ಬಳ್ಳಾರಿ

ಬಿಜೆಪಿಗರಿಂದ ವಂಚನೆ: ಬಸವರಾಜು

Published On :

ಕಂಪ್ಲಿ: ಜನರನ್ನು ವಂಚಿಸುವಲ್ಲಿ ಬಿಜೆಪಿಗರು ಸಿದ್ದಹಸ್ತರು ಎಂದು ಮಾಜಿ ಶಾಸಕ ಎಚ್.ಡಿ. ಬಸವರಾಜು ಆರೋಪಿಸಿದರು.
ಇಲ್ಲಿನ ಕೋಟೆಯ ಕಾಂಗ್ರೆಸ್ ಮುಖಂಡ ಮಹಂತಿನ ಮಠದ ರಾಜೇಂದ್ರಕುಮಾರ ಸ್ವಾಮಿಯವರ ನಿವಾಸದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಮೋದಿ ಜನಪ್ರಿಯತೆ ಕುಗ್ಗಿದ್ದು, ಮೋದಿಯಿಂದ ಗುಜರಾತ್ ಅಭಿವೃದ್ಧಿಯಾಗಿಲ್ಲ, ಬದಲಿಗೆ ಗುಜರಾತ್ ಮೂಲತಃ ಕೈಗಾರಿಕೆ ನೆಲೆ ಮತ್ತು ಶ್ರೀಮಂತ ಉದ್ದಿಮೆಗಳನ್ನೊಂದಿದ್ದು ಸಹಜವಾಗಿ ಶ್ರೀಮಂತಿಕೆಯಿಂದ ಕೂಡಿದೆ ಹೊರತು ಮೋದಿಯಿಂದಲ್ಲ. ಮೋದಿ ಕುರಿತು ಬಿಜೆಪಿ ಮುಖಂಡರು ತಪ್ಪು ಹೇಳಿಕೆಗಳನ್ನು ಹೇಳುತ್ತ ಜನರನ್ನು ವಂಚಿಸುತ್ತಿದ್ದಾರೆ. ನೈಜ ಸ್ಥಿತಿ ಜನರಿಗೆ ತಿಳಿಸುವಲ್ಲಿ ಮುಂದಾಗಬೇಕು. ಮತದಾರರಿಗೆ ವಾಸ್ತವತೆ ಅರ್ಥಮಾಡಿಕೊಡಲು ಕಾಂಗ್ರೆಸ್ಸಿಗರು ಮುಂದಾಗಬೇಕು. ಬಿ.ಎಸ್. ಯಡಿಯೂರಪ್ಪರಿಂದ ನನ್ನ ಆತ್ಮಗೌರವಕ್ಕೆ ಚ್ಯುತಿ ಬಂದಿದ್ದರಿಂದ ಕೆಜೆಪಿ ಬಿಟ್ಟು ಕಾಂಗ್ರೆಸ್ ಸೇರಬೇಕಾಯಿತು ಎಂದರು.
ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಂ. ಸುಧೀರ್, ಪುರಸಭೆ ಸದಸ್ಯರಾದ ಸಿ.ಆರ್. ಹನುಮಂತ, ಎಸ್. ಸುರೇಶ, ಬಿ. ಪ್ರಸಾದ್, ಡಾ. ವಿ.ಎಲ್. ಬಾಬು, ಮುಖಂಡರಾದ ಎಂ. ರಾಜೇಂದ್ರಕುಮಾರಸ್ವಾಮಿ, ಎಮ್ಮಿಗನೂರು ಸದಾಶಿವಪ್ಪ, ಕೆ. ಮನೋಹರ, ಸೈಯ್ಯದ್ ಉಸ್ಮಾನ್, ಎನ್. ಹಬೀಬ್ ರೆಹಮಾನ್, ಕಟ್ಟೆ ಅಯ್ಯಪ್ಪ, ಮರಿಬಸಪ್ಪ, ಎ. ರೇಣುಕಪ್ಪ, ಜಾಫರ್, ಬಿ. ಬಸಪ್ಪ, ಎನ್. ತಿಮ್ಮಪ್ಪ, ಗಾಳಿಕುಮಾರ, ರಾಮಣ್ಣ, ಪಾಂಡುರಂಗ, ವೆಂಕನಗೌಡ, ಬೂದಗುಂಪಿ ಹುಸೇನ್ ಸಾಬ್, ಕಾರ್ಯಕರ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.