ಬಳ್ಳಾರಿ

ವಿಶ್ವಕರ್ಮರು ಶ್ರಮಜೀವಿಗಳು ನಂದಿಪುರದ ಮಹೇಶ್ವರಶ್ರೀ

Published On :

ಹಗರಿಬೊಮ್ಮನಹಳ್ಳಿ: ಮಾನವ ಕುಲಕ್ಕೆ ಸುಂದರ ಜಗತ್ತನ್ನು ನಿರ್ಮಿಸಿಕೊಡುವ  ವಿಶ್ವಕರ್ಮರು ಶ್ರೇಷ್ಠ ಶ್ರಮಜೀವಿಗಳು. ತಾವು ಬಡತನದಲ್ಲಿ ಜೀವಿಸುತ್ತಿದ್ದರೂ ಸುಂದರ ಸಮಾಜ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ವಿಶ್ವಕರ್ಮರು ಸುಂದರ ಜಗತ್ತಿನ ನಿರ್ಮಾಪಕರು ಎಂದು ನಂದಿಪುರದ ಮಹೇಶ್ವರ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಪಟ್ಟಣದ ವಿಶ್ವಕರ್ಮ ಸಮುದಾಯ ಭವನದಲ್ಲಿ ತಾಲೂಕು ವಿಶ್ವಕರ್ಮ ಸಮಾಜ ಸಂಘಟಿಸಿದ್ದ 16ನೇ ಶ್ರೀ ಮೌನೇಶ್ವರ ಮಹೋತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬಂಗಾರ, ಬೆಳ್ಳಿ ಆಭರಣ ತಯಾರಿಸುವ ವಿಶ್ವಕರ್ಮರ ದೈನಂದಿನ ಬದುಕು ಮಾತ್ರ ಬಡತನದಿಂದ ಕೂಡಿದೆ. ಆಳುವ ಸರ್ಕಾರಗಳು ವಿಶ್ವಕರ್ಮರ ಶ್ರಮವನ್ನು ಗುರುತಿಸುವ ಮೂಲಕ ಅವರ ಸಮಾಜ ಪ್ರಗತಿ ಕಾಣುವಂತೆ ಮಾಡುವುದು ಅಗತ್ಯವಿದೆ ಎಂದರು.
ಬೆಳಗ್ಗೆ ಆರು ಜೋಡಿಗಳು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಇದೆವೇಳೆ 12 ಮಕ್ಕಳಿಗೆ ಉಪನಯನ ಮಾಡಲಾಯಿತು. ನಂತರ ಶ್ರೀ ಮೌನೇಶ್ವರರ ಭಾವಚಿತ್ರದ ಮೆರವಣಿಗೆ ನಡೆಯಿತು. ಕುಂಭ ಹೊತ್ತ ಮಹಿಳೆಯರು, ಡೊಳ್ಳು, ಸಮಳ ಸೇರಿದಂತೆ ವಿವಿಧ ವಾದ್ಯಪರಿಕರಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗಿತು.
ಕೊಪ್ಪಳದ ಮುದ್ದಾಬಳ್ಳಿಯ ವಿಶ್ವಕರ್ಮ ಏಕದಂಡಿಗೆ ಮಠದ ಶ್ರೀ ಗುರುನಾಥಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ತಾಲೂಕಾಧ್ಯಕ್ಷ ಬಡಿಗೇರ್ ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಕಲ್ಲಳ್ಳಿ ಪುರೋಹಿತ ಬಸವರಾಜ ಆಚಾರ್, ಸಮಾಜದ ಉಪಾಧ್ಯಕ್ಷ ಸಿದ್ದಾರಾಮಾಚಾರ್, ಕಾರ್ಯದರ್ಶಿ ಬಡಿಗೇರ್ ಬಸವರಾಜ, ಎ. ಮುಕುಂದಪ್ಪ, ಶಾಮಾಚಾರ್, ಜೆ.ಬಿ. ಶ್ರೀಕಂಠಾಚಾರ್, ಗದಗಿನ ನಾಗರಾಜ ಶಿಲ್ಪಿ, ನಾಗರಾಜ ಆಚಾರ್, ಗಾಯಿತ್ರಿ ವಿಶ್ವಕರ್ಮ ಮಹಿಳಾ ಸಂಘದ ತಾಲೂಕಾಧ್ಯಕ್ಷೆ ಪಿ. ವಿದ್ಯಾವತಿ ವೆಂಕಟೇಶ್ ಭಾಗವಹಿಸಿದ್ದರು. ಎ.ಎಸ್. ವೀರಣ್ಣ ಸ್ವಾಗತಿಸಿದರು. ಕುಮಾರ ಆಚಾರ್ ವಂದಿಸಿದರು. ಪ್ರಕಾಶ್ ಆಚಾರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.