ರೈತರ ನೆರವಿಗೆ ಧಾವಿಸುವಂತೆ ರೈತ ಸಂಘ ಒತ್ತಾಯ
ಕೂಡ್ಲಿಗಿ: ತಾಲೂಕಿನಾದ್ಯಂತ ರೈತರು ಬೆಳೆನಷ್ಟ, ಬೆಂಬಲ ಬೆಲೆ ನಿಗದಿಯಿಲ್ಲದೆ ನಾನಾ ಸಂಕಷ್ಟಗಳನ್ನು ಎದುರಿಸುತ್ತಿದ್ದು ಸರ್ಕಾರ ಕೂಡಲೆ ರೈತರ ನೆರವಿಗೆ ಧಾವಿಸುವಂತೆ ಆಗ್ರಹಿಸಿ ತಾಲೂಕು ರೈತ ಸಂಘ, ಹಸಿರು ಸೇನೆ ಮುಖಂಡರು ಮಂಗಳವಾರ ತಹಸೀಲ್ದಾರ್ ನಿತೇಶ್ ಪಾಟೀಲ್ಗೆ ಮನವಿಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಎನ್. ಭರಮಪ್ಪ ಮಾತನಾಡಿ, ರೈತರನ್ನು ಎಲ್ಲ ಸರ್ಕಾರಗಳು ಕಡೆಗಣಿಸುತ್ತಾ ಬಂದಿವೆ. ರಾಜ್ಯಾದ್ಯಂತ ಕನಕ ಬಿಟಿ ಹತ್ತಿ ಬೀಜದ ಕಳಪೆಯಿಂದ ರೈತರಿಗಾದ ಅನ್ಯಾಯಕ್ಕೆ ಪ್ರತಿ ಎಕರೆಗೆ ರು. 25 ಸಾವಿರ ಪರಿಹಾರ ನೀಡಬೇಕು. ಬೆಂಗಳೂರಿನಲ್ಲಿ ನಡೆದ ರೈತರ ಧರಣಿಯಲ್ಲಿ ಬಂಧಿಸಿರುವ ರೈತ ಮುಖಂಡರನ್ನು ಬಿಡುಗಡೆಗೊಳಿಸಬೇಕು. ಕಬ್ಬಿಗೆ ಬೆಂಬಲ ಬೆಲೆ ಘೋಷಿಸಿರುವುದನ್ನು ಶೀಘ್ರವೆ ವಿತರಿಸಬೇಕು. ಕೇಂದ್ರ ಸರ್ಕಾರ ರೂಪಿಸಿರುವ ಮೆಕ್ಕೆಜೋಳ ಖರೀದಿ ನಿಯಮಗಳನ್ನು ಸಡಿಲಿಸಿ ರೈತರಿಂದ ಮೆಕ್ಕೆಜೋಳ ಖರೀದಿಸಬೇಕು. ತಾಲೂಕಿನಾದ್ಯಂತ ಹೊಸ ಪಡಿತರ ಚೀಟಿಗಳನ್ನು ಕೂಡಲೆ ಅರ್ಹ ಫಲಾನುಭವಿಗಳಿಗೆ ವಿತರಣೆ ಸೇರಿ ನಾನಾ ಬೇಡಿಕೆ ಈಡೇರಿಸಬೇಕು. ವಿಳಂಬ ನೀತಿ ಅನುಸರಿಸಿದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ವಿ. ನಾಗರಾಜ, ಕೆ.ಎಂ. ಚಂದ್ರಯ್ಯಸ್ವಾಮಿ, ಚಿಕ್ಕಜೋಗಿಹಳ್ಳಿ ಕೆ. ಬಾಬುನಾಯಕ್, ಪಿ. ಹೊನ್ನೂರ್ಸಾಬ್, ದೂಪದಹಳ್ಳಿ ಬಿ. ವೀರಣ್ಣ, ಎ. ನಾಗರಾಜ, ಆರ್. ನಾಗರೆಡ್ಡಿ, ಎಂ. ಕೊಟ್ರೇಶಪ್ಪ, ಎಂ. ರೇವಣ್ಣ, ಮಾಬುಸಾಬ್, ಎಂ.ಬಿ. ನಾರಪ್ಪ ಸೇರಿದಂತೆ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

