ಬಳ್ಳಾರಿ

ಪುರಸಭೆಗೆ ಆಶಾಲತಾ ಅಧ್ಯಕ್ಷೆ

Published On :

ಸಂಡೂರು: ಪುರಸಭೆಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಶಾಲತಾ ಸೋಮಪ್ಪ, ಸುಮಿತ್ರಮ್ಮ ಹೊಳಗುಂದಿ ಆಯ್ಕೆಯಾದರು. ಕುತೂಹಲ ಕೆರಳಿಸಿದ್ದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ನಿರೀಕ್ಷೆಯಂತೆ ಅಧ್ಯಕ್ಷರಾಗಿ ಆಶಾಲತಾ ಸೋಮಪ್ಪ ಅವಿರೋಧ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸುಮಿತ್ರಮ್ಮ ಹೊಳಗುಂದಿ 14 ಮತಗಳನ್ನು ಪಡೆಯುವ ಮೂಲಕ ನೇರ ಸ್ಪರ್ಧಿ ಬಿಎಸ್ಸಾರ್‌ನ ಕಾವೇರಿ ಶ್ರೀನಿವಾಸ್ ಅವರನ್ನು 5 ಮತಗಳ ಅಂತರದಿಂದ ಸೋಲಿಸಿ ವಿಜಯಿಶಾಲಿಯಾದರು. ಶಾಸಕ ಈ. ತುಕಾರಾಂ, ಪುರಸಭೆ ಮಾಜಿ ಅಧ್ಯಕ್ಷ ಡಿ. ಕೃಷ್ಣಪ್ಪ, ಎಲ್.ಎಚ್. ಶಿವಕುಮಾರ್, ಜಿಪಂ ಸದಸ್ಯರಾದ ಲತಾ ಚಂದ್ರಶೇಖರ್, ಲಕ್ಮಣ್, ಪುಷ್ಪಾ ಶಿವಮೂರ್ತಿ, ಮುಖಂಡ ಜಿ.ಟಿ. ಪಂಪಾಪತಿ, ತಾಪಂ ಅಧ್ಯಕ್ಷೆ ಭರಮಕ್ಕ ಜುಮ್ಮಪ್ಪ, ಉಪಾಧ್ಯಕ್ಷ ಉಜ್ಜನಗೌಡ, ಬಂಡ್ರಿ ರವಿಕುಮಾರ್ ಇದ್ದರು. ಎಸಿ ಅನಿರುದ್ಧ ಶ್ರವಣ್ ಚುನಾವಣೆ ಕಾರ್ಯ ನಿರ್ವಹಿಸಿದ್ದರು. ತಹಸೀಲ್ದಾರ್ ತಿಮ್ಮಯ್ಯ, ಅಧಿಕಾರಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.