ಬಳ್ಳಾರಿ

ಹೊಸಪೇಟೆ ರಾಜಭಕ್ಷಿ ಮಿಸ್ಟರ್ ಜೈ ಭಜರಂಗಿ

Published On :

ಹಗರಿಬೊಮ್ಮನಹಳ್ಳಿ: ಮಾಜಿ ಉಪ ಮುಖ್ಯಮಂತ್ರಿ ದಿ.ಎಂ.ಪಿ. ಪ್ರಕಾಶ ಸ್ಮರಣಾರ್ಥ ರಾಮನಗರದ ಗುರುಭವನದಲ್ಲಿ ಶ್ರೀಮಾರುತಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಎಂ.ಎಸ್. ಮಲ್ಟಿ ಜಿಮ್ ಸೋಮವಾರ ರಾತ್ರಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪಧೆಯಲ್ಲಿ ಹೊಸಪೇಟೆಯ ಗುಡ್ಲಕ್ ಜಿಮ್ ರಾಜಭಕ್ಷಿ ಮಿಸ್ಟರ್ ಜೈ ಭಜರಂಗಿ- 2014 ಆಗಿ ಹೊರಹೊಮ್ಮಿದ್ದಾರೆ. ಇವರಿಗೆ ತೀವ್ರ ಸ್ಪರ್ಧೆ ನೀಡಿದ ಸ್ಥಳೀಯ ಎಂ.ಎಸ್. ಜಿಮ್ನ ಮಾರುತಿ ಬೆಸ್ಟ್ ಮಾಸ್ಕಲರ್ ಮತ್ತು ಹೊಸಪೇಟೆ ಗುಡ್ಲಕ್ ಜಿಮ್ನ ಆರ್. ರಾಹುಲ್ ಬೆಸ್ಟ್ ಫೋಜರ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಬಳ್ಳಾರಿ, ಹೊಸಪೇಟೆ, ಕಂಪ್ಲಿ, ಹೂವಿನಹಡಗಲಿ, ಕೊಟ್ಟೂರು, ಕೂಡ್ಲಿಗಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ದೇಹದಾರ್ಢ್ಯ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧಿಗಳ ಎತ್ತರಕ್ಕೆ ಅನುಗುಣವಾಗಿ ನಾಲ್ಕು ವಿಭಾಗದಲ್ಲಿ ಸ್ಪರ್ಧೆಗಳು ಜರುಗಿದವು. ನಾಲ್ಕು ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದವರು ಅಂತಿಮ ಸುತ್ತಿನಲ್ಲಿ ಜೈ ಭಜರಂಗಿ ಪ್ರಶಸ್ತಿಗಾಗಿ ಸೆಣಸಾಡಿದರು.
ಪ್ರಥಮ ವಿಭಾಗದಲ್ಲಿ ಪಟ್ಟಣದ ಸಲೀಂ ಪಾಷಾ (ಪ್ರಥಮ) ಹೊಸಪೇಟೆಯ ಕೆ. ರಾಮು (ದ್ವಿತೀಯ), ಕೊಟ್ಟೂರಿನ ಕೆ. ಶ್ರೀಧರ್ (ತೃತೀಯ) ಸ್ಥಾನ ಪಡೆದರು. ದ್ವಿತೀಯ ವಿಭಾಗದಲ್ಲಿ ಹೊಸಪೇಟೆಯ ರಾಜಭಕ್ಷಿ (ಪ್ರಥಮ),  ಹಗರಿಬೊಮ್ಮನಹಳ್ಳಿಯ ವೀರೇಶ (ದ್ವಿತೀಯ), ಹೊಸಪೇಟೆಯ ಹೊನ್ನೂರುಸ್ವಾಮಿ (ತೃತೀಯ). ತೃತೀಯ ವಿಭಾಗದಲ್ಲಿ ಹೊಸಪೇಟೆಯ ಆರ್. ರಾಹುಲ್ (ಪ್ರಥಮ), ಹೊಸಪೇಟೆಯ ಮಂಜುನಾಥ (ದ್ವಿತೀಯ),  ಬಳ್ಳಾರಿಯ ರಂಜೀತ್ ಸಿಂಗ್ (ತೃತೀಯ). ನಾಲ್ಕನೇ ವಿಭಾಗದಲ್ಲಿ ಪಟ್ಟಣದ ಮಾರುತಿ (ಪ್ರಥಮ), ಹೊಸಪೇಟೆಯ ಅಬ್ದುಲ್ಕಲಂ (ದ್ವಿತೀಯ), ಹಗರಿಬೊಮ್ಮನಹಳ್ಳಿಯ ಗೋಣಿ (ತೃತೀಯ) ಪಡೆದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಸ್ಪರ್ಧೆಯ ವಿಜೇತರಿಗೆ ಹೊಸಪೇಟೆಯ ಹಿರಿಯ ದೇಹದಾರ್ಢ್ಯಪಟು ಎಸ್. ವೆಂಕಟೇಶ್ ಬಹುಮಾನ ವಿತರಿಸಿದರು. ಮಾರುತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಎಚ್.ಪಿ. ಶಿವಶಂಕರಗೌಡ, ಉಪಾಧ್ಯಕ್ಷ ಬಾರಿಕರ ಹುಲುಗಪ್ಪ, ಕಟ್ಟಿಮನಿ ಶ್ರೀನಿವಾಸ, ಗ್ರಾಪಂ ಸದಸ್ಯರಾದ ಬಾರಿಕರ ನಿಂಗಪ್ಪ, ದಾದಮ್ಮನವರ ರಾಜಪ್ಪ, ಎಂ. ಬಾಳಪ್ಪ, ಎಣ್ಣಿ ಬಾಷಾ, ಸೆರೆಗಾರ ಹುಚ್ಚಪ್ಪ, ಈರಮ್ಮ ಸೋಮಣ್ಣ ಸೇರಿದಂತೆ ಹಲವರು ಸಮಾರಂಭದಲ್ಲಿ ಭಾಗವಹಿಸಿದ್ದರು. ಬಾರಿಕರ ಗಂಗಾಧರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.