ಇದ್ದವರಿಗೆ 'ನಮ್ಮ ಮನೆ' ಹಂಚಿಕೆ: ಆರೋಪ
ಕೂಡ್ಲಿಗಿ: 'ನಮ್ಮ ಮನೆ' ಯೋಜನೆಯಡಿಯಲ್ಲಿ ಪಟ್ಟಣ ಪಂಚಾಯಿತಿಯ ವಸತಿ ಅಧಿಕಾರಿ ಫಲಾನುಭವಿಗಳಿಂದ ಹಣ ಪಡೆದು ನಿಜವಾದ ಬಡವರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ಪಟ್ಟಣ ಪಂಚಾಯಿತಿ ಸದಸ್ಯರು ಒಕ್ಕೊರಲಿನಿಂದ ಸಭೆಯನ್ನು ಬಹಿಷ್ಕರಿಸಿ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ನಿಯಮಾನುಸಾರ ಮನೆ ಹಂಚಿಕೆಯಾಗಬೇಕೆಂದು ಸದಸ್ಯ ಎಲ್.ಎಸ್. ಬಷೀರ್ ಅಹ್ಮದ್, ಎಸ್. ದುರುಗೇಶ್ ಸಭೆಯಿಂದ ಹೊರ ಬಂದು ಪ್ರತಿಭಟಿಸಿದರು.
ಬುಧವಾರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ನಮ್ಮ ಮನೆ ಯೋಜನೆ ಆಯ್ಕೆಪಟ್ಟಿ ಅಂತಿಮಗೊಳಿಸುವ ಸಭೆಯ ನಂತರ ಮಾತನಾಡಿದ ಸದಸ್ಯರು, ಸರ್ಕಾರ ಪಟ್ಟಣ ಪ್ರದೇಶದ ಬಡವರಿಗಾಗಿ ರು. 1.20 ಲಕ್ಷ ವೆಚ್ಚದಲ್ಲಿ ನಮ್ಮ ಮನೆ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡುತ್ತಿದೆ. ಬಡವರಿಗೆ ಸಿಗಬೇಕಾದ ಆ ಮನೆಗಳನ್ನು ಪಟ್ಟಣ ಪಂಚಾಯಿತಿಯ ವಸತಿ ಯೋಜನೆ ಅಧಿಕಾರಿ ಬಸವರಾಜ ಫಲಾನುಭವಿಗಳ ಪಟ್ಟಿಯನ್ನು ಸಭೆಯ ಗಮನಕ್ಕೆ ಇಟ್ಟಿದ್ದಾರೆ. ಅಧಿಕಾರಿಗಳೆ ಪಟ್ಟಿ ರಚನೆ ಮಾಡಿದರೆ ನಾವು ಸದಸ್ಯರು ಯಾಕಿರಬೇಕು? ಮನೆ ಹಂಚಿಕೆಯಲ್ಲಿ ಲಾಬಿ ಮಾಡಿದ ಅಧಿಕಾರಿ ತಯಾರಿಸಿದ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿ ಚುನಾಯಿತ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಫಲಾನುಭವಿಗಳ ಆಯ್ಕೆಯನ್ನು ಮಾಡಬೇಕೆಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು. 15 ವರ್ಷಗಳಿಂದ ಇಲ್ಲಿಯೆ ಕಾರ್ಯನಿರ್ವಹಿಸುವ ಪಪಂ ವಸತಿ ಯೋಜನಾಧಿಕಾರಿಯನ್ನು ಕೂಡಲೆ ಬೇರೆಡೆಗೆ ವರ್ಗಾಯಿಸಬೇಕೆಂದು ದುರುಗೇಶ್ ಒತ್ತಾಯಿಸಿದರು. ಸಭೆ ಬಹಿಷ್ಕಾರಕ್ಕೂ ಮುನ್ನ ನಡೆದ ಪಪಂನ ವಿವಿಧ ಉದ್ದೇಶದ ಸಭೆಯಲ್ಲಿ ತಹಸೀಲ್ದಾರ್ ನಿತೀಶ್ ಪಾಟೀಲ್, ಮುಖ್ಯಾಧಿಕಾರಿ ಪಿರೋಜ್ ಖಾನ್ ಮುಂತಾದ ಅಧಿಕಾರಿಗಳ ಸಭೆಯಲ್ಲಿ ಉಪಸ್ಥಿತರಿದ್ದರು. ವಸತಿ ಯೋಜನೆ ಅಧಿಕಾರಿ ಬಸವರಾಜ್, ನಿಯಮಾನುಸಾರ ಮನೆ ಹಂಚಿಕೆ ಮಾಡಿದ್ದೇನೆ, ನನ್ನದೇನು ತಪ್ಪಿಲ್ಲ, ನಾನು ಮನೆ ಹಂಚಿಕೆಯಲ್ಲಿ ತಾರತಮ್ಯ ಮಾಡಿಲ್ಲ. ತಪ್ಪು ಮಾಡಿದ್ದರೆ ತೋರಿಸಿ ಎಂದು ಸದಸ್ಯರಿಗೆ ಹೇಳಿದರು. ಸಭೆಯಲ್ಲಿ ತಳಾಸ ವೆಂಕಟೇಶ್, ಗುಪ್ಪಾಲ್ ರಾಘವೇಂದ್ರ, ಕೆ. ಶಿವಪ್ಪನಾಯಕ, ಕೆ. ಈಶಪ್ಪ, ಸಾಲುಮನಿ ರಾಘವೇಂದ್ರ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

