ಬಳ್ಳಾರಿ

ಸರ್ಕಾರಿ ಶಾಲೆ ಬಗ್ಗೆ ತಾತ್ಸಾರ ಬೇಡ

Published On :

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಜ. 13
ಖಾಸಗಿ ಶಾಲೆಗಳ ವ್ಯಾಮೋಹದಿಂದ ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ ಮನೋಭಾವನೆ ಹೊಂದಬಾರದು. ಸರ್ಕಾರಿ ಶಾಲೆಯಲ್ಲಿ ಕಲಿತವರು ಉನ್ನತ ಸಾಧನೆಗೈದ ಸಾಕಷ್ಟು ಉದಾಹರಣೆಗಳು ಇವೆ ಎಂದು ಜಿಪಂ ಸದಸ್ಯ ಕೆ.ಎಂ. ಶಶಿಧರ ತಿಳಿಸಿದರು.
ಅವರು ತಾಲೂಕಿನ ಹೊಸಹಳ್ಳಿ ಕೆಎಂಎಸ್ ಪದವಿ ಕಾಲೇಜ್ ಆವರಣದಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ತಾಲೂಕು ಮಟ್ಟದ ಕಲಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ತಾಲೂಕಿನ ಕಾತ್ರಿಕೆಹಟ್ಟಿ ಮತ್ತು ಆಲೂರು ಸರ್ಕಾರಿ ಶಾಲೆ ವಿದ್ಯಾರ್ಥಿಗಳು ವಿಜ್ಞಾನ ವಸ್ತುಪ್ರದರ್ಶನದಲ್ಲಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವುದು ಹೆಮ್ಮೆಯ ಸಂಗತಿ. ಎಲ್ಲಾ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರಿ ಶಾಲೆಗಳಲ್ಲಿ ಸಹ ಉತ್ತಮ ಶಿಕ್ಷಣ ಸಿಗುವುದರಲ್ಲಿ ಸಂದೇಹವಿಲ್ಲ ಎಂದರು.
ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸಾವಿತ್ರಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಜಿಪಂ ಸದಸ್ಯೆ ಶಾರದಾ ರಾಜೇಂದ್ರಪ್ರಸಾದ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಎಚ್.ಜಿ. ಗಿರಿಜಾ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷೆ ಮಂಗಳಮ್ಮ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಬಿಇಒ ಎಂ.ಆರ್. ಮಂಜುನಾಥ ಪ್ರಾಸ್ತಾವಿಕ ಮಾತನಾಡಿದರು.
ಎಸ್ಎಸ್ಎ ಯೋಜನೆಯಡಿ ಸಮನ್ವಯ ಶಿಕ್ಷಣಕ್ಕೆ ದೈಹಿಕ ನ್ಯೂನತೆ ಹೊಂದಿದ ವಿದ್ಯಾರ್ಥಿಗಳಾದ ಕಲ್ಲಹಳ್ಳಿ ಅಕ್ಷತಾ, ಹರಕಬಾವಿ ಸಚಿನ್, ಹುರುಳಿಹಾಳ್ ಶಿವಸ್ವಾಮಿ, ಕಾನಾಮಡುಗು ವಿಶಾಲಾಕ್ಷಿ ಸೇರಿದಂತೆ 22 ವಿದ್ಯಾರ್ಥಿಗಳಿಗೆ ಸಾಧನ ಸಲಕರಣೆ ವಿತರಿಸಲಾಯಿತು.
ಜಿಪಂ ಸದಸ್ಯರಾದ ಸುನಂದಾಬಾಯಿ ಕೃಷ್ಣನಾಯ್ಕ, ಮೀನಾಕ್ಷಮ್ಮ ಮಿಠೋಬಯ್ಯ, ತಾಪಂ ಉಪಾಧ್ಯಕ್ಷ ಪೂಜಾರಹಳ್ಳಿ ಎಚ್. ಮಹೇಶ್, ಕ್ಷೇತ್ರ ಸಮನ್ವಯಾಧಿಕಾರಿ ಮೈಲೇಶ್ ಬೇವೂರ್, ಶಿವಶಂಕರಪ್ಪ, ಕೆ. ಬಸಯ್ಯ, ಕೆ.ಜಿ. ಸಿದ್ಧನಗೌಡ, ಶರಣಪ್ಪ, ಪಿ.ವಿ. ಕೊತ್ಲಪ್ಪ, ಪಿ. ನಾಗೇಶ್, ಎಂ.ಎಂ. ಚನ್ನಯ್ಯ, ಎಚ್. ಕುಮಾರ್, ಎಚ್.ಎಂ. ಮಂಜುನಾಥ, ತಳವಾರ ಶರಣಪ್ಪ, ಲಕ್ಷ್ಮೀದೇವಿ, ಜಿನಾಬಿ, ಕೆ.ಎನ್. ಮಂಜಮ್ಮ, ಎಚ್.ಎನ್. ಗೋವಿಂದಮ್ಮ, ಕೆ.ಎಂ. ಹರ್ಷವರ್ಧನ್, ಅರವಿಂದ್ ಸಜ್ಜನ್, ಎರ್ರಿಸ್ವಾಮಿ, ಜಿ.ಟಿ. ಸಿದ್ದೇಶ್, ಕೆ.ನಿಂಗಪ್ಪ, ಕೆ. ಕರಿವೀರಾಚಾರಿ, ಅಜ್ಜಣ್ಣ ಸೇರಿ ಶಿಕ್ಷಕರು ಇದ್ದರು.
ಕೂಡ್ಲಿಗಿ ಹಿರೇಮಠ ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಟಿ. ಶರಣಪ್ಪ ಸ್ವಾಗತಿಸಿದರು. ಪ್ರದೀಪ್ಕುಮಾರ್ ನಿರ್ವಹಿಸಿದರು. ಅರ್ಜುನ ಚಿನ್ನೇನಹಳ್ಳಿ ಶಾಲೆ ವಿದ್ಯಾರ್ಥಿಗಳು ನಾಟಕ ಅಭಿನಯದ ಮೂಲಕ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.