ಶಿಕ್ಷಣದಿಂದ ರಕ್ಕಸ ಬುದ್ಧಿ ಮಾಯ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮೇ 9
ಬದುಕು ನಾನಾ ಕಲೆಯನ್ನು ಪರಿಚಯಿಸಿದ್ದು, ಮಾನವನ ರಕ್ಕಸ ಬುದ್ಧಿಯನ್ನು ಕಳೆಯುವ ಶಕ್ತಿ ಶಿಕ್ಷಣಕ್ಕೆ ಇದೆ ಎಂದು ಜಿಬಿಆರ್ ಕಾಲೇಜು ಉಪನ್ಯಾಸಕ ಶಾಂತಮೂರ್ತಿ ಬಿ. ಕುಲಕರ್ಣಿ ಹೇಳಿದರು.
ಪಟ್ಟಣದ ಮಲ್ಲಿಗೆ ಶಾಲಾ ಆವರಣದಲ್ಲಿ ನಾಡೋಜ ಎಚ್.ಎಲ್. ನಾಗೇಗೌಡರ ಜನ್ಮ ಶತಮಾನೋತ್ಸವ ಸ್ಮರಣಾರ್ಥವಾಗಿ ಕರ್ನಾಟಕ ಜಾನಪದ ಪರಿಷತ್ ಹೂವಿನಹಡಗಲಿ ಘಟಕ ಹಾಗೂ ಮಲ್ಲಿಗೆ ಕಲಾಸಂಸ್ಥೆ ಸಹಯೋಗದಲ್ಲಿ ಬೇಸಿಗೆ ಸಾಂಸ್ಕೃತಿಕ ತರಬೇತಿ ಶಿಬಿರದ ಅರಳು ಮಲ್ಲಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಾಲೆಯಲ್ಲಿ ಕಲಿಕೆ ಬಿಟ್ಟು, ಮಕ್ಕಳ ಮನಸ್ಸಿನಲ್ಲಿ ಅನೇಕ ಆಸಕ್ತಿಗಳಿವೆ. ಅಂತಹ ಪ್ರತಿಭೆಗಳು ಹೊರ ಬರಲು ಈ ರೀತಿಯ ಶಿಬಿರಗಳು ಸಹಕಾರಿಯಾಗುತ್ತವೆ ಎಂದರು.
ಸಂಸ್ಕೃತಿ, ಕಲೆಯನ್ನು ಅಭಿವ್ಯಕ್ತಿಗೊಳಿಸುವ ಮೂಲಕ ಅವರ ವ್ಯಕ್ತಿತ್ವ ವಿಕಸನಗೊಳಿಸಲು ಶಿಬಿರಗಳಲ್ಲಿ ಸಾಧ್ಯವಾಗಿದ್ದು, ಹೂವಿನಹಡಗಲಿ ಮಾಜಿ ಡಿಸಿಎಂ ಎಂ. ಪ್ರಕಾಶರವರು ರಂಗಭಾರತಿ ಕಲಾ ಸಂಸ್ಥೆಯ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಂಸ್ಕೃತಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಗ್ರಾಮೀಣ ಕಲೆ, ಸಾಹಿತ್ಯ, ರಂಗಭೂಮಿ ಕ್ಷೇತ್ರಗಳಿಗೆ ಆಧುನಿಕ ಸ್ಪರ್ಶ ನೀಡಿದ್ದಾರೆ. ಆದ್ದರಿಂದ ಮಕ್ಕಳ ಭವಿಷ್ಯತ್ತಿನ ಬದುಕಿಗೆ ಈ ಶಿಬಿರಗಳು ಸಹಕಾರಿಯಾಗಿದ್ದು, ಬೇಸಿಗೆ ಶಿಬಿರದಲ್ಲಿ ಒಂದು ವಾರ ಕಲಿತ ಕಲೆ ಎಲ್ಲರ ಬಾಳಿನ ಬೆಳಕಾಗಲಿ ಎಂದು ಶುಭ ಹಾರೈಸಿದರು.
ಜಾನಪದ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಡಾ. ಸತೀಶ ಮಾತನಾಡಿ, ಶಿಕ್ಷಣದಲ್ಲಿ ಬೇರೆ ಬೇರೆ ಪ್ರಕಾರಗಳಿದ್ದು, ವಿದ್ಯಾರ್ಥಿಗಳ ಮನೋಇಚ್ಛೆ ಅನುಗುಣವಾಗಿ, ಪಠ್ಯೇತರ ಚಟುವಟಿಕೆಗಳ ಮೂಲಕ ವಾರದಲ್ಲಿ ಕಲಿತ ಕಲೆಯನ್ನು ಶಿಬಿರದಲ್ಲಿ ಅರಿಯಬೇಕಾಗಿದೆ.
ತರಬೇತಿ ಶಿಬಿರದ ಪ್ರಧಾನ ಸಂಚಾಲಕ ಎ. ಕಾಳಪ್ಪ ಮಾತನಾಡಿ, ಈ ಶಿಬಿರವು ಮಕ್ಕಳಿಗೆ ಸ್ವಚ್ಛತೆ, ಶಿಸ್ತು ಮತ್ತು ಪ್ರತಿಭೆ ಅನಾವರಣಗೊಳಿಸುವ ವೇದಿಕೆಯಾಗಿದ್ದು, ಕಲಿಕೆ ಎನ್ನುವುದು ನಿರಂತರ, ಶಿಬಿರಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡು ಶಿಬಿರದ ಯಶಸ್ವಿಗೆ ಕಾರಣರಾಗಬೇಕೆಂದರು.
ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಲ್.ಖಾದರಬಾಷ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಪ್ರಶಸ್ತಿ ವಿಜೇತ ಜನಪದ ಕಲಾವಿದ ಜೊಗೇರ ಹುಚ್ಚಪ್ಪ ತತ್ವಪದ ಹಾಡಿದರು. ಮಲ್ಲಿಗೆ ಕಲಾ ಸಂಸ್ಥೆಯ ಅಧ್ಯಕ್ಷ ಎಚ್.ಎಂ.ಬೆಟ್ಟಯ್ಯ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಎಚ್. ಚಂದ್ರಪ್ಪ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ಪ್ರಾರ್ಥಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

