ಬಳ್ಳಾರಿ

ಇಂದು ಛತ್ರಪತಿ ಶಿವಾಜಿ ಜಯಂತಿ ಆಚರಣೆ

Published On :

ಬಳ್ಳಾರಿ: ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಫೆ. 19ರಂದು ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ತಿಳಿಸಿದ್ದಾರೆ. ಅಂದು ಸಂಜೆ 4 ಗಂಟೆಗೆ ನಗರದ ಶ್ರೀ ಪಾಂಡುರಂಗಸ್ವಾಮಿ ದೇವಸ್ಥಾನದಿಂದ ಬೆಂಗಳೂರು ರಸ್ತೆ, ತೇರುಬೀದಿ, ಮೋತಿ ವೃತ್ತ ಮಾರ್ಗವಾಗಿ ರಂಗಮಂದಿರದ ವರೆಗೆ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ನಂತರ ರಂಗಮಂದಿರದಲ್ಲಿ ಸಂಜೆ 6ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ.  ಪರಮೇಶ್ವರ ನಾಯ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಅನಿಲ್ ಲಾಡ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಪಂ ಅಧ್ಯಕ್ಷೆ ಶೋಭಾ ಬೆಂಡಿಗೇರಿ, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ್ ಮತ್ತಿತರ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಜಯಂತಿ ನಿಮಿತ್ತ ಡಿ. ಕಗ್ಗಲ್ನ ಕೆ. ದೊಡ್ಡಬಸವ ಗವಾಯಿ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ಡಾ. ವೇಣುಗೋಪಾಲ್ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪಾಲಿಕೆ ಸಹಯೋಗದಲ್ಲಿ ನಡೆಯಲಿದೆ. ಜಿಪಂ ಸಿಇಒ, ಎಸ್ಪಿ ಚೇತನ್ಸಿಂಗ್ ರಾಥೋಡ್, ಪಾಲಿಕೆ ಆಯುಕ್ತ ಚಿಕ್ಕಣ್ಣ, ಬಿ. ನಾಗರಾಜ್, ಶಿವಾಜಿ ಮಹಾರಾಜರ ಅಭಿಮಾನಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೇರ್ಪಡೆ: ಸ್ವಾಗತ
ಕೂಡ್ಲಿಗಿ: ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಇತ್ತೀಚೆಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದನ್ನು ತಾಲೂಕಿನ ಎನ್.ಟಿ. ಬೊಮ್ಮಣ್ಣ ಅವರ ಬೆಂಬಲಿಗರು, ಮುಖಂಡರು ಸ್ವಾಗತಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.  ಸೂಕ್ತ ಸಮಯದಲ್ಲಿ ನಮ್ಮ ನಾಯಕರು ಉತ್ತಮ ನಿರ್ಧಾರ ಕೈಗೊಂಡಿದ್ದಾರೆ. ಬೊಮ್ಮಣ್ಣನಂತಹ ಹಿರಿಯ ಮುಖಂಡರು ಬಿಜೆಪಿ ಸೇರ್ಪಡೆಯಿಂದ ಬಿಜೆಪಿಗೆ ಕೂಡ್ಲಿಗಿ ತಾಲೂಕಿನಲ್ಲಿ ಮತ್ತಷ್ಟು ಶಕ್ತಿ ಬಂದಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರವನ್ನು ಬಿಜೆಪಿ ತನ್ನದಾಗಿಸಿಕೊಳ್ಳಲಿದೆ ಎಂದಿದ್ದಾರೆ. ಹಿರಿಯ ಮುಖಂಡ ವಡ್ಡಿನ ಶಿವಣ್ಣ, ಬೆಳ್ಳಗಟ್ಟೆ ಜಿ. ಮಧುಸೂದನ್, ಗೌಡ್ರ ಶರಣಪ್ಪ, ಎಕ್ಕೆಗುಂದಿ ನಾಗರಾಜ, ಹೊಸಹಟ್ಟಿ ನರಸಿಂಹರಾಜು, ಚಿರತಗುಂಡು ದಡ್ಡಯ್ಯ, ಗಾಣಗಟ್ಟೆ ಪಾಪಣ್ಣ, ಮಹಾಂತೇಶ್, ದಿಬ್ಬದಹಳ್ಳಿ ರೇವಣ್ಣ, ಮಾಡ್ಲಾಕನಹಳ್ಳಿ ಧನುಂಜಯಗೌಡ, ಹಾರಕಬಾವಿ ಎನ್. ಚಿತ್ತಪ್ಪ, ಗುಡೇಕೋಟೆ ಜ್ಯೋತಿನಾಯ್ಕ, ರಾಮದುರ್ಗ ರವಿ, ಹರೂದಿ ವೀರಣ್ಣ, ಸಂಡೂರು ಸ್ವಾಮಿ, ಜಾತಪ್ಪ, ಮೊರಬ ವೆಂಕಟೇಶ್, ಕೆ. ದಿಬ್ಬದಹಳ್ಳಿ ಪಾಪಣ್ಣ, ಖಲಂದರ್, ಕೆ.ಎಂ. ಸಿದ್ಧಲಿಂಗಮೂರ್ತಿ, ಬಿ. ಬಯ್ಯಾನಾಯ್ಕ, ಉಲ್ಲಾನಹಳ್ಳಿ ಜಗದೀಶ್ ಮುಂತಾದವರು ಬೊಮ್ಮಣ್ಣ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಪದಾಧಿಕಾರಿಗಳ ನೇಮಕ
ಕುರುಗೋಡು: ಕಂಪ್ಲಿ ಕ್ಷೇತ್ರದ ಬಿಜೆಪಿ ಎಸ್ಟಿ ಮೋರ್ಚಾದ ಘಟಕಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಸೋಮಲಿಂಗಪ್ಪ ಮತ್ತು ಜಿಲ್ಲಾಧ್ಯಕ್ಷ ಮೈಲಾರಲಿಂಗ ನಾಯಕ್ ಆದೇಶದ ಮೇರೆಗೆ ಅಧ್ಯಕ್ಷರಾಗಿ ವೆಂಕಟೇಶ ನಾಯಕ, ಉಪಾಧ್ಯಕ್ಷರಾಗಿ ಬೂದುಗುಂಪಿ ಬಸವರಾಜ, ಬಿ.ಎಸ್. ಜಗದೀಶ, ದ್ಯಾವಣ್ಣ, ಕೆ. ಈಶ್ವರ, ಪ್ರಧಾನ ಕಾರ್ಯದರ್ಶಿಯಾಗಿ ಗಾಳಿ ಓಬಳೇಶ, ನಾಯಕರ ಬಸವರಾಜ, ಕೋಶಾಧಿಕಾರಿಯಾಗಿ ನಾಗೇಶ, ಕಾರ್ಯದರ್ಶಿಯಾಗಿ ವಾಲ್ಮೀಕಿ ಮರಿಲಿಂಗಪ್ಪ, ಮುರಣಿ ತಿಪ್ಪೇಸ್ವಾಮಿ ಅವರನ್ನು ಆಯ್ಕೆ ಮಾಡಿದ್ದಾರೆ.
ಉತ್ತಮ ಎತ್ತುಗಳಿಗೆ ಬಹುಮಾನ
ಸಿರುಗುಪ್ಪ: ಗ್ರಾಮೀಣ ಭಾಗದಲ್ಲಿ ಅವನತಿಯ ಹಂಚಿನಲ್ಲಿರುವ ಜಾನುವಾರುಗಳನ್ನು ಉತ್ತಮ ರೀತಿಯಲ್ಲಿ ಲಾಲಾನೆ ಪಾಲನೆ ಮಾಡಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉತ್ತಮ ರಾಸುಗಳಿಗೆ ಎಪಿಎಂಸಿಯಿಂದ ಬಹುಮಾನ ವಿತರಿಸಲಾಗುತ್ತದೆ ಎಂದು ಎಪಿಎಂಸಿ ಅಧ್ಯಕ್ಷ ಎನ್.ಆರ್. ವೀರನಗೌಡ ತಿಳಿಸಿದರು.
ತಾಲೂಕಿನ ರಾರಾವಿ ಯಲ್ಲಮ್ಮದೇವಿ ಜಾತ್ರಾ ಮಹೋತ್ಸದಲ್ಲಿ 7 ದಿನ ನಡೆಯುವ ಜಾನುವಾರು ಜಾತ್ರೆಯಲ್ಲಿ ಉತ್ತಮ ತಳಿ ಎತ್ತುಗಳಿಗೆ ನಗದು ಬಹುಮಾನ, ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ಎಪಿಎಂಸಿ ಉಪಾಧ್ಯಕ್ಷ ಜಿ. ಲಕ್ಷ್ಮೀಕಾಂತರೆಡ್ಡಿ, ಸದಸ್ಯ ಬೇವೂರು ಬಸವನಗೌಡ, ಗರಡಿ ಮಲ್ಲಿಕಾರ್ಜುನ, ಮಾದೇಗೌಡ, ನರೇಂದ್ರಸಿಂಹ, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥಗೌಡ, ನಾಗೇಶಪ್ಪ, ಕಾರ್ಯದರ್ಶಿ ಆರ್. ಚಂದ್ರಣ್ಣ, ಸಹ ಕಾರ್ಯದರ್ಶಿ ಎಸ್.ಕೆ.  ಪಟ್ಟಣಶೆಟ್ಟಿ, ರಾರಾವಿ ಜಿಪಂ ಸದಸ್ಯ ದಮ್ಮೂರು ಸೋಮಪ್ಪ, ಗ್ರಾಪಂ ಅಧ್ಯಕ್ಷೆ ಕೆಂಚಮ್ಮ, ಉಪಾಧ್ಯಕ್ಷೆ ಮಲ್ಲಯ್ಯ, ತಾಪಂ ಸದಸ್ಯ ಈರಣ್ಣ, ರೈತ ಮುಖಂಡರಾದ ಎಂ. ಗೋಪಾಲ ರೆಡ್ಡಿ, ಆರ್.ಸಿ. ಪಂಪನಗೌಡ, ಶ್ರೀನಿವಾಸ ರೆಡ್ಡಿ, ಕೆ. ಚಂದ್ರಶೇಖರ ಇದ್ದರು.
ಶೈಕ್ಷಣಿಕ ಪ್ರಗತಿಗೆ ಸೌಲಭ್ಯ ಕಲ್ಪಿಸಲು ಶ್ರಮ: ಕೆ. ತಿಪ್ಪೇಸ್ವಾಮಿ
ಕೂಡ್ಲಿಗಿ: ಶೈಕ್ಷಣಿಕ ಪ್ರಗತಿ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ನೀಡುವ ಉದ್ದೇಶದಿಂದ ಅಧುನಿಕ ಶಿಕ್ಷಣ ಪದ್ಧತಿಯಂತೆ ಸೂಕ್ತ ಸೌಲಭ್ಯ ನೀಡಲು ನಮ್ಮ ಸಂಸ್ಥೆ ಶ್ರಮಿಸಲು ಸಿದ್ಧವಿದೆ ಎಂದು ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಉಪಾಧ್ಯಕ್ಷ ಕೆ. ತಿಪ್ಪೇಸ್ವಾಮಿ ತಿಳಿಸಿದರು.
ಅವರು ತಾಲೂಕಿನ ಎಂ.ಬಿ. ಅಯ್ಯನಹಳ್ಳಿಯ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಸಂಜೆ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಆತಂಹ ಹಿಂದುಳಿದ ಪ್ರದೇಶದದಿಂದ ಬಂದ ಮಕ್ಕಳು ಹೆಚ್ಚಾಗಿ ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆ ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ಉತ್ತಮ ಶಿಕ್ಷಣ ನೀಡುವುದು ಸಂಸ್ಥೆಯ ಉದ್ದೇಶ ಎಂದು ತಿಳಿಸಿದರು.
ಸಂಸ್ಥೆ ಅಧ್ಯಕ್ಷ ಎಚ್. ಚಿದಾನಂದಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಜಿಪಂ ಸದಸ್ಯೆ ಸುನಂದಬಾಯಿ ಕೃಷ್ಣನಾಯ್ಕ ಉದ್ಘಾಟಿಸಿದರು.  ತಾಪಂ ಸದಸ್ಯ ಎನ್.ಪಿ. ಮಂಜುನಾಥ, ನಿವೃತ್ತ ಬಿಡಿಒ ಎಸ್.ಎಂ. ಕೋಟ್ರಯ್ಯ, ನಿವೃತ್ತ ಪ್ರಾಚಾರ್ಯ ಹಳ್ಳಿ ವೀರಭದ್ರಪ್ಪ, ಸಂಗಮೇಶ್ವರಯ್ಯ, ಟಿ. ಮಾರಪ್ಪ, ಸಂಸ್ಥೆ ಪ್ರಾಚಾರ್ಯ ಬಸವರಾಜ, ಚಿಕ್ಕಜೋಗಿಹಳ್ಳಿ, ಜೆಎನ್ವಿ ಶಾಲೆಯ ಶರ್ವಾಣಿ, ಕೆ. ನಾಗನಗೌಡ ಓ.ಬಿ. ಬಸವರಾಜ, ಬಿ.ಕೆ. ವಾಮದೇವ, ಪ್ರಾಚಾರ್ಯ ಚಂದ್ರಪ್ಪ, ಆಡಳಿತಾಧಿಕಾರಿ ಕೆ.ವಿ. ಶರಣೇಶ, ಹಂಸ ಶರಣೇಶ ಬಿ.ಎಂ., ಉಪನ್ಯಾಸಕ ಗಂಗಧರ, ಕೆ. ಪ್ರಸನ್ನನಾಯ್ಕ, ಪ್ರಕಾಶ ಉಪಸ್ಥಿತರಿದ್ದರು.
ವಿಕಲಚೇತನರ ಬೇಡಿಕೆಗೆ ಸ್ಪಂದನೆ: ಅಭಿನಂದನೆ
ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ನಲ್ಲಿ ವಿಕಲಚೇತನರ ಸಮಸ್ಯೆಗಳಿಗೆ ಸ್ಪಂದಿಸಿ, ವಿಶೇಷ ಅನುದಾನ ಮೀಸಲಿಟ್ಟಿರುವುದರಿಂದ ಹೊಸಪೇಟೆ ನಗರ ಹಾಗೂ ಗ್ರಾಮೀಣ ಘಟಕದ ವಿಕಲಚೇತನರ ಸಂಘಟನೆಗಳ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಅಭಿನಂದನಾ ಪತ್ರ ಸಲ್ಲಿಸಿದರು. ವಿಕಲಚೇತನರ ಶಸ್ತ್ರ ಚಿಕಿತ್ಸೆಗೆ ಈ ಮುಂಚೆ ನೀಡುತ್ತಿದ್ದ ನೆರವಿನ ಮೊತ್ತವನ್ನು ರು. 35 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಿಸಿರುವುದು, ವಿಕಲಚೇತನ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ದುಪ್ಪಟ್ಟು ಮಾಡಿ, ಇದಕ್ಕಾಗಿ ರು. 2.6 ಕೋಟಿ ಮೀಸಲಿಡಲಾಗಿದೆ. ತೀವ್ರತರ ಹಾಗೂ ಬಹುವಿಧದ ಅಂಗವಿಕಲತೆ ಹೊಂದಿರುವವರಿಗೆ ನಿರಾಮಯ ಎಂಬ ಆರೋಗ್ಯ ವಿಮೆ ಯೋಜನೆಯಲ್ಲಿ ಪ್ರತಿವರ್ಷ ಒಂದು ಲಕ್ಷ ರುಪಾಯಿ ವರೆಗೆ ವೈದ್ಯಕೀಯ ಸೌಲಭ್ಯ, 45 ಸಾವಿರ ಫಲಾನುಭವಿಗಳಿಗೆ ರು. 1.12 ಕೋಟಿ, ಎಸ್ಸೆಸ್ಸೆಲ್ಸಿ ನಂತರದ ವಿದ್ಯಾರ್ಹತೆ ಹೊಂದಿರುವ ನಿರುದ್ಯೋಗಿ ವಿಕಲಚೇತನರಿಗೆ ತಿಂಗಳಿಗೆ ರು. 1 ಸಾವಿರ ನಿರುದ್ಯೋಗಿ ಭತ್ಯೆ ನೀಡುವ ಯೋಜನೆಗೆ ರು. 2.16 ಕೋಟಿ ಮೀಸಲಿಡಲಾಗಿದೆ. ಅಂಧರಿಗಾಗಿ ಟಾಕಿಂಗ್ ಲ್ಯಾಪ್ಟಾಪ್ಗಾಗಿ ರು. 4 ಕೋಟಿ, ತೀವ್ರತರವಾದ ದೈಹಿಕ ಅಂಗವಿಕಲರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ನೀಡಲು ರು. 7 ಕೋಟಿ ಅನುದಾನ ಮೀಸಲು, ನಗರ ಪ್ರದೇಶದ 3 ವರ್ಷಕ್ಕಿಂತ ಮೇಲ್ಪಟ್ಟು ತೀವ್ರತರ ಅಂಗವಿಕಲ ಮಗುವಿಗೆ ಪ್ರತಿ ತಿಂಗಳು ನೀಡಲಾಗುತ್ತಿದ್ದ ರು. 2,500 ನೆರವನ್ನು ರು. 10 ಸಾವಿರಕ್ಕೆ ಹೆಚ್ಚಿಸಿರುವ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.