ಅಂಧಕಾರ ಮುಕ್ತಿಯಿಂದ ಬಾಳು ಬೆಳಕು
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮೇ 1
ನಮ್ಮೊಳಗಿನ ಅಂಧಕಾರ, ಅಹಂಕಾರವನ್ನು ಕಳೆದು ಬದುಕಿನಲ್ಲಿ ಸಾಕ್ಷಾತ್ಕಾರದ ಬೆಳಕು ಕಾಣಬೇಕೆಂದು ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಶಿವಶಾಂತವೀರ ಸಮುದಾಯ ಭವನದಲ್ಲಿ ಶ್ರೀಗುರುದೇವ ಸೇವಾ ಬಳಗವನ್ನು ಉದ್ಘಾಟಿಸಿ ಮಾತನಾಡಿ, ಸೋಹಂ ಎನಿಸದೇ ದಾಸೋಹಂ ಎನಿಸಯ್ಯ ಎಂಬ ಶರಣರ ನುಡಿಯಂತೆ, ನಾನೆಂಬ ಅಹಂ ತ್ಯಜಿಸಿದರೆ ಅಲ್ಪ ಸೇವೆಯನ್ನಾದರೂ ಭಗವಂತನಿಗೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದರು.
ಮನುಷ್ಯ ಉತ್ತಮ ಬದುಕು ಕಟ್ಟಿಕೊಳ್ಳಲು ಸಂಸ್ಕಾರ ಮುಖ್ಯವಾಗಿದೆ. ರಾಗ ದ್ವೇಷಗಳನ್ನು ಕಿತ್ತು ಹಾಕಿ ಇತರರನ್ನು ಪ್ರೀತಿಯಿಂದ ಕಾಣುತ್ತಾ ಹೋದರೆ ಬದುಕು ಅರ್ಥಪೂರ್ಣವಾಗುತ್ತದೆ. ಪರೋಪಕಾರಿ ಗುಣಗಳನ್ನು ಬೆಳೆಸಿಕೊಂಡು, ಆತ್ಮಶುದ್ಧಿಯಿಂದ ಸೇವಾಬಳಗದ ಕಾರ್ಯದಲ್ಲಿ ಭಾಗವಹಿಸಬೇಕು ಎಂದರು.
ಗವಿಮಠದ ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ಭಾರತ ಸಾಧು, ಸಂತ, ಶರಣರು ನಡೆದಾಡಿದ ಪುಣ್ಯ ಭೂಮಿ. ಈ ನೆಲದಲ್ಲಿ ಅಧ್ಯಾತ್ಮಿಕ ಅಲೆ ಇರುವವರೆಗೂ ಪ್ರಳಯ ಆಗಲಾರದು. ಅಧ್ಯಾತ್ಮಿಕ ಚಿಂತನೆಯಿಂದ ಮನೋವಿಕಾರಗಳು ದೂರವಾಗಿ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದರು.
ನಿವೃತ್ತ ಪ್ರಾ. ಟಿ.ಪರಮೇಶ್ವರಪ್ಪ, ಭಂಟ್ವಾಳದ ಪತ್ರಕರ್ತ ಜಯರಾಂ ರೈ ಮಾತನಾಡಿದರು. ಒಡಿಯೂರಿನ ಮಾತಾನಂದಮಯಿ ಉಪಸ್ಥಿತರಿದ್ದರು. ಸುಕನ್ಯಾ ಶಿವಕಾಳಿಮಠ ಪ್ರಾರ್ಥಿಸಿದರು. ಗುರುದೇವ ಸೇವಾ ಬಳಗದ ಅಧ್ಯಕ್ಷ ಕೃಷ್ಣಪ್ಪ ಸ್ವಾಗತಿಸಿದರು. ಬಿ.ಪಿ. ರಾಜನಾಳ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ತೇರು ಹನುಮಪ್ಪ ದೇವಸ್ಥಾನದಿಂದ ಸಮುದಾಯ ಭವನದವರೆಗೆ ಮಹಿಳೆಯರು ಪೂರ್ಣಕುಂಭ ಮೆರವಣಿಗೆ ಮೂಲಕ ಶ್ರೀಗಳಿಗೆ ಭವ್ಯ ಸ್ವಾಗತ ನೀಡಲಾಯಿತು. ಗುರುದೇವ ಸೇವಾ ಬಳಗದ ಎಂ.ಜಿ. ನೀಲಕಂಠಪ್ಪ, ಸಿದ್ಧೇಶ್, ಟಿ.ಮಹಾಂತೇಶ್, ಬಾರಿಕರ ರವಿಕುಮಾರ್ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

