ಕೈ ತೊಲಗಿಸದಿದ್ರೆ ದೇಶಕ್ಕೆ ನಷ್ಟ
ಹಗರಿಬೊಮ್ಮನಹಳ್ಳಿ: ಕೇಂದ್ರದಿಂದ ಈ ಬಾರಿ ಕಾಂಗ್ರೆಸ್ ಹೊಡೆದೋಡಿಸದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ. ವ್ಯಾಪಕ ಭ್ರಷ್ಟಾಚಾರ, ಅವ್ಯವಹಾರದಲ್ಲಿ ಭಾಗಿಯಾಗಿರುವ ಇಂಥ ಸರ್ಕಾರದಿಂದ ರಾಷ್ಟ್ರದ ಭವಿಷ್ಯವೇ ಮಸುಕಾಗಿ ಹೋಗಿದೆ. ರಾಷ್ಟ್ರದ ಉತ್ತಮ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ನೀಡುವಂತೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಮತದಾರರಲ್ಲಿ ಮನವಿ ಮಾಡಿದರು.
ಶನಿವಾರ ಮಧ್ಯಾಹ್ನ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಹಗರಿಬೊಮ್ಮನಹಳ್ಳಿ ತಾಲೂಕಿನ ಗಡಿ ಗ್ರಾಮ ಹಂಪಾಸಾಗರದಲ್ಲಿ ಉರಿಬಿಸಿಲಿನಲ್ಲಿಯೇ ಪ್ರಚಾರ ಸಭೆಯನ್ನುದ್ದೇಶಿ ಮಾತನಾಡಿದ ರಾಮುಲು, ಶ್ರೀರಾಮುಲುಗಾಗಿ ಅಲ್ಲದಿದ್ದರೂ ಈ ರಾಷ್ಟ್ರವನ್ನು ಸಮರ್ಥವಾಗಿ ಮುನ್ನಡೆಸುವಂತಹ ಧೀರ ಸೇನಾನಿ ನರೇಂದ್ರ ಮೋದಿಗಾಗಿ ಆದರೂ ನೀವು ಈ ಸಲ ಬಿಜೆಪಿಯನ್ನು ಬೆಂಬಲಿಸಬೇಕೆಂದರು.
30 ವರ್ಷಗಳಿಂದಲೂ ಜನಸಮುದಾಯದ ಮಧ್ಯೆ ಇದ್ದುಕೊಂಡು ಅಧಿಕಾರ ಬರಲಿ, ಹೋಗಲಿ, ಇಲ್ಲದೇ ಇರಲಿ ಜನಪರ ಕಾರ್ಯಗಳಿಗೆ ಸ್ಪಂದಿಸುತ್ತಾ ಹಗಲುರಾತ್ರಿ ಜನಸೇವೆ ಮಾಡುತ್ತ ಬರುತ್ತಿರುವೆ. ದೇಶವನ್ನು ಕಾಂಗ್ರೆಸ್ ದುರಾಡಳಿತದಿಂದ ಪಾರುಮಾಡಲು ಹಾಗೂ ಇಂತಹ ಕಾರ್ಯ ಮಾಡಲು ನರೇಂದ್ರ ಮೋದಿ ಅವರ ಕೈಬಲಪಡಿಸುವ ಸಲುವಾಗಿಯೇ ನಾನು ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಚುನಾವಣೆಗೆ ಸ್ಪರ್ಧಿಸಿದ್ದೇನೆ. ನೀವು ಕೂಡ ಈ ಸಲ ಮೋದಿ ಅವರನ್ನು ಬೆಂಬಲಿಸಿ ಎಂದರು.
ವ್ಯಾಪಕ ಪ್ರಚಾರ: ಶನಿವಾರ ಮಧ್ಯಾಹ್ನದಿಂದಲೇ ಉರಿಬಿಸಿಲನ್ನು ಲೆಕ್ಕಿಸದೆ ವ್ಯಾಪಕ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡ ಶ್ರೀರಾಮುಲು, ತಾಲೂಕಿನ ಬನ್ನಿಕಲ್ಲು, ಸಾಲ್ಮೂರಳ್ಳಿ, ಹಂಪಾಸಾಗರ-1,2,3 ಕಾಲೋನಿಗಳಲ್ಲಿ, ಏಣಿಗಿ ಬಸಾಪುರ ಕ್ರಾಸ್, ಕೊಂಡೇನಹಳ್ಳಿ, ಗದ್ದಿಕೇರಿ, ಮೋರಗೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ತಮ್ಮ ಬೆಂಬಲಿಗರ ಜತೆಯಲ್ಲಿ ವ್ಯಾಪಕ ಪ್ರಚಾರ ಕಾರ್ಯಮಾಡಿ ಮತ ಯಾಚಿಸಿದರು.
ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಮಾಜಿ ಶಾಸಕರಾದ ಕೆ. ನೇಮಿರಾಜನಾಯ್ಕ, ಚಂದ್ರನಾಯ್ಕ, ಮುಖಂಡರಾದ ಹೇಮಂತಕುಮಾರ ಭಾರತಿ, ಮಧು ನಾಯ್ಕ, ಬಿರಬ್ಬಿ ಬಸವರಾಜ, ನರೇಗಲ್ ಕೊ ಟ್ರೇಶ್, ಗದ್ದಿಕೇರಿ ಗಿರಿರಾಜರೆಡ್ಡಿ, ಎಪಿಎಂಸಿ ಸದಸ್ಯ ನೀಲಗಾರ ಚಂದ್ರಪ್ಪ, ಸ್ಥಳೀಯ ಮುಖಂಡರಾದ ಗಂಗಣ್ಣ, ವೆಂಕಟೇಶ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

