ಧಾರಾವಾಹಿಗಳಿಂದ ಕುಟುಂಬಗಳು ಹಾಳು
ಹೂವಿನಹಡಗಲಿ: ಇತ್ತೀಚಿನ ದಿನಗಳಲ್ಲಿ ಧಾರವಾಹಿಗಳಿಗೆ ಮಹಿಳೆಯರು ದಾಸರಾಗಿದ್ದಾರೆ. ಇದರಿಂದ ಸಾಕಷ್ಟು ಕುಟುಂಬಗಳು ಹಾಳಾಗಿವೆ ಎಂದು ಕಾಗಿನಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಅವರು ತಾಲೂಕಿನ ಹರವಿ ಗ್ರಾಮದಲ್ಲಿ 3 ದಿನ ಆಯೋಜಿಸಿರುವ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಗಳ 34ನೇ ತುಲಾಭಾರ ಕಾರ್ಯಕ್ರಮದಲ್ಲಿ ಮಾತನಾಡಿ, ಜನರಿಗೆ ಪರಿಜ್ಞಾನವಿಲ್ಲದೆ ಪಶುಗಿಂತ ಕಡೆಯಾಗಿ ಜೀವನ ಸಾಗಿಸುತ್ತಿರುವುದು ದುರಂತ. ಹಳ್ಳಿಗಳಲ್ಲಿ ಬೆಳಗಿನಿಂದಲೆ ಮದ್ಯ ಸೇರಿದಂತೆ ಅನೇಕ ದುಶ್ಚಟಗಳಿಗೆ ದಾಸರಾಗಿ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿ ಚನ್ನವೀರ ಶಿವಯೋಗಿ ಮಾತನಾಡಿ, ಹರವಿ ಗ್ರಾಮಕ್ಕಿರುವ ಇತಿಹಾಸದ ಪ್ರಕಾರ ಹರವಿ ತುಂಬೆಲ್ಲ ಹಾಲು ಉಕ್ಕಿ ಹರಿದಿತ್ತು. ಹಾಲಿನಂತೆ ನಿಮ್ಮ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಿ. ಹರವಿ ತುಂಬ ಹೆಂಡ ತುಂಬದೆ ಅಮೃತ ತುಂಬುವ ಕೆಲಸ ಮಾಡಬೇಕು. ಯುವಜನಾಂಗ ಸೇರಿದಂತೆ ಜಾತ್ರೆಯ ನೆಪದಲ್ಲಾದರೂ ಎಲ್ಲರೂ ದುಶ್ಚಟಗಳನ್ನು ಬೀಡುತ್ತೇವೆಂದು ಪ್ರಮಾಣ ಮಾಡಿ ಎಂದು ಕೋರಿದರು.
ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ್, ಮಕ್ಕಳಿಗೆ ಪಾಲಕರು ಸಂಸ್ಕೃತಿ, ಸಂಸ್ಕಾರ ಕಲಿಸದಿದ್ದರೆ ಕ್ಷೋಭೆಗಳು ಹೆಚ್ಚಾಗುತ್ತವೆ. ಇದರಿಂದ ಹಳ್ಳಿಗಳು ವೃದ್ಧಾಶ್ರಮಗಳಾಗಿ ನಿರ್ಮಾಣವಾಗುತ್ತಿವೆ. ಎಲ್ಲರೂ ತಂದೆ ತಾಯಿಗಳನ್ನು ಬಿಟ್ಟು ದೂರ ಬದುಕು ಕಟ್ಟಿಕೊಳ್ಳುವ ಸಂಸ್ಕೃತಿಯಿಂದ ದೂರವಾಗಬೇಕೆಂದು ಹೇಳಿದರು.
ಕಾಗಿನೆಲೆ ಗುರುಪೀಠದ ಧರ್ಮದರ್ಶಿ ಕೆ.ಎಂ. ಹಾಲಪ್ಪ, ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ಜಿ. ಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಪರಮೇಶ್ವರಪ್ಪ, ಅಟವಾಳಿಗಿ ಕೊಟ್ರೇಶ ಮಾತನಾಡಿದರು. ಕುರುಬರ ಸಂಘದ ನಿರ್ದೇಶಕ ಹನುಮಂತಪ್ಪ ಪ್ರಾಸ್ತಾವಿಕ ಮಾತನಾಡಿದರು. ಮಹಿಳಾ ಕುರುಬ ಸಂಘದ ಜಿಲ್ಲಾ ಉಪಾಧ್ಯಕ್ಷೆ ಕೆ. ಶಶಿಕಲಾ, ಮಾಜಿ ಜಿಪಂ ಸದಸ್ಯೆ ಪ್ರೇಮಕ್ಕ, ದುರುಗಪ್ಪ, ವೆಂಕಪ್ಪ, ಚನ್ನಬಸಪ್ಪ, ಗಾಮದ ನಿಂಗಪ್ಪ, ಈಟಿ ಲಿಂಗರಾಜ, ಹನುಮಂತಪ್ಪ, ಈಟಿ ಹನುಮೇಶ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸಿದ್ದನಗೌಡ, ಈಟಿ ಮಹಾಂತೇಶ, ಅರವಳ್ಳಿ ವೀರಣ್ಣ ಸೇರಿದಂತೆ ಇತರರಿದ್ದರು.
ನಂತರ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿಗೆ 34ನೇ ತುಲಾಭಾರ ಮಾಡಲಾಯಿತು. ಇದಕ್ಕೂ ಮುನ್ನ ಗ್ರಾಮದಲ್ಲಿ ಕುಂಭಗಳ ಮೆರವಣಿಗೆ ನಡೆಯಿತು. ಶಿಕ್ಷಕ ಪ್ರಕಾಶ ಸ್ವಾಗತಿಸಿದರು. ಶಿಕ್ಷಕ ಡಿ. ವಿರೂಪಣ್ಣ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

