ಅಭಯಾರಣ್ಯ ಪ್ರದರ್ಶನ ರದ್ದು: ಜನತೆ ನಿರಾಸೆ
ಕನ್ನಡಪ್ರಭ ವಾರ್ತೆ, ಹಂಪಿ, ಜ. 9
ಹಂಪಿ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ವಿವಿಧ ಸಾಹಸ ಕ್ರೀಡೆಗಳು ನಡೆಯುತ್ತವೆ. ಅದರಂತೆ ಪ್ರತಿವರ್ಷ ಆಯೋಜಿಸುತ್ತಿದ್ದ ಪ್ರಾಣಿ, ಪಕ್ಷಿ ಮತ್ತು ಅರಣ್ಯ ಪ್ರದೇಶದ ಪರಿಚಯಿಸುವ ಅಭಯಾರಣ್ಯ ಪ್ರದರ್ಶನ ಈ ಬಾರಿಯ ಉತ್ಸವದಲ್ಲಿ ವ್ಯವಸ್ಥೆಗೊಳಿಸಿಲ್ಲ. ಇದರಿಂದ ಪರಿಸರ ಪ್ರೇಮಿಗಳು ಹಾಗೂ ಜನತೆಗೆ ನಿರಾಸೆಯುಂಟು ಮಾಡಿದೆ.
ಉತ್ಸವದ ಮುಖ್ಯ ವೇದಿಕೆಯಾದ ಶ್ರೀಕೃಷ್ಣದೇವರಾಯ ವೇದಿಕೆ ಪಕ್ಕದ 3 ಎಕರೆ ವಿಶಾಲ ಪ್ರದೇಶದಲ್ಲಿ ಅಭಯಾರಣ್ಯ ಪ್ರದರ್ಶನಕ್ಕೆ ಬಳ್ಳಾರಿ ಪ್ರಾದೇಶಿಕ ಅರಣ್ಯ ವಿಭಾಗದಿಂದ ಅಭಯಾರಣ್ಯ ನಿರ್ಮಾಣ ಮಾಡಿ ಉತ್ಸವಕ್ಕೆ ಬರುವ ಪ್ರವಾಸಿಗರಿಗೆ ಪ್ರಾಣಿ, ಪತ್ರಿಗಳು, ಅರಣ್ಯ ಪ್ರದೇಶದ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವ ಕಾರ್ಯ ಪ್ರತಿ ಉತ್ಸವದಲ್ಲಿ ನಡೆಯುತ್ತಿತ್ತು. ಆದರೆ ಈ ಬಾರಿಯ ಉತ್ಸವದಲ್ಲಿ ಈ ವ್ಯವಸ್ಥೆ ಕಲ್ಪಿಸಿಲ್ಲ.
4 ದಿನ ನಡೆಯುತ್ತಿದ್ದ ಪ್ರದರ್ಶನ: 3 ಎಕರೆ ಅರಣ್ಯ ಪ್ರದೇಶದಲ್ಲಿನ ಗಿಡ, ಮರಗಳೊಂದಿಗೆ ಇಲಾಖೆ ಹತ್ತಾರು ಜಾತಿಗಳ ಗಿಡ, ಮರಗಳನ್ನು ತಂದು ಪ್ರದರ್ಶನಕ್ಕೆ ಇಡುತ್ತಿತ್ತು. ಅದರಂತೆ ಪ್ರಾಣಿಗಳನ್ನು ಮರದ ಕೆಳಗೆ, ಮೇಲೆ ಮತ್ತು ಕೆಲವೊಂದನ್ನು ಬೋನಿನಲ್ಲಿಟ್ಟು ಪ್ರದರ್ಶನ ಮಾಡುತ್ತಿದ್ದರು. ಆ ಮೂಲಕ ಹಂಪಿಯಲ್ಲೊಂದು ಪ್ರಾಣಿ ಸಂಗ್ರಾಹಲಯವೇ ಇದೆ ಎನ್ನ್ನುವಷ್ಟರ ಮಟ್ಟಿಗೆ ಉತ್ಸವದಲ್ಲಿ ಅರಣ್ಯ ಇಲಾಖೆ ತಾತ್ಕಾಲಿಕವಾಗಿ ಅಭಯಾರಣ್ಯ ನಿರ್ಮಿಸಿ ಸಾರ್ವಜನಿಕರ ವೀಕ್ಷಣೆಗೆ ವ್ಯವಸ್ಥೆಗೊಳಿಸುತ್ತಿತ್ತು. ಈ ಅಭಯಾರಣ್ಯ ನಾಲ್ಕು ದಿನ ನಡೆಯುತ್ತಿತ್ತು. ಆದರೆ ಈ ಉತ್ಸವದಲ್ಲಿ ಇದು ಯಾವುದೂ ಇಲ್ಲದಾಗಿದೆ.
ದೇಶ, ವಿದೇಶಗಳ ವಿವಿಧ ಪ್ರಾಣಿ, ಪಕ್ಷಿಗಳನ್ನ್ನು ಪ್ರದರ್ಶನಕ್ಕೆ ಇಟ್ಟು ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನ್ನು ಜನರಿಗೆ ನೀಡಲಾಗುತ್ತಿತ್ತು. ವಿದೇಶದ ಗೋಲ್ಡನ್ ದಿ ಬ್ರೈಟ್ ಹಕ್ಕಿ ವಿಶೇಷ ಆಕರ್ಷಣೆಯಾಗಿತ್ತು. ಇದರ ಬಾಲ 5 ಅಡಿ ಉದ್ದ ಇದ್ದು, ಬಿಸಿಲು ಹೆಚ್ಚಾದಂತೆ ಬಣ್ಣ ಬದಲಾಯಿಸಿಕೊಂಡು ಹೋಗುತ್ತಿತ್ತು. ಕಣ್ಣಿನ ಮೇಲೆ ಕೋಡು ತರಹದ ಕೂದಲು ಎತ್ತರಿಸಿಕೊಂಡು ತನ್ನ ್ನ ರಕ್ಷಣೆ ಮಾಡಿಕೊಳ್ಳುವ ಜಪಾನಿಂಗ್ ಗಿನ್ ಡಿಸೆಂಟ್ ಪಕ್ಷಿ, ಜಪಾನ್ನ ಗೋಲ್ಡನ್ ಕೋಳಿ, ಹೇಮು, ಗೀಸ್, ಜಿನಿಯಾ ಪಿಗ್ ಸೇರಿದಂತೆ ವಿವಿಧ ಜಾತಿ ಪಕ್ಷಿಗಳು ಹಾಗೂ ಪ್ರಾಣಿಗಳ ಪ್ರದರ್ಶನ ಇರುತ್ತಿತ್ತು. ವಿವಿಧ ದೇಶಗಳ ಪ್ರಾಣಿ, ಪಕ್ಷಿಗಳ ಮಾಹಿತಿ ಜನರಿಗೆ ತಿಳಿಯುತ್ತಿತ್ತು.
ಪಕ್ಷಿಗಳ ಕಲರವ: ಎಲ್ಲ ವಿಧದ ಜೀವಂತ ಹಾವುಗಳು, ಸತ್ತ ಪ್ರಾಣಿಗಳ ಚರ್ಮ ಬಳಸಿ ಕರಡಿ, ಚಿರತೆ, ಜಿಂಕೆ, ಸಾರಂಗ, ಕೃಷ್ಣಮೃಗಗಳ ನೈಜ ಮಾದರಿಗಳನ್ನು ಸಿದ್ಧಪಡಿಸುತ್ತಿದ್ದರು. ಕರಡಿ, ಚಿರತೆ, ಸಿಂಹ ಮುಂತಾದ ಪ್ರಾಣಿಗಳ ಘರ್ಜನೆ, ಪಕ್ಷಿಗಳ ಕಲರವ ಅಭಯಾರಣ್ಯದ ವಿಶೇಷ. ಆವರಣದ ಒಳಗೆ ಪ್ರವೇಶಿಸುತ್ತಿದ್ದಂತೆ ಚಿಕ್ಕ ಮಕ್ಕಳಿಂದ ಮೊದಲುಗೊಂಡು ಎಲ್ಲ ವಯೋವಾನದವರು ರೋಮಾಂಚನಗೊಳ್ಳುವ ಹಾಗೆ ಆಕರ್ಷಕವಾಗಿ ಅಭಯಾರಣ್ಯ ಅನುಭವ ನೀಡುತ್ತಿತ್ತು. ಆದರೆ ಈ ಎಲ್ಲ ವ್ಯವಸ್ಥೆ ಇಲ್ಲ ಎಂಬುದು ಶಾಲಾ ವಿದ್ಯಾರ್ಥಿಗಳನ್ನು ಬೇಸರಗೊಳಿಸಿದೆ.
ಇದೆಲ್ಲದರ ಜತೆಗೆ ಜನತೆಯಲ್ಲಿ ಅರಣ್ಯ, ಸಸ್ಯ ಸಂಪತ್ತನ್ನು ರಕ್ಷಿಸುವ ಕುರಿತ ಜಾಗೃತಿ, ಗಿಡ, ಮರಗಳು, ಪ್ರಾಣಿ, ಪಕ್ಷಿಗಳು ಯಾವ ರೀತಿ ಇರುತ್ತವೆ ಎನ್ನ್ನುವ ಪ್ರಾತ್ಯಕ್ಷಿತೆಯನ್ನು ವ್ಯವಸ್ಥೆಗೊಳಿಸಿ ಜನತೆಗೆ ಅರಣ್ಯ ರಕ್ಷಣೆ ಬಗ್ಗೆ ತಿಳಿವಳಿಕೆ ನೀಡಲಾಗುತ್ತಿತ್ತು. ಆದರೆ ಈ ಹಿಂದಿನ ಉತ್ಸವದಲ್ಲಿ ಅಭಯಾರಣ್ಯ ನಿರ್ಮಾಣವಾಗುತ್ತಿದ್ದ ಪ್ರದೇಶ ಈ ವರ್ಷ ಬಣಗುಡುತ್ತಿದೆ. ಆದರೆ ಅರಣ್ಯ ಇಲಾಖೆ, ಜಿಲ್ಲಾಡಳಿತ ಈ ಬಾರಿ ಏಕೆ ಇದನ್ನು ರದ್ದು ಪಡಿಸಿದೆ ಎಂಬುದೇ ಅರ್ಥವಾಗುತ್ತಿಲ್ಲ.
ಸಿ.ಕೆ. ನಾಗರಾಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

