ಶುದ್ಧ ಕುಡಿವ ನೀರಿನ ಘಟಕ ಉದ್ಘಾಟನೆ
ಹೊಸಪೇಟೆ: ಮನುಷ್ಯನಿಗೆ ನೀರು ಅತ್ಯಅಗತ್ಯವಾಗಿದ್ದು, ಸಾರ್ವಜನಿಕರಿಗಾಗಿ ನಿರ್ಮಿಸಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕದ ಸೌಲಭ್ಯ ಪಡೆದು, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಎಂಎಸ್ಪಿಎಲ್ ಸಂಸ್ಥೆ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ನರೇಂದ್ರಕುಮಾರ್ ಎ. ಬಲ್ದೋಟ ಹೇಳಿದರು.
ನಗರದ ಈಶ್ವರ ದೇವಸ್ಥಾನ ಸಮಿತಿ ಸಹಕಾರದೊಂದಿಗೆ 1ನೇ ವಾರ್ಡ್ನ ಚಿತ್ತವಾಡ್ಗಿಯಲ್ಲಿ ಎಂಎಸ್ಪಿಎಲ್ ಸಂಸ್ಥೆ ನಿರ್ಮಿಸಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಅಶುದ್ಧ ನೀರು ಕುಡಿಯುವುದರಿಂದ ವಿವಿಧ ರೀತಿಯ ರೋಗಗಳಿಗೆ ಮನುಷ್ಯ ತುತ್ತಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ ಎಂದರು.
ಕೇವಲ ಐದಾರು ಕಿಲೋಮೀಟರ್ ಅಂತರದಲ್ಲಿ ತುಂಗಭದ್ರಾ ಅಣೆಕಟ್ಟು ಇದ್ದರೂ ಇಲ್ಲಿ ಶುದ್ಧ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ.
ಒಂದುವೇಳೆ ನೀರು ಬಂದರೂ ಸಹ ಅನೇಕ ಬಾರಿ ಕಲುಷಿತ ನೀರು ಕುಡಿಯುವ ಸ್ಥಿತಿ ಇಲ್ಲಿದೆ. ಈ ನಿಟ್ಟಿನಲ್ಲಿ ಎಂಎಸ್ಪಿಎಲ್ ಸಂಸ್ಥೆ ನಗರದಲ್ಲಿಯೇ ಪ್ರಥಮವಾಗಿ ಇಂತಹ ಒಂದು ಘಟಕ ಸ್ಥಾಪಿಸಿರುವುದು ಔಚಿತ್ಯಪೂರ್ಣವಾಗಿದೆ ಎಂದು ಅವರು ಹೇಳಿದರು.
ಸ್ಥಳೀಯ ಮುಖಂಡ ಜವಳಿ ರುದ್ರಪ್ಪ ಮಾತನಾಡಿ, ಚಿತ್ತವಾಡ್ಗಿ ಪ್ರದೇಶದಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರೇ ಹೆಚ್ಚು ವಾಸವಾಗಿದ್ದಾರೆ. ಇಲ್ಲಿನ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಈ ಪ್ರದೇಶಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿರುವುದು ಶ್ಲಾಘನೀಯ. ಇಲ್ಲಿ ಇನ್ನೂ ಅನೇಕ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಅವುಗಳ ನಿವಾರಣೆಗೆ ಎಂಎಸ್ಪಿಎಲ್ ಸಂಸ್ಥೆ ಒಲವು ತೋರಬೇಕು ಎಂದು ಅವರು ವಿನಂತಿಸಿಕೊಂಡರು.
ಸಾನ್ನಿಧ್ಯ ವಹಿಸಿದ್ದ ನಂದೀಪುರ ಕ್ಷೇತ್ರದ ಮಹೇಶ್ವರಸ್ವಾಮಿ ಮಾತನಾಡಿ, ಕುಡಿಯುವ ನೀರು ಶುದ್ಧವಾಗಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ಮನುಷ್ಯ ಯೋಗ ಮಾಡಿದರೆ ರೋಗಗಳಿಂದ ಮುಕ್ತವಾಗಿರುತ್ತಾನೆ ಎಂದರು.
1ನೇ ವಾರ್ಡ್ನ ನಗರಸಭೆ ಸದಸ್ಯ ಪಿ. ಮಲ್ಲಿಕಾರ್ಜುನ, ಸಮಿತಿ ಅಧ್ಯಕ್ಷ ಎಸ್.ಎಂ. ರವಿಕಾಂತ, ವಿಜಯನಗರ ರಕ್ಷಣಾ ವೇದಿಕೆ ಉಪಾಧ್ಯಕ್ಷ ಲಕ್ಷ್ಮಣ, ಪತ್ರಕರ್ತ ಕೆ. ಲಕ್ಷ್ಮಣ ಮಾತನಾಡಿದರು.
ಸ್ಥಳೀಯ ಮುಖಂಡರಾದ ಡೊಮ್ಮಿ ದೊಡ್ಡ ಜಂಬಣ್ಣ, ಸಂಗಯ್ಯಸ್ವಾಮಿ, ಕೆ. ನಾಗಪ್ಪ, ಸಿ. ಗುರುನಾಥಶೆಟ್ಟರು, ಚಿತ್ತವಾಡ್ಗಿ 12ನೇ ವಾರ್ಡ್ನ ನಗರಸಭೆ ಸದಸ್ಯ ಬೆಲ್ಲದ ರವೂಫ್ಸಾಬ್, ಎಂಎಸ್ಪಿಎಲ್ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ, ಈಶ್ವರ ದೇವಸ್ಥಾನ ಸಮಿತಿ ಸದಸ್ಯರು ಭಾಗವಹಿಸಿದ್ದರು.
ಕಲಾವಿದರಾದ ಎ. ಸುಜಾತಾ ಕರುಣಾನಿಧಿ, ಭಾರತಿ ರವಿಕುಮಾರ್ ಸಂಗಡಿಗರು ಪ್ರಾರ್ಥಿಸಿದರು. ಎಸ್.ಎಸ್. ಚಂದ್ರಶೇಖರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎಚ್.ಎಂ. ಜಂಬುನಾಥ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

