18ನೇ ಆರಾಧನಾ ಮಹೋತ್ಸವ: ದಾಸವಾಣಿ
ಬಳ್ಳಾರಿ: ಸ್ಥಳೀಯ ಗುರುಶ್ರೀಶ ಸೇವಾ ಸಮಿತಿಯು ನಗರದ ಗಾಂಧಿ ಭವನದಲ್ಲಿ, ಗುರುಶ್ರೀಶ ವಿಠ್ಠಲರ 18ನೇ ಆರಾಧನಾ ಮಹೋತ್ಸವದ ನಿಮಿತ್ತ ದಾಸವಾಣಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿಂದುಸ್ತಾನಿ ಗಾಯಕ ರಮೇಶ್ ಕುಲಕರ್ಣಿ ವಿವಿಧ ರಾಗಗಳಲ್ಲಿ ಹಾಡಿದ ಗೀತೆಗಳು ಕೇಳುಗರನ್ನು ಆಕರ್ಷಿಸಿದವು. ಪವಮಾನ್ ಅರಳಿಕಟ್ಟಿ, ಶೇಷಗಿರಿ ಗುಬ್ಬಿ ತಬಲಾ, ಮೋಹನ್ ಕಲ್ಬುರ್ಗಿ ಹಾರ್ಮೋನಿಯಂ, ಜಯತೀರ್ಥ ಜಹಗೀರದಾರ್ ತಾನ್ಪುರಾ, ಪೃಥ್ವಿ, ಅನಿಲ್ ಶಾಖಾಪೂರ್ ತಾಳ ಸಾಥ್ ನೀಡಿದರು. ಡಾ. ಮಾನಕರಿ ಶ್ರೀನಿವಾಸಾಚಾರ್ಯ ಮತ್ತು ಉಡುಪಿ ಕೃಷ್ಣಾಚಾರ್ಯ ಉಪನ್ಯಾಸ ನೀಡಿದರು. ಸೇವಾ ಸಮಿತಿ ಅಧ್ಯಕ್ಷ ಡಾ.ವಿ.ಕೆ. ಜಹಗೀರದಾರ್, ವಿ. ಪ್ರಾಣೇಶ್, ನಾಗವೇಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಟಿ. ಗುರುರಾಜಾಚಾರ್ ಸ್ವಾಗತಿಸಿ, ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

