ಬಳ್ಳಾರಿ

ಸೌಹಾರ್ದದಿಂದ ಸಮಸ್ಯೆ ಪರಿಹರಿಸಿಕೊಳ್ಳಿ: ಮಿಸ್ಕಿನ್

Published On :

ಸಿರುಗುಪ್ಪ: ಗ್ರಾಮದ ಜನರು ಪರಸ್ಪರ ಸೌಹಾರ್ದಯುತವಾಗಿ ತಮ್ಮ ಸಮಸ್ಯೆಗಳನ್ನು ಚರ್ಚಿಸಿ ಬಗೆಹರಿಸಿಕೊಳ್ಳುವುದರಿಂದ ಗ್ರಾಮದಲ್ಲಿ ಶಾಂತಿಯ ವಾತಾವರಣ ನೆಲೆಸುತ್ತದೆ ಎಂದು ಸಿವಿಲ್ ನ್ಯಾಯಧೀಶ ಲಕ್ಷ್ಮೀಕಾಂತ ಜಾನಕಿರಾಮ ಮಿಸ್ಕಿನ್ ತಿಳಿಸಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ ವಕೀಲರ ಸಂಘ ಹಾಗೂ ಸರ್ಕಾರದ ಎಲ್ಲ ಇಲಾಖೆಗಳ ಸಹಯೋಗದಲ್ಲಿ ತಾಲೂಕಿನ ರಾವಿಹಾಳ್, ಕುರುವಳ್ಳಿ ಹಾಗೂ ಕೊತ್ತಲಚಿಂತ ಗ್ರಾಮಗಳಲ್ಲಿ ಗುರುವಾರ ಹಮ್ಮಿಕೊಂಡ ಕಾನೂನು ಸಾಕ್ಷರತಾ ರಥ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಘರ್ಷಣೆಯಿಂದ ದೈಹಿಕ ಹಲ್ಲೆಯ ಜತೆಗೆ ನೆಮ್ಮದಿ ಮತ್ತು ಸಮಯ ಹಾಳಾಗುವುದಲ್ಲದೆ,ನ್ಯಾಯಾಲಯಕ್ಕೆ ಅಲೆದಾಡಬೇಕಾಗುತ್ತದೆ ಎಂದರು.
ಶಿಶು ಅಭಿವೃದ್ಧಿ ಇಲಾಖೆಯ ಸೈಯದ್ ಚಾಂದ್ ಪಾಷ, ತಾಪಂ ಸದಸ್ಯ ರಾಮನಾಯಕ ಮಾತನಾಡಿ, ಕಾನೂನು ಅರಿವು ಶಿಬಿರಗಳಿಂದ ಗ್ರಾಮೀಣ ಭಾಗದ ಜನರಿಗೆ ಮಾಹಿತಿ ದೊರೆಯುತ್ತದೆ ಎಂದು ತಿಳಿಸಿದರು.
ನಂತರ ಭೂಕಂದಾಯ ಕುರಿತು ಎಚ್.ಕೆ. ಮಲ್ಲಿಕಾರ್ಜುನಯ್ಯ, ಪರಿಸರ ಕಾಯ್ದೆ ಕುರಿತು ಎನ್.ಅಬ್ದುಲ್ಸಾಬ್, ಜನನ-ಮರಣ ನೋಂದಣಿ ಕುರಿತು ಎಚ್.ಜೆ. ವೆಂಕಟೇಶ, ಜೀವನಾಂಶ ಕಾಯ್ದೆ ಕುರಿತು ಟಿ. ನೇಲಗುಂಟಯ್ಯ, ಹಕ್ಕು ಬದಲಾವಣೆ ಕಾಯ್ದೆ ಕುರಿತು ಬಿ. ಮಲ್ಲಿಕಾರ್ಜುನ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಅಭಿಯೋಜಕ ಮಂಜುನಾಥ ಬೇರ್ಗಿ, ವಕೀಲರ ಸಂಘದ ಅಧ್ಯಕ್ಷ ಬಿ.ಜಿ. ಸುಧಾಕರ ರೆಡ್ಡಿ, ಜಿ.ಬಿ. ಗುಂಡಳ್ಳಿ, ಬಿ. ಮಲ್ಲಿಕಾರ್ಜುನ, ವೆಂಕಟೇಶನಾಯ್ಕ್, ಮಲ್ಲಿಗೌಡ, ತಿಮ್ಮಯ್ಯ, ಎಚ್. ಮಹೇಶ್ ಹಾಗೂ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.