್, ಹಂಪಿ ರೋಡ್, ಬಸ್ ನಿಲ್ದಾಣ ಮಾರ್ಗವಾಗಿ ರೋಟರಿ ವೃತ್ತದಲ್ಲಿ ಸಭೆ ಸೇರಿ ಬಿಜೆಪಿ ಬೆಂಬಲಿತ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಮಂತ್ರಿಯಾಗಬೇಕು ಎನ್ನುವ ಘೋಷಣೆಗಳನ್ನು ಕೂಗಿ ನರೇಂದ್ರ ಮೋದಿಗೆ ಬೆಂಬಲ ಸೂಚಿಸಿದರು. ಬಿಜೆಪಿ ಮುಖಂಡ ಅಶೋಕ್ ಜೀರೆ ಮಾತನಾಡಿ, ದೇಶದಲ್ಲಿ ಬಿಜೆಪಿ ಬೆಂಬಲಿತ ಪ್ರಧಾನಮಂತ್ರಿ ಎಂದು ಬಿಂಬಿತವಾಗಿರುವ ನರೇಂದ್ರ ಮೋದಿಯವರ ಬಗ್ಗೆ ದೇಶದ ಜನರಲ್ಲಿ ಅಭಿಮಾನ ಉಂಟಾಗಿ ಈ ಬಾರಿ ನರೇಂದ್ರ ಮೋದಿಯನ್ನು ಪ್ರಧಾನಿಯನ್ನಾಗಿಸಬೇಕು ಎನ್ನುವ ವ್ಯಾಪಕ ಬೆಂಬಲವನ್ನು ನೋಡಿ ಕಾಂಗ್ರೆಸ್ ಪಕ್ಷದವರು ಈಗಾಗಲೇ ಹತಾಷೆ ಮನೋಭಾವನೆ ತಾಳಿದ್ದಾರೆ. ನರೇಂದ್ರ ಮೋದಿ ಬಗ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವುದರಿಂದ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ನರೇಂದ್ರ ಮೋದಿ ಟೀ ಮಾರುತ್ತಿದ್ದರು ಎಂದು ಲೇವಡಿ ಮಾಡಿದ್ದಾರೆ. ಇದನ್ನು ಸವಾಲಾಗಿ ತೆಗೆದುಕೊಂಡು ಬಿಜೆಪಿ ನಮೋ ಟೀ ಅಂಗಡಿ ಮೂಲಕ ತಿರುಗೇಟು ನೀಡುತ್ತಿದೆ. ಟೀ ಮಾರುವವರು ಸಹ ಪ್ರಧಾನಿಯಾಗಬಹುದು ಎಂದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಂತ ಪದ್ಮನಾಭ, ನಮೋ ಬ್ರಿಗೇಡ್ ಸಂಚಾಲಕ ತೇಜಪಾಲ್, ನಗರಸಭೆ ಸದಸ್ಯರಾದ ಚಂದ್ರಕಾಂತ ಕಾಮತ್, ರೂಪೇಶ್ ಕುಮಾರ್, ಬಿಜೆಪಿ ಮುಖಂಡರಾದ ಶ್ರೀನಿವಾಸ ವ್ಯಾಸನಕೆರೆ, ಮೈಲಾರಲಿಂಗ ನಾಯಕ, ಹನುಮೇಶ್, ರಾಜಶೇಖರ್, ಭೋಜರಾಜ್, ದಿನೇಶ್ ಪಾಟೀಲ್, ವಿಜಯೀಂದ್ರ ಅಗ್ನಿಹೋತ್ರಿ, ಬಸವರಾಜ ನಾಲತ್ವಾಡ, ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಚಂದ್ರಶೇಖರ್, ಮಹಿಳಾ ಮೋರ್ಚಾದ ರೇಖಾರಾಣಿ, ನಾಗರತ್ನಾ, ವಿಜಯಲಕ್ಷ್ಮಿ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

