ಉತ್ಸವಕ್ಕೆ ಬಿಗಿ ಭದ್ರತೆ: ಸಿಸಿ ಕ್ಯಾಮೆರಾ ಕಣ್ಗಾವಲು
ಹಂಪಿ: ಉತ್ಸವದಲ್ಲಿ ಅಹಿತಕರ ಘಟನೆ ನಡೆಯದಂತೆ, ಉತ್ಸವ 3 ದಿನಗಳು ನಡೆಯಲು ಬೇಕಾಗುವ ಅಗತ್ಯ ಭದ್ರತೆಯನ್ನು ಜಿಲ್ಲಾ ಪೊಲೀಸ್ ಇಲಾಖೆ ಒದಗಿಸಿದೆ. ಹೆಚ್ಚಿನ ಭದ್ರತೆ ದೃಷ್ಟಿಯಿಂದ ಹಂಪಿಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದೆ. ಭದ್ರತೆಗಾಗಿ 2,200 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 400 ಹೋಂಗಾಡ್ಸ್, 6 ಕೆಎಸ್‌ಆರ್‌ಪಿ ತುಕಡಿ ಇವೆ. ಬಳ್ಳಾರಿ ಜಿಲ್ಲೆಯ ಪೊಲೀಸರಲ್ಲದೆ, ಚಿತ್ರದುರ್ಗ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಕೊಪ್ಪಳ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳ ಪೊಲೀಸರನ್ನು ನಿಯೋಜಿಸಲಾಗಿದೆ. 100 ಪಿಎಸ್‌ಐ, 40 ಸಿಪಿಐ, 12 ಡಿವೈಎಸ್ಪಿ, ಇಬ್ಬರು ಹೆಚ್ಚವರಿ ಎಸ್ಪಿಗಳು ಭದ್ರತೆ ಕೈಗೊಂಡಿದ್ದಾರೆ.
40 ಕಡೆ ಸಿಸಿ ಕ್ಯಾಮೆರಾ ಅಳವಡಿಕೆ: ನೂರಾರು ಎಕರೆ ಪ್ರದೇಶದಲ್ಲಿ ಹಂಪಿ ಇರುವುದರಿಂದ 4 ಕಡೆ ವೇದಿಕೆಗಳು, ಗಾಳಿಪಟ ಸ್ಪರ್ಧೆ, ಹಾಟ್ ಏರ್ ಬಲೂನ್, ಸಾಹಸ ಕ್ರೀಡೆ, ವಿಕಲಚೇತನರ ಕ್ರೀಡಾಕೂಟ, ಮಹಿಳಾ ಉತ್ಸವ ಮುಂತಾದ ಕಾರ್ಯಕ್ರಮಗಳು ನಡೆಯುವುದರಿಂದ ಯಾವುದೆ ಅಹಿತಕರ ಘಟನೆ ನಡೆಯದಂತೆ ಹಾಗೂ ಸಂಚಾರ ದಟ್ಟಣೆ, ಗಲಾಟೆ, ಗದ್ದಲ ಆಗದಂತೆ ಹಂಪಿಯ 40 ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆ ಎಲ್ಲ ಕ್ಯಾಮೆರಾಗಳನ್ನು ಆಪ್‌ರೇಟ್ ಮಾಡಲು ಮೂರು ಕಡೆಗೆ ತಾತ್ಕಾಲಿಕ ಶೆಡ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಜನ ದಟ್ಟಣೆ, ಒತ್ತಡ ಇರುವುದನ್ನು ಸಿಸಿ ಕ್ಯಾಮೆರಾಗಳ ಮೂಲಕ ವೀಕ್ಷಿಸಿ ಜನದಟ್ಟಣೆ ನಿಯಂತ್ರಿಸುವ ಉದ್ದೇಶದಿಂದಾಗಿ, ಅಲ್ಲದೆ ಯಾವುದೆ ಗದ್ದಲ, ಗೊಂದಲಗಳು ನಡೆದರೆ ಕೂಡಲೆ ಅಲ್ಲಿಗೆ ಪೊಲೀಸರನ್ನು ನಿಯೋಜಿಸಲು, ಶಾಂತಿ ಕಾಪಾಡಿ ಉತ್ಸವವನ್ನು ಯಶಸ್ವಿಗೊಳಿಸಲು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಗೊಂದಲ ಅಥವಾ ಗದ್ದಲ ಸೃಷ್ಟಿಸುವವರ ಮೇಲೆ ಸಿಸಿ ಕ್ಯಾಮೆರಾಗಳ ಕಣ್ಗಾವಲು ಇರುತ್ತದೆ. ಹಂಪಿಯಲ್ಲಿ ಎಲ್ಲೆಡೆ ಪೊಲೀಸರು ಬಿಗಿಭದ್ರತೆ ಒದಗಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

