ಬಳ್ಳಾರಿ

ಅಧ್ಯಾತ್ಮ ಗ್ರಂಥಗಳ ಅಧ್ಯಯನ, ಚಿಂತನೆ ಮಾಡಿ

Published On :

ಕನ್ನಡಪ್ರಭ ವಾರ್ತೆ, ಕಂಪ್ಲಿ, ಜ. 30
ಮನುಷ್ಯನಿಗೆ ಬರಿ ವಯಸ್ಸಾದರೆ ಸಾಲದು, ಅನುಭವದ ವಯಸ್ಸಾಗಬೇಕು. ಅನುಭವದ ವಯಸ್ಸಾಗಬೇಕಾದರೆ ಅಧ್ಯಾತ್ಮ ಗ್ರಂಥಗಳ ಅಧ್ಯಯನ ಮತ್ತು ಚಿಂತನೆ ಮಾಡಬೇಕು ಎಂದು ಎಮ್ಮಿಗನೂರು ಹಂಪಿ ಸಾವಿರದೇವರ ಮಹಂತರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಗೊಗ್ಗ ಬಸಯ್ಯ ಮಹಾದೇವಮ್ಮ ಮಂಗಲ ಭವನದಲ್ಲಿ ಉಜ್ಜಿನಿ ಸಿದ್ಧಲಿಂಗ ಜಗದ್ಗುರುಗಳ ಸ್ಮರಣೋತ್ಸವ ಮತ್ತು ಶ್ರೀ ಗೊಗ್ಗ ಬಸಯ್ಯನವರ 30ನೇ ಪುಣ್ಯಾರಾಧನೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಆಧ್ಯಾತ್ಮ ಗ್ರಂಥಗಳ ಅಧ್ಯಯನದಿಂದ ಆತ್ಮ ಶಕ್ತಿ ಹೆಚ್ಚುತ್ತದೆ ಎಂದ ಅವರು, ನವ್ಯಯುಗದಲ್ಲಿ ಸಮಾಜ ಶುದ್ಧಿಗಾಗಿ ತಮ್ಮ ಸಂಪತ್ತನ್ನು ಮೀಸಲಿಟ್ಟವರು ಗೊಗ್ಗ ಮನೆತನದವರು ಎಂದರು.
ಹೊಸಪೇಟೆ ವಿಎನ್‌ಸಿ ಉಪನ್ಯಾಸಕ ಡಾ. ಮೃತ್ಯುಂಜಯ ರುಮಾಲೆ ಪ್ರಾಸ್ತಾವಿಕ  ಮಾತನಾಡಿ, ಸ್ಮರಣೋತ್ಸವ ನಮ್ಮನ್ನು ನಾವು ಎಚ್ಚರಿಸಿಕೊಳ್ಳುವುದಾಗಿದೆ. ಯಾರ ನೆರಳಿನಲ್ಲಿ ಬದುಕು ನಡೆಸುತ್ತೇವೆ ಅವರ ಸ್ಮರಣೋತ್ಸವ ನಡೆಸುವುದು ಶ್ರೇಷ್ಠ ಕಾರ್ಯ ಎಂದು ತಿಳಿಸಿದರು.
ಆಕಾಶವಾಣಿ ಕಲಾವಿದ ಗಂಗಾವತಿ ಪಂಚಾಕ್ಷರಿ ಶಾಸ್ತ್ರಿ ಶಿವಯೋಗ ಸಾಧನೆ ಎನ್ನುವ ಆಧ್ಯಾತ್ಮ ಪ್ರವಚನ ನೀಡಿ, ಜಗತ್ತನ್ನು ಲಿಂಗದಲ್ಲಿ ಕಾಣುವ ಶಕ್ತಿ ಶಿವಯೋಗದಲ್ಲಿದೆ. ಪುಣ್ಯ ಸ್ಮರಣೆ ಮಹತ್ತರ ಕಾರ್ಯವಾಗಿದ್ದು, ಇದು ಯುವ ಪೀಳಿಗೆಗೆ ದಾರಿದೀಪವಾಗಿದೆ ಎಂದು ಹೇಳಿದರು.
ಗೊಗ್ಗ ಚನ್ನಬಸವರಾಜ, ಪಿ. ಮೂಕಯ್ಯಸ್ವಾಮಿ, ಎಂ.ಎಸ್. ಶಶಿಧರ ಶಾಸ್ತ್ರಿ ಮಾತನಾಡಿದರು. ಡಿ. ವೀರಪ್ಪ, ಗೊಗ್ಗ ಗುರುಸಿದ್ದಯ್ಯ, ಗೊಗ್ಗ ಶರಭಯ್ಯ, ಗೊಗ್ಗ ಗವಿಸಿದ್ದಯ್ಯ, ಕೆ.ಎಂ. ಹೇಮಯ್ಯಸ್ವಾಮಿ ಉಪಸ್ಥಿತರಿದ್ದರು. ಮುಕ್ಕುಂದಿ ಬಸವರಾಜ್ ನಿರೂಪಿಸಿದರು. ಮುಕ್ಕುಂದಿ ರುದ್ರಾಣಿ, ಗೊಗ್ಗ ಶಾಂತಾ, ಗೊಗ್ಗ ಕಾರ್ತಿಕ್, ಓದ್ಸೋ ಸಿದ್ರಾಮಯ್ಯ, ಗಡಾದ ಸಿದ್ರಾಮಪ್ಪ, ಬಂಡೆಯ್ಯಸ್ವಾಮಿ, ಜಿ. ಪ್ರಕಾಶ, ಎಸ್.ಎಂ. ಮಹಾಬಲೇಶ್ವರ ಸ್ವಾಮಿ, ಬಿ.ಎಂ. ವಿಶ್ವನಾಥಸ್ವಾಮಿ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.