ಬಳ್ಳಾರಿ

ಪಿಕಾರ್ಡ್ ಬ್ಯಾಂಕ್‌ಗೆ ಪಪಂ ನಿವೇಶನ

Published On :

ಕೊಟ್ಟೂರು: ಸೂಕ್ತ ಮಾಹಿತಿ ನೀಡದ ಕಾರಣವನ್ನಾಗದಿಸಿಕೊಂಡು ಸಾಮಾನ್ಯ ಸಭೆ ಮುಂದೂಡುವಲ್ಲಿ ಕಳೆದ ವಾರ ಯಶಸ್ವಿಯಾಗಿದ್ದ ಪಪಂ ಸದಸ್ಯರು, ಅಂದಿನ ಸಭೆಯಲ್ಲಿ ಮಂಡಿಸಿದ್ದ 8ಕ್ಕೂ ಹೆಚ್ಚು ವಿಷಯಗಳ ಕುರಿತು ಚರ್ಚೆಗೆ ಮುಂದಾಗದೆ ಎಲ್ಲವನ್ನೂ ಶುಕ್ರವಾರದ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಿದರು.
ಕೊಟ್ಟೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂಡ್ಲಿಗಿ ತಾಲೂಕು ಕೊಟ್ಟೂರೇಶ್ವರ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿಗೆ ಕಟ್ಟಡ ಹೊಂದಲು ಪ.ಪಂಚಾಯಿತಿ ಸಾರ್ವಜನಿಕ ಉಪಯೋಗಕ್ಕಾಗಿ ಕಾಯ್ದಿರಿಸಿದ ನಿವೇಶನ ನೀಡುವ ಪ್ರಮುಖ ಪ್ರಸ್ತಾವನೆಯನ್ನು ಮುಖ್ಯಾಧಿಕಾರಿ ಹನುಮಂತಮ್ಮ ಮಂಡಿಸಿದರು.
ನಂತರ ಅವರು ಮಾತನಾಡಿ, ಬ್ಯಾಂಕ್ ಕಟ್ಟಡ ನಿರ್ಮಾಣಕ್ಕೆ ಅಗತ್ಯ ನಿವೇಶನ ನೀಡುವ ಅಧಿಕಾರ ತಮಗಿಲ್ಲ, ಆದರೂ ನಿವೇಶನ ಬೇಕೆಂಬ ಅವರ ಬೇಡಿಕೆಗೆ ಪಪಂನ ಸಹಾನುಭೂತಿ ಇದೆ. ಈ ಸಂಬಂಧ ಸದಸ್ಯರು ನಿರ್ಣಯಕ್ಕೆ ಅನುಮೋದನೆ ನೀಡಿದರೆ ತಮ್ಮದೇನು ಅಭ್ಯಂತರವಿಲ್ಲೆ ಎಂದು ಹೇಳಿದರೆ. ಆಗ ಸದಸ್ಯರು ನಿವೇಶನ ನೀಡುವ ನಿರ್ಣಯಕ್ಕೆ ಒಮ್ಮತಾಭಿಪ್ರಾ  ವ್ಯಕ್ತಪಡಿಸಿ ನಿರ್ಣಯ ಕೈಗೊಂಡರು. ಇದನ್ನು ಸೇರಿದಂತೆ ಒಟ್ಟು 8 ವಿಷಯಗಳು ಸಭೆಯಲ್ಲಿ ಮಂಡನೆಯಾಗುತ್ತಿದ್ದಂತೆ ಸಭೆಯಲ್ಲಿದ್ದ ಸದಸ್ಯರು ಹೆಚ್ಚಿನ ಚರ್ಚೆಗೆ ಮುಂದಾಗದೆ ವಿಷಯಗಳಿಗೆ ತಮ್ಮ ಸಹಮತವಿದೆ. ಸಭೆಯ ಒಪ್ಪಿಗೆ ಇದೆ ಎಂದು ನಿರ್ಣಯ ತೆಗೆದುಕೊಂಡರು.
ತರಾಟೆಗೆ: ಪಟ್ಟಣ ಪಂಚಾಯಿತಿ ಸದಸ್ಯೆ ಪಂಕಜಾ ತಿಪ್ಪೇಸ್ವಾಮಿ ತಮ್ಮ ವಾರ್ಡಿನ ಸಮಸ್ಯೆ ಬಗ್ಗೆ ಗಮನ ಸೆಳೆದು ಮುಖ್ಯಾಧಿಕಾರಿ ಉತ್ತರಕ್ಕೆ ಪಟ್ಟು ಹಿಡಿದಾಗ, ಡಿಶ್ ಮಂಜುನಾಥ ಮುಖ್ಯಾಧಿಕಾರಿ ಹನುಮಂತಮ್ಮನವರ ಬದಲು ಉತ್ತರ ನೀಡಲು ಮುಂದಾದರು. ಇದಕ್ಕೆ ಪಂಕಜಾ ತಿಪ್ಪೇಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ಆಗ ಮತ್ತೊಬ್ಬ ಸದಸ್ಯ ಬುಗ್ಗಳಿ ಕೊಟ್ರೇಶ್, ಸದಸ್ಯರು ತಮ್ಮ ವಾರ್ಡಿನ ಸಮಸ್ಯೆಗೆ ಪರಿಹಾರ ಬಯಸಿ ಮಾತನಾಡಿದರೆ ನೀವ್ಯಾಕೆ ಉತ್ತರ ನೀಡುತ್ತೀರಿ. ಸಂಬಂಧಪಟ್ಟಂತೆ ಅಧ್ಯಕ್ಷೆ, ಉಪಾಧ್ಯಕ್ಷೆ, ಮುಖ್ಯಾಧಿಕಾರಿ ಉತ್ತರ ನೀಡುತ್ತಾರೆ. ನೀವು ಪದೇ ಪದೇ ಎಲ್ಲರ ಪ್ರಶ್ನೆಗಳಿಗೆ ಉತ್ತರ ನೀಡಲು ಬರುವುದು ತರವಲ್ಲ ಎಂದು ಮಂಜುನಾಥರನ್ನು ತರಾಟೆಗೆ ತೆಗೆದುಕೊಂಡರು.
ಸಭೆಗೆ ಬರುವಾಗ ಎಲ್ಲ ಮಾಹಿತಿಯನ್ನು ತರಬೇಕು. ಸದಸ್ಯರಾದ ನಾವು ಯಾವ ಪ್ರಶ್ನೆಯನ್ನಾದರೂ ಕೇಳಬಹುದು. ವಿವರ ಬಯಸಿದಾಗಲೆಲ್ಲ ನೀವು ಕೇಳಿದ ಮಾಹಿತಿ ನನ್ನಲ್ಲಿ ಇಲ್ಲ. ಅಕೌಂಟೆಂಟ್ ಇಲ್ಲ ಎಂದು ಸಬೂಬು ಹೇಳುವುದು ತರವಲ್ಲ ಎಂದು ಮುಖ್ಯಾಧಿಕಾರಿ ಹನುಮಂತಮ್ಮ ಅವರನ್ನು ಬಾವಿಕಟ್ಟಿ ಶಿವಾನಂದ, ಚಿರಿಬಿ ಕೊಟ್ರೇಶ್ ತರಾಟೆಗೆ ತೆಗೆದುಕೊಂಡರು. ಅಧ್ಯಕ್ಷೆ ಅನಸೂಯಾ ಸೆರೆಗಾರ್, ಉಪಾಧ್ಯಕ್ಷ ಎಸ್. ಗುರುಶಾಂತಪ್ಪ, ಜೆಇ ಅರುಣ್ ಪಾಟೀಲ್, 17 ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.