ಕ್ರಿಕೆಟ್: ಮಾಧ್ಯಮ ತಂಡಕ್ಕೆ ಜಯ
ಬಳ್ಳಾರಿ: ಪೊಲೀಸ್ ಅಧಿಕಾರಿಗಳು ಹಾಗೂ ಮಾಧ್ಯಮ ತಂಡದ ನಡುವೆ ಭಾನುವಾರ ನಡೆದ ಕ್ರಿಕೆಟ್ ಪಂದ್ಯದಲ್ಲಿ ಮಾಧ್ಯಮದ ತಂಡವು ನಾಲ್ಕು ರನ್ಗಳಿಂದ ಗೆಲವು ಸಾಧಿಸಿತು.
ಭಾನುವಾರ ನಗರದ ಡಿಎಸ್ಆರ್ ಮೈದಾನದಲ್ಲಿ 12 ಓವರ್ಗಳ ಸ್ನೇಹಮಯ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.
ಟಾಸ್ ಗೆದ್ದ ಮಾಧ್ಯಮ ತಂಡದ ನಾಯಕ ಪತ್ರಕರ್ತ ಕೆ.ಎಂ. ಮಂಜುನಾಥ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಪೊಲೀಸ್ ತಂಡವನ್ನು ಹೆಚ್ಚುವರಿ ಎಸ್ಪಿ ಸಿ.ಕೆ. ಬಾಬ ಅವರು ನಾಯಕರಾಗಿ ಮುನ್ನಡೆಸಿದರು. ಆರಂಭಿಕವಾಗಿ ವೆಂಕೋಬಿ ಮತ್ತು ವೀರೇಶ್ ಕಣಕ್ಕಿಳಿದರು. ಈ ಸಂದರ್ಭ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬ ಅವರ ಉತ್ತಮ ಬೋಲಿಂಗ್ನಲ್ಲಿ ವೆಂಕೋಬಿ ಔಟಾದರು. ಆದರೆ, ಆರಂಭಿಕ ಆಟಗಾರ ವೀರೇಶ್ ಅವರು ತಾಳ್ಮೆಯ ಆಟ ಪ್ರದರ್ಶಿಸಿ 25 ರನ್ ಗಳಿಸಿದರು. ಪತ್ರಕರ್ತ ಸಿದ್ಧಯ್ಯ ಹಿರೇಮಠ್ 12, ಬಸವರಾಜ ಹರನಹಳ್ಳಿ 11 ರನ್ ಗಳಿಸಿದರು. ಉಳಿದ ಆಟಗಾರರು ಹೆಚ್ಚಿನ ರನ್ ಕಲೆ ಹಾಕುವಲ್ಲಿ ವಿಫಲವಾಗಿದ್ದು, ಮಾಧ್ಯಮ ತಂಡ 12 ಓವರ್ಗಳಿಗೆ 8 ವಿಕೆಟ್ ರನ್ ಗಳಿಸಿ 65 ರನ್ ಗಳಿಸುವಲ್ಲಿ ಶಕ್ತವಾಯಿತು.
ಪೊಲೀಸ್ ಅಧಿಕಾರಿಗಳ ತಂಡದ ಪರವಾಗಿ ಹೆಚ್ಚುವರಿ ಎಸ್ಪಿ ಸಿ.ಕೆ. ಬಾಬಾ 1, ವಿಷ್ಣು 1, ಯೋಗೇಶ್ 2, ರಫೀಕ್ 1, ಆರ್ಪಿಐ ಪ್ರಕಾಶ್ 1 ವಿಕೆಟ್ ಪಡೆದರು. 66 ರನ್ಗಳ ಟಾರ್ಗೆಟ್ ಪಡೆದ ಪೊಲೀಸ್ ತಂಡವು ಆರಂಭದಲ್ಲಿ ಆಘಾತ ಕಂಡಿತು. ಪೊಲೀಸ್ ಅಧಿಕಾರಿಗಳಾದ ಸಿ.ಕೆ. ಬಾಬು, ನಾಗರಾಜ್, ರಫೀಕ್, ಚಿದಾನಂದ್, ಹಾಲೇಶ್, ಪ್ರಕಾಶ್, ಶ್ರೀನಿವಾಸ್ ಗೆಲುವಿಗೆ ಪ್ರಯತ್ನಿಸಿದರು, ಅಂತಿಮ ಓವರ್ನಲ್ಲಿ 6 ಎಸೆತಗಳಿಗೆ 10 ರನ್ಗಳು ಬಾಕಿ ಇದ್ದು, ಆದರೆ, ಕೊನೆಯ ಓವರ್ನಲ್ಲಿ ಕೇವಲ 6 ರನ್ಗಳನ್ನು ಗಳಿಸುವಲ್ಲಿ ಪೊಲೀಸ್ ತಂಡ ಯಶಸ್ವಿಯಾಯಿತು.
ಮಾಧ್ಯಮದ ತಂಡದ ಶಶಿಧರ ಮೇಟಿ 3 ವಿಕೆಟ್, ವೀರೇಶ್ 2 ವಿಕೆಟ್, ಮಧು 2, ನೂರ್ 2, ರಮೇಶ್ 1 ವಿಕೆಟ್ ಪಡೆಯುವ ಮೂಲಕ ಪೊಲೀಸ್ ತಂಡವನ್ನು 62 ರನ್ಗಳಿಗೆ ಕಟ್ಟಿ ಹಾಕುವ ಮೂಲಕ ಮಾಧ್ಯಮದ ತಂಡ ಜಯಗಳಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

