ಬಸ್ ನಿಲ್ದಾಣವೀಗ ಬ್ರೌಸಿಂಗ್ ಸೆಂಟರ್!
ಹೊಸಪೇಟೆ: ಪ್ರಯಾಣಿಕರಿಗೆ ಅನುಕೂಲ ಆಗಬೇಕಿದ್ದ ಬಸ್ ನಿಲ್ದಾಣ ಬ್ರೌಸಿಂಗ್ ಸೆಂಟರ್ ಆಗಿದ್ದು ಮಾತ್ರ ವಿಪರ್ಯಾಸ! ಹೊಸಪೇಟೆ ವಿಜಯನಗರ ಕಾಲೇಜು ಎದುರಿಗೆ ನಿರ್ಮಿಸಿದ ಸುಸಜ್ಜಿತ ಬಸ್ ತಂಗುದಾಣದಲ್ಲಿ ಕರ್ನಾಟಕ ಪ್ರೇಕ್ಷಣೀಯ ಸ್ಥಳಗಳ ಚಿತ್ರಗಳು, ವೈಫೈ, ರೇಡಿಯೋ ಇದೆ. ಇದರಿಂದಾಗಿ ಕಾಲೇಜು ವಿದ್ಯಾರ್ಥಿಗಳು ಇಂಟರ್‌ನೆಟ್ ಬ್ರೌಸಿಂಗ್‌ಗಾಗಿ ಇಲ್ಲಿ ಬಹಳಷ್ಟು ಸಮಯ ಕಳೆಯುತ್ತಿದ್ದಾರೆ. ಈ ಬಸ್ ತಂಗುದಾಣದ ತಾಂತ್ರಿಕ ವಿನ್ಯಾಸವನ್ನು ಎಂಜಿನಿಯರ್ ಎಂ.ಎಚ್.ಎಂ. ಶ್ರೀಪ್ರಕಾಶ್ ಮಾಡಿದ್ದಾರೆ. ವಿಜಯನಗರ ಕಾಲೇಜಿನ ಸುವರ್ಣ ಮಹೋತ್ಸವ ಸವಿನೆನಪಿಗಾಗಿ ಎಂ.ಎಚ್.ಎಂ. ಗುರುಶಂಕರಯ್ಯ ಸ್ಮರಣಾರ್ಥ ಅವರ ಮಕ್ಕಳಾದ ಎಂ.ಎಚ್.ಎಂ. ಜಂಬುನಾಥ, ಎಂ.ಎಚ್.ಎಂ. ಶ್ರೀಪ್ರಕಾಶ, ಎಂ.ಎಚ್.ಎಂ. ನಂಜುಂಡೇಶ್ವರ ನಿರ್ಮಿಸಿದ್ದಾರೆ. ಇವರು ವಿಜಯನಗರ ಕಾಲೇಜಿನ ಸುವರ್ಣ ನಿಧಿಗಾಗಿ ಬಡ ವಿದ್ಯಾರ್ಥಿಗಳ ಶುಲ್ಕದಲ್ಲಿ ರಿಯಾಯ್ತಿ ಪಾವತಿಸಲು ರು. 1 ಲಕ್ಷ ಠೇವಣಿ ಇಟ್ಟಿದ್ದಾರೆ. ನಗರದ ಖ್ಯಾತ ವಕೀಲರಾಗಿದ್ದ ಸಮಾಜಮುಖಿ ಎಂ.ಎಚ್.ಎಂ. ಗುರುಶಂಕರಯ್ಯ ವಿಜಯನಗರ ಕಾಲೇಜಿನ ಸಂಸ್ಥಾಪಕ ಸದಸ್ಯ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರ ಸ್ಮರಣಾರ್ಥ ಅವರ ಮಕ್ಕಳು ಸುಸಜ್ಜಿತ ನೂತನ ಬಸ್ ತಂಗುದಾಣ ನಿರ್ಮಿಸಿಕೊಟ್ಟಿದ್ದಾರೆ. ಆದರೆ, ಈ ಬಸ್ ತಂಗುದಾಣದಲ್ಲಿ ವಿದ್ಯಾರ್ಥಿಗಳು, ಪ್ರಯಾಣಿಕರು ಬಸ್‌ಗಾಗಿ ಕಾಯಬೇಕು. ಕೆಲವು ಪಡ್ಡೆ ಹುಡುಗರು ಇಡಿ ದಿನ ತಮ್ಮ ಮೊಬೈಲ್‌ನಲ್ಲಿ ಇಂಟರ್‌ನೆಟ್ ಬ್ರೌಸಿಂಗ್ ಮಾಡುತ್ತಿರುವಾಗ ಅಶ್ಲೀಲ ಪದಗಳ ಬಳಸುತ್ತಾ ಕಾಲ ಕಳೆಯುತ್ತಿದ್ದಾರೆ. ಇದು ಹಿರಿಯ ನಾಗರಿಕರಲ್ಲಿ ಅಸಮಾಧಾನ ಮೂಡಿಸಿದೆ. ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಮುಜುಗರ ಪಡುತ್ತಿದ್ದಾರೆ. ವಿದ್ಯಾರ್ಥಿಗಳು ಕೆಲಕಾಲ ಇಂಟರ್‌ನೆಟ್ ಬ್ರೌಸಿಂಗ್ ಮಾಡಿ ಮುಂದಿನ ಸಮಯವನ್ನು ವಿದ್ಯಾಭ್ಯಾಸಕ್ಕೆ ಮೀಸಲಿಡುವುದು ಉತ್ತಮ ಸಂಸ್ಕೃತಿ. ವಿದ್ಯಾರ್ಥಿಗಳು ಸುಸಂಸ್ಕೃತರಾಗಿ, ಪ್ರತಿಭಾವಂತರಾಗಿ ಬೆಳೆಯಬೇಕೆಂದು ಹಿರಿಯ ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

